ರಾಮನಗರ:ನೂತನವಾಗಿ ನಿರ್ಮಿಸುತ್ತಿರುವ ಬೆಂಗಳೂರು, ಮೈಸೂರು ದಶಪಥ ರಾಷ್ಟ್ರೀಯ ಹೆದ್ದಾರಿಯ ಅವೈಜ್ಞಾನಿಕ ಕಾಮಗಾರಿಯಿಂದ ಜಮೀನು ಹಾಳಾಗಿದೆ ಎಂದು ಆರೋಪಿಸಿ ವಿಶೇಷ ಚೇತನ ಸಹೋದರರು ಪ್ರತಿಭಟನೆ ನಡೆಸಿದ್ದಾರೆ.
ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲೂಕಿನ ತಿಟ್ಟಮಾರನಹಳ್ಳಿ ಬಳಿ ಹೆದ್ದಾರಿ ಕಾಮಗಾರಿ ತಡೆದು ಪ್ರತಿಭಟನೆ ನಡೆಸಿದ್ದಾರೆ. ತಿಟ್ಟಮಾರನಹಳ್ಳಿಯ ಈ ವಿಶೇಷ ಚೇತನ ಸಹೋದರರಾದ ವೇಣುಗೋಪಾಲ್ ಹಾಗೂ ನವೀನ್ ಕುಮಾರ್ ಎಂಬುವವರಿಗೆ ಸೇರಿದ ಜಮೀನಿಗೆ ಇತ್ತೀಚೆಗೆ ಮಳೆ ನೀರು ಜಮೀನಿಗೆ ನುಗ್ಗಿ 50 ಕ್ಕೂ ಹೆಚ್ಚು ತೆಂಗಿನ ಮರಗಳು ನಾಶವಾಗಿದ್ದವು.
ರಾಮನಗರದಲ್ಲಿ ವಿಶೇಷಚೇತನ ಸಹೋದರರ ಪ್ರತಿಭಟನೆ ಅವೈಜ್ಞಾನಿಕ ಬೆಂಗಳೂರು ಮೈಸೂರು ಹೆದ್ದಾರಿಯಿಂದ ಮಳೆ ನೀರು ಜಮೀನಿಗೆ ನುಗ್ಗಿದೆ ಎಂದು ಈ ಸಹೋದರರು ಆರೋಪಿಸಿದ್ದಾರೆ. ಅಲ್ಲದೆ, ಈ ಬಗ್ಗೆ ಡಿಬಿಎಲ್ ಕಂಪನಿ ಹಾಗೂ ತಾಲೂಕು ಆಡಳಿತದ ಗಮನಕ್ಕೆ ತಂದರೂ ಅಧಿಕಾರಿಗಳು ಮಾತ್ರ ಕ್ಯಾರೆ ಎನ್ನುತ್ತಿಲ್ಲ ಬೇಸರ ವ್ಯಕ್ತಪಡಿಸಿದ್ದಾರೆ.
ಇದೀಗ ಪರಿಹಾರಕ್ಕಾಗಿ ಪ್ರತಿಭಟನೆ ಹಾದಿ ಹಿಡಿದ ವಿಶೇಷ ಚೇತನ ಸಹೋದರರು, ಈ ಕೂಡಲೇ ಬೆಳೆ ನಾಶದ ಪರಿಹಾರ ನೀಡಿ, ಜಮೀನು ಸರಿಪಡಿಸಿಕೊಡುವಂತೆ ಆಗ್ರಹಿಸಿದ್ದಾರೆ.
ಓದಿ:ಶಿವಮೊಗ್ಗ: ಗಣೇಶೋತ್ಸವ ವ್ಯವಸ್ಥಿತವಾಗಿ ನಡೆಸಲು ಸಕಲ ಸಿದ್ಧತೆ ಮಾಡಿಕೊಳ್ಳುವಂತೆ ಡಿಸಿ ಸೂಚನೆ