ರಾಮನಗರ: ಠಾಣೆಯಲ್ಲೇ ವಿಷ ಕುಡಿದು ವ್ಯಕ್ತಿಯೊಬ್ಬ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ರಾಮನಗರದ ಮಹಿಳಾ ಪೊಲೀಸ್ ಠಾಣೆಯಲ್ಲಿ ನಡೆದಿದ್ದು, ಪೊಲೀಸರ ಕಿರುಕುಳದಿಂದ ಹೀಗೆ ಮಾಡಿಕೊಂಡಿದ್ದಾನೆ ಎಂದು ಆರೋಪಿಸಲಾಗಿದೆ.
ಶಶಿಕುಮಾರ್ (26) ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ ಎನ್ನಲಾಗಿದೆ. ಗಂಡ-ಹೆಂಡತಿ ನಡುವಿನ ಕಲಹ ವಿಚಾರವಾಗಿ ಶಶಿಕುಮಾರ್ನನ್ನು ಠಾಣೆಗೆ ಕರಿಸಿದ್ದ ಪೊಲೀಸರು ವಿನಾ ಕಾರಣ ಆತನಿಗೆ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಲಾಗಿದೆ. ಅಲ್ಲದೆ ಪದೇ ಪದೇ ಠಾಣೆಗೆ ಕರಿಸಿದ್ದ ಪೊಲೀಸರ ವಿರುದ್ಧ ಅಸಮಾಧಾನಗೊಂಡಿದ್ದ ಶಶಿಕುಮಾರ್ ಇದೆಲ್ಲದರಿಂದ ಬೇಸತ್ತು ಠಾಣೆಯಲ್ಲೇ ವಿಷ ತೆಗೆದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ ಎನ್ನಲಾಗಿದೆ.