ಕರ್ನಾಟಕ

karnataka

By

Published : Jul 16, 2021, 8:22 PM IST

ETV Bharat / state

ದೇವಸ್ಥಾನದಲ್ಲಿ ಹುಂಡಿಗಳನ್ನು ಭಕ್ತರಿಗೆ ಕಾಣುವ ಹಾಗೆ ಇಡಿ: ಕೋಟಾ ಶ್ರೀನಿವಾಸ ಪೂಜಾರಿ

ಜಿಲ್ಲೆಯಲ್ಲಿ 7ಎ ವರ್ಗಕ್ಕೆ ಸೇರಿದ ದೇವಸ್ಥಾನಗಳಿವೆ. ಇವುಗಳಲ್ಲೇ ಹೆಚ್ಚು ಐತಿಹಾಸಿಕ ಹಿನ್ನೆಲೆ ಹೊಂದಿರುವ ಶ್ರೀ ಅಪ್ರಮೇಯ ದೇವಸ್ಥಾನದಲ್ಲಿ ವಾರ್ಷಿಕವಾಗಿ 50 ಸಾವಿರ ಮಾತ್ರ ಆದಾಯ ಬರುತ್ತಿದೆ. ಈ ಬಗ್ಗೆ ಅಧಿಕಾರಿಗಳು ಗಮನ ನೀಡಬೇಕು ಎಂದರು.

ಪ್ರಗತಿ ಪರಿಶೀಲನಾ ಸಭೆ
ಪ್ರಗತಿ ಪರಿಶೀಲನಾ ಸಭೆ

ರಾಮನಗರ: ದೇವಸ್ಥಾನಕ್ಕೆ ಬರುವ ಭಕ್ತಾಧಿಗಳು ದೇವರಿಗೆ ಸಲ್ಲಿಸುವ ಕಾಣಿಕೆಯನ್ನು ಹುಂಡಿಗಳಲ್ಲಿ ಹಾಕಲು, ಹುಂಡಿಗಳನ್ನು ಭಕ್ತಾಧಿಗಳ ಗಮನಕ್ಕೆ ಬರುವ ರೀತಿ ಸಮರ್ಪಕವಾದ ಸ್ಥಳದಲ್ಲಿ ಇಡಬೇಕು. ಹುಂಡಿಗಳು ಭದ್ರವಾಗಿ ಇರಬೇಕು. ಈ ಕುರಿತಂತೆ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ತಹಶೀಲ್ದಾರ್ ದೇವಸ್ಥಾನದ ಒಳಭಾಗದಲ್ಲಿ ಪರಿಶೀಲನೆ ನಡೆಸಬೇಕು ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮತ್ತು ಹಿಂದೂ ಧಾರ್ಮಿಕ ದತ್ತಿ ಸಚಿವರಾದ ಕೋಟಾ ಶ್ರೀನಿವಾಸ ಪೂಜಾರಿ ತಿಳಿಸಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ 7ಎ ವರ್ಗಕ್ಕೆ ಸೇರಿದ ದೇವಸ್ಥಾನಗಳಿದ್ದು, ಅದರಲ್ಲಿ ಹೆಚ್ಚು ಐತಿಹಾಸಿಕ ಹಿನ್ನಲೆ ಹೊಂದಿರುವ ಶ್ರೀ ಅಪ್ರಮೇಯ ದೇವಸ್ಥಾನದಲ್ಲಿ ವಾರ್ಷಿಕವಾಗಿ 50 ಸಾವಿರ ಮಾತ್ರ ಆದಾಯ ಬರುತ್ತಿದೆ. ಈ ಬಗ್ಗೆ ಅಧಿಕಾರಿಗಳು ಗಮನ ನೀಡಬೇಕು ಎಂದರು.

ಸಪ್ತಪದಿ ಯೋಜನೆ: ಸರಳ ವಿವಾಹಕ್ಕೆ ಒತ್ತು ನೀಡಲು ಜಾರಿಗೊಳಿಸಿರುವ ಸಪ್ತಪದಿ ಯೋಜನೆಯಡಿ ಆಗಸ್ಟ್​​ನಿಂದ ಮತ್ತೆ ಪ್ರಾರಂಭವಾಗಲಿದೆ. ಈ ಯೋಜನೆಯಲ್ಲಿ ವಿವಾಹವಾಗುವ ವಧುವಿಗೆ 10 ಸಾವಿರ, ವರನಿಗೆ ಬಟ್ಟೆಗಾಗಿ 5 ಸಾವಿರ ಹಾಗೂ 8 ಗ್ರಾಂ ಚಿನ್ನದ ಗುಂಡು, ತಾಳಿಯನ್ನು ನೀಡಲಾಗುವುದು. ಕೋವಿಡ್ ನಿಯಮಗಳನ್ನು ಅನುಸರಿಸಿ 4 ಒಳ್ಳೆಯ ಮುಹೂರ್ತಗಳನ್ನು ನಿಗದಿಪಡಿಸಿ ಕಾರ್ಯಕ್ರಮವನ್ನು ಆಯೋಜಿಸಿ. ಸ್ಥಳೀಯವಾಗಿ ಮಂತ್ರಿಗಳು, ಚುನಾಯಿತ ಪ್ರತಿನಿಧಿಗಳನ್ನು ಕಾರ್ಯಕ್ರಮಕ್ಕೆ ಆಹ್ವಾನಿಸುವಂತೆ ತಿಳಿಸಿದರು.

ಆಸ್ತಿ ಸಂರಕ್ಷಣೆ: ಧಾರ್ಮಿಕ ದತ್ತಿ ಇಲಾಖೆಯಡಿ ಬರುವ ದೇವಸ್ಥಾನದ ಸುತ್ತ ಇರುವ ದೇವಸ್ಥಾನಕ್ಕೆ ಸೇರಿದ ಆಸ್ತಿಗಳು ಸಂರಕ್ಷಣೆಯಾಗಬೇಕು. ಸರ್ವೆ ನಡೆಸಿ ಒತ್ತುವರಿಯಿದ್ದಲ್ಲಿ ತೆರವುಗೊಳಿಸಬೇಕು. ಕಡುಬಡವರು ದೇವಸ್ಥಾನಕ್ಕೆ ಸೇರಿದ ಆಸ್ತಿಯಲ್ಲಿ ವಾಸ್ತವ್ಯ ಇದ್ದಲ್ಲಿ, ಈ ಕುರಿತಂತೆ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ಪರ್ಯಾಯ ವ್ಯವಸ್ಥೆ ಮಾಡಬೇಕು ಎಂದರು.

ಇದನ್ನೂ ಓದಿ : ಪ್ರಧಾನಿ ಭೇಟಿಯಾದ ಬಿಎಸ್​ವೈ: ರಾಜ್ಯದ ಅಭಿವೃದ್ಧಿ ಕಾರ್ಯಗಳಿಗೆ ಒಪ್ಪಿಗೆ ನೀಡಲು ಮನವಿ

ABOUT THE AUTHOR

...view details