ಕರ್ನಾಟಕ

karnataka

ETV Bharat / state

3 ದಿನದ ಹಿಂದೆ ಪತಿ ಕೊರೊನಾಗೆ ಬಲಿ: ನೊಂದು ಆತ್ಮಹತ್ಯೆಗೆ ಶರಣಾದ 3 ತಿಂಗಳ ಗರ್ಭಿಣಿ ಪತ್ನಿ - ರಾಮನಗರ ಸುದ್ದಿ,

ಪತಿಯ ಸಾವಿನ ನಂತರ ನಂದಿನಿ ಮಾನಸಿಕವಾಗಿ ನೊಂದಿದ್ದು ಅವರನ್ನು ತಾಯಿ ಮತ್ತು ತಂಗಿಯಂದಿರು ಬಸವೇಶ್ವರ ನಗರದ ಅವರ ಮನೆಯಲ್ಲಿ ನೋಡಿಕೊಳ್ಳುತ್ತಿದ್ದರು. ನಿನ್ನೆ ಮಧ್ಯಾಹ್ನ ಸುಮಾರು 1 ಗಂಟೆಗೆ ಕೆಲಸವಿದೆ ಎಂದು ಹೇಳಿ ನಂದಿನಿ ರೂಂಗೆ ಹೋಗಿದ್ದಾರೆ. ಬಳಿಕ ನಡೆದ ಘಟನೆ ಕುಟುಂಬವನ್ನು ಕಣ್ಣೀರಲ್ಲಿ ಕೈತೊಳೆಯುವಂತೆ ಮಾಡಿದೆ.

Pregnant lady committed suicide, Pregnant lady committed suicide in Ramnagar, Ramanagar news, Ramanagar crime news, ಗರ್ಭಿಣಿ ಮಹಿಳೆ ಆತ್ಮಹತ್ಯೆ, ರಾಮನಗರದಲ್ಲಿ ಗರ್ಭಿಣಿ ಮಹಿಳೆ ಆತ್ಮಹತ್ಯೆ, ರಾಮನಗರ ಸುದ್ದಿ, ರಾಮನಗರ ಅಪರಾಧ ಸುದ್ದಿ,
ಗಂಡನನ್ನೇ ನೆನೆದು ಆತ್ಮಹತ್ಯೆಗೆ ಶರಣಾದ 3 ತಿಂಗಳ ಗರ್ಭಿಣಿ

By

Published : May 21, 2021, 10:42 AM IST

Updated : May 21, 2021, 11:30 AM IST

ರಾಮನಗರ:ಪತಿಯ ಸಾವಿನಿಂದ ತೀವ್ರವಾಗಿ ಮನನೊಂದ ಗರ್ಭಿಣಿ ಪತ್ನಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕನಕಪುರದ ಬಸವೇಶ್ವರ ನಗರದಲ್ಲಿ ನಡೆದಿದೆ.

ಕನಕಪುರ ಬೆಸ್ಕಾಂ ವಿಭಾಗೀಯ ಕಚೇರಿಯಲ್ಲಿ ಸಹಾಯಕರಾಗಿದ್ದ ನಂದಿನಿ (28) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತಂದೆ ಶಾಂತಮಲ್ಲಪ್ಪ ಕೆಇಬಿಯಲ್ಲಿ ಲೈನ್‍ಮ್ಯಾನ್ ಆಗಿದ್ದು, ಕೆಲಸದಲ್ಲಿ ಇದ್ದಾಗಲೇ ಸಾವನ್ನಪ್ಪಿದ್ದರು. ಅನುಕಂಪದ ಆಧಾರದ ಮೇಲೆ ಮಗಳಿಗೆ ಮೂರು ವರ್ಷಗಳ ಹಿಂದೆ ಬೆಸ್ಕಾಂನಲ್ಲಿ ತಂದೆಯ ಕೆಲಸ ಸಿಕ್ಕಿತ್ತು.

ಎರಡು ವರ್ಷಗಳ ಹಿಂದೆ ಮೈಸೂರು ಮೂಲದ ಉದ್ಯಮಿ ಸತೀಶ್ ಎಂಬುವರನ್ನು ನಂದಿನಿ ಪ್ರೀತಿಸಿ ವಿವಾಹವಾಗಿದ್ದು, ಇಲ್ಲಿನ ಬಸವೇಶ್ವರ ನಗರದಲ್ಲಿ ಮನೆ ಮಾಡಿಕೊಂಡು ನೆಲೆಸಿದ್ದರು. ಸತೀಶ್ ಅವರ ತಾಯಿ ಮೈಸೂರಿನಲ್ಲಿ ನೆಲೆಸಿದ್ದಾರೆ. ಸತೀಶ್ ವ್ಯವಹಾರದ ಜತೆಗೆ ಕನಕಪುರ ಮತ್ತು ಮೈಸೂರಿಗೆ ಓಡಾಡಿಕೊಂಡಿದ್ದು, ನಂದಿನಿ ಮೂರು ತಿಂಗಳ ಗರ್ಭಿಣಿಯಾಗಿದ್ದರು.

ಕಳೆದ ವಾರವಷ್ಟೇ ಸತೀಶ್​ ಅವರ ತಾಯಿ ಕೊರೊನಾ ಸೋಂಕಿಗೆ ಬಲಿಯಾಗಿದ್ದರು. ಬಳಿಕ ಮಗನಿಗೂ ಕೊರೊನಾ ಸೋಂಕು ದೃಢಪಟ್ಟು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆಗೆ ಸ್ಪಂದಿಸದೆ ಮೂರು ದಿನಗಳ ಹಿಂದೆಯಷ್ಟೇ ಸತೀಶ್​ ಮೃತಪಟ್ಟಿದ್ದರು.

ಪತಿಯ ಸಾವಿನ ನಂತರ ನಂದಿನಿ ಮಾನಸಿಕವಾಗಿ ನೊಂದಿದ್ದು ಅವರನ್ನು ತಾಯಿ ಮತ್ತು ತಂಗಿಯಂದಿರು ಬಸವೇಶ್ವರ ನಗರದ ಅವರ ಮನೆಯಲ್ಲಿ ನೋಡಿಕೊಳ್ಳುತ್ತಿದ್ದರು. ನಿನ್ನೆ ಮಧ್ಯಾಹ್ನ ಸುಮಾರು 1 ಗಂಟೆಗೆ ಕೆಲಸವಿದೆ ಎಂದು ಹೇಳಿ ನಂದಿನಿ ರೂಂಗೆ ಹೋಗಿದ್ದಾರೆ. ಸಮಯ ಕಳೆದ್ರೂ ನಂದಿನಿ ಹೊರಗೆ ಬಂದಿಲ್ಲವೆಂದು ಆತಂಕಗೊಂಡ ತಾಯಿ ಮತ್ತು ತಂಗಿಯರು ರೂಂನೊಳಗೆ ಹೋಗಿ ನೋಡಿದಾಗ ಆಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು.

ಈ ಘಟನೆ ಕುರಿತು ಕನಕಪುರ ಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

Last Updated : May 21, 2021, 11:30 AM IST

ABOUT THE AUTHOR

...view details