ಕರ್ನಾಟಕ

karnataka

ETV Bharat / state

ಡಿಕೆಶಿ ಬಂಧನ ವಿರೋಧಿಸಿ 'ಕೈ' ಕಾರ್ಯಕರ್ತರಿಂದ ತಿಥಿ ಊಟ - kanakapura congress protest

ಡಿಕೆಶಿ ಬಂಧನದ ಹಿನ್ನೆಲೆ ಮೋದಿ ಮತ್ತು ಅಮಿತ್ ಷಾ ರ ಅಣುಕು ಸಮಾಧಿಗೆ ಹೂವಿನಿಂದ ಅಲಂಕಾರ ಮಾಡಿ ಎಡೆ ಇಟ್ಟು ತಿಥಿ ಊಟ ಮಾಡುವ ಮೂಲಕ ರಾಮನಗರ ಕಾಂಗ್ರೆಸ್ ಕಾರ್ಯಕರ್ತರು ವಿನೂತವಾಗಿ ಪ್ರತಿಭಟಿಸಿದ್ರು.

ಕಾಂಗ್ರೆಸ್​ ಕಾರ್ಯಕರ್ತರ ಪ್ರತಿಭಟನೆ

By

Published : Sep 5, 2019, 2:16 PM IST

ರಾಮನಗರ : ಮಾಜಿ ಸಚಿವ ಡಿ ಕೆ ಶಿವಕುಮಾರ ಬಂಧನದ ಹಿನ್ನೆಲೆ ನಿನ್ನೆಯಷ್ಟೇ ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಷಾ ಅಣಕು ಶವಯಾತ್ರೆ ನಡೆಸಿ ಆಕ್ರೋಶ ಹೊರಹಾಕಿದ್ದ ಕೈ ಕಾರ್ಯಕರ್ತರು, ಇಂದು ಪ್ರತಿಭಟನಾನಿರತರಿಗೆ ಊಟ‌ ಸರಬರಾಜು‌ ಮಾಡಿ‌ ತಿಥಿ ಊಟ ಮಾಡುವುದಾಗಿ ಹೇಳಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಡಿ ಕೆ ಶಿವಕುಮಾರ ಬಂಧನ ಹಿನ್ನಲೆ ಕೈ ಕಾರ್ಯಕರ್ತರಿಂದ ತಿಥಿ ಊಟ

ಡಿ ಕೆ ಶಿ ಬಂಧನ ಖಂಡಿಸಿ ಕಳೆದ ಎರಡು ದಿನಗಳಿಂದ ಕಾಂಗ್ರೆಸ್ ಕಾರ್ಯಕರ್ತರು ನಿರಂತರವಾಗಿ ಪ್ರತಿಭಟನೆ‌, ರಸ್ತೆ ತಡೆ ನಡೆಸುತ್ತಿದ್ದಾರೆ. ‌ಇಂದೂ ಕೂಡ ಕನಕಪುರದ ಚನ್ನಬಸಪ್ಪ ಸರ್ಕಲ್‌ನಲ್ಲಿ ಹೆದ್ದಾರಿ ತಡೆದು ಪ್ರತಿಭಟನೆ ತೀವ್ರಗೊಳಿಸಿದ್ದಾರೆ. ಕೇಶ ಮುಂಡನ ಮಾಡಿಸಿಕೊಂಡು ಮೋದಿ ಮತ್ತು ಅಮಿತ್ ಷಾ ರ ಅಣುಕು ಸಮಾಧಿಗೆ ಹೂವಿನಿಂದ ಅಲಂಕರಿಸಿ ಎಡೆ ಇಟ್ಟು ಬಾಯಿ ಬಡಿದುಕೊಂಡು ಪ್ರತಿಭಟನೆ ಮಾಡುತ್ತಿದ್ದಾರೆ.

ಟಯರ್ ಹಾಗೂ ರಸ್ತೆಯಲ್ಲಿ ಬೆಂಕಿ‌ಹಚ್ಚಿದರೆ ಮತ್ತು ಕಲ್ಲು‌ ತೂರಿದರೆ ಪ್ರಕರಣ ದಾಖಲಿಸುವುದಾಗಿ ಪೋಲೀಸರು ಎಚ್ಚರಿಕೆ‌ ನೀಡಿದ್ದರಿಂದ ರಸ್ತೆ ತಡೆ ಮುಂದುವರಿಸಿದ್ದಾರೆ.

ABOUT THE AUTHOR

...view details