ರಾಮನಗರ:ಮಾಜಿ ಉಪಮುಖ್ಯಮಂತ್ರಿಡಾ. ಜಿಪರಮೇಶ್ವರ್ ಆಪ್ತ ಸಹಾಯಕ ರಮೇಶ್ ಆತ್ಮಹತ್ಯೆ ಪ್ರಕರಣದ ತನಿಖೆಯನ್ನ ಜ್ಞಾನಭಾರತಿ ಠಾಣೆ ಪೊಲೀಸರು ಚುರುಕುಗೊಳಿಸಿದ್ದಾರೆ.
ಡಾ. ಜಿ ಪರಮೇಶ್ವರ್ ಪಿಎಂ ರಮೇಶ್ ಆತ್ಮಹತ್ಯೆ ಪ್ರಕರಣ.. ತನಿಖೆ ಚುರುಕುಗೊಳಿಸಿದ ಪೊಲೀಸರು.. - ರಮೇಶ್ ಬರೆದಿರುವ ಪತ್ರ
ಮಾಜಿ ಡಿಸಿಎಂ ಡಾ. ಜಿ ಪರಮೇಶ್ವರ್ ಆಪ್ತ ಸಹಾಯಕ ರಮೇಶ್ ಆತ್ಮಹತ್ಯೆ ಪ್ರಕರಣದ ತನಿಖೆಯನ್ನ ಜ್ಞಾನಭಾರತಿ ಠಾಣೆ ಪೊಲೀಸರು ಚುರುಕುಗೊಳಿಸಿದ್ದಾರೆ.

ಪರಮೇಶ್ವರ್ ಆಪ್ತ ಸಹಾಯಕ ರಮೇಶ್ ಆತ್ಮಹತ್ಯೆ
ತಾಲೂಕಿನ ಮೆಳೆಹಳ್ಳಿ ಗ್ರಾಮದ ಅವರ ಮನೆಗೆ ಜ್ಞಾನ ಭಾರತಿ ಠಾಣೆಯ ಪೊಲೀಸ್ ಪೇದೆ ಭೇಟಿ ನೀಡಿ ನೋಟಿಸ್ ಜಾರಿಗೊಳಿಸಿದ್ದಾರೆ.ನೋಟೀಸ್‌ನಲ್ಲಿ ರಮೇಶ್ ಸಹೋದರ ಸತೀಶ್ ನೀಡಿದ ದೂರಿನಂತೆ ಕ್ರಮಕ್ಕೆ ಮುಂದಾಗಿರುವ ಪೊಲೀಸರು ತನಿಖೆ ಸಂಬಂಧ ಮೃತ ರಮೇಶ್ ಕೈ ಬರವಣಿಗೆಯ ಬಗ್ಗೆ ಖಚಿತತೆಗಾಗಿ ದಾಖಲೆಯನ್ನು ಅಂದರೆ ರಮೇಶ್ ಬರೆದಿರುವ ಪತ್ರ ಅಥವಾ ಯಾವುದಾದರೂ ಬರವಣಿಗೆಯ ದಾಖಲೆ ನೀಡುವಂತೆ ನೋಟಿಸ್ ನೀಡಿದ್ದಾರೆ ಎನ್ನಲಾಗಿದೆ.
ಮಾಜಿ ಡಿಸಿಎಂ ಪರಮೇಶ್ವರ್ ಪಿಎಂ ರಮೇಶ್ ಆತ್ಮಹತ್ಯೆ ಕೇಸ್.. ಪೊಲೀಸರಿಂದ ತನಿಖೆ ಚುರುಕು