ಕರ್ನಾಟಕ

karnataka

ETV Bharat / state

ಕೊರೊನಾ ಹೆಚ್ಚಳ : ರೋಗ ನಿರೋಧಕ ಶಕ್ತಿ ವೃದ್ಧಿಸಲು ಆಯುರ್ವೇದ ಔಷಧಿ ಮೊರೆ - ಆಯುರ್ವೇದ ಔಷಧಿ

ಈ ಔಷಧಿಯಲ್ಲಿ ಹೆಚ್ಚಾಗಿ ರೋಗ ನಿರೋಧಕ ಶಕ್ತಿ ಇರುವುದರಿಂದ ಎಲ್ಲರೂ ಆರ್ಯುವೇದದಿಂದ ತಯಾರಾದ ವಸ್ತುಗಳನ್ನು ಹೆಚ್ಚಾಗಿ ಬಳಸಲು ಮುಂದಾಗುತ್ತಿದ್ದಾರೆ..

medicine
medicine

By

Published : Apr 25, 2021, 6:20 PM IST

Updated : Apr 25, 2021, 8:38 PM IST

ರಾಮನಗರ: ಕೊರೊನಾವನ್ನು ಸಂಪೂರ್ಣ ಹೊಡೆದೋಡಿಸಲು ಔಷಧಿ ಹುಡುಕುವ ಪ್ರಯತ್ನಗಳು ನಡೆಯುತ್ತಲೆ ಇವೆ. ಈ ವೈರಸ್​ ತಡೆಯಲು ಸ್ವಯಂ ಶಕ್ತಿ ವೃದ್ಧಿಸಲು ಜನ ಆಯುಷ್ ಇಲಾಖೆ ಮೊರೆ ಹೋಗುತ್ತಿದ್ದಾರೆ. ಆಯುಷ್ ಇಲಾಖೆ ಕೂಡ ಗ್ರಾಮೀಣ ಪ್ರದೇಶಗಳಿಗೆ ತೆರಳಿ ಈ ಬಗ್ಗೆ ಜಾಗೃತಿ ಮೂಡಿಸಿದೆ.

ಆಯುರ್ವೇದದ ಮೊರೆ ಹೋಗುತ್ತಿರುವ ಜನತೆ :ರೋಗ ನಿರೋಧಕ ಶಕ್ತಿ ಗುಣಗಳು ಹೆಚ್ಚಾಗಿರುವುದು ಆರ್ಯುವೇದ ಗಿಡಮೂಲಿಕೆ ಸಸ್ಯಗಳಲ್ಲಿ. ಹೀಗಾಗಿ, ಜನ ಇದರ ಮೊರೆ ಹೋಗುತ್ತಿದ್ದಾರೆ. ಅಲ್ಲದೇ ಕೊರೊನಾ ತಡೆಗಟ್ಟಲು ಸರ್ಕಾರ ಆಯುಷ್ ಇಲಾಖೆಯಿಂದ ಸಾಕಷ್ಟು ಪ್ರಯತ್ನ ನಡೆಸುತ್ತಿದೆ.

ರೋಗ ನಿರೋಧಕ ಶಕ್ತಿ ವೃದ್ಧಿಸಲು ಆಯುರ್ವೇದ ಔಷಧಿ ಮೊರೆ

ಅದರಂತೆ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಹಲವು ಔಷಧಿಗಳನ್ನ ಈಗಾಗಲೆ ಕೊರೊನಾ ವಾರಿಯರ್ಸ್‌ಗೆ ನೀಡಲಾಗುತ್ತಿದೆ. ರಾಮನಗರ ಜಿಲ್ಲಾ ಆಯುಷ್ ಇಲಾಖೆಯಿಂದ 10 ಸಾವಿರಕ್ಕೂ ಹೆಚ್ಚು ಕೊರೊನಾ ವಾರಿಯರ್ಸ್‌ ಹಾಗೂ ಸಾರ್ವಜನಿಕರಿಗೆ ಆಯುರ್ವೇದಿಕ್ ಔಷಧಿಗಳನ್ನ ನೀಡಲಾಗುತ್ತಿದೆ‌.

ಈ ಔಷಧಿಯಲ್ಲಿ ಹೆಚ್ಚಾಗಿ ರೋಗ ನಿರೋಧಕ ಶಕ್ತಿ ಇರುವುದರಿಂದ ಎಲ್ಲರೂ ಆರ್ಯುವೇದದಿಂದ ತಯಾರಾದ ವಸ್ತುಗಳನ್ನು ಹೆಚ್ಚಾಗಿ ಬಳಸಲು ಮುಂದಾಗುತ್ತಿದ್ದಾರೆ.

ರಾಮನಗರ ಜಿಲ್ಲೆಯಲ್ಲಿ ಕೊರೊನಾ ಅಬ್ಬರ ಹೆಚ್ಚಾಗುತ್ತಲೇ ಇದೆ. ಈಗಾಗಲೇ ಜಿಲ್ಲೆ 10 ಸಾವಿರಕ್ಕೂ ಹೆಚ್ಚು ಕೋವಿಡ್​ ಪಾಸಿಟಿವ್ ಪ್ರಕರಣಗಳು ಇವೆ.

ದಿನದಿಂದ ದಿನಕ್ಕೆ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಇದರಿಂದ ಜನರು ಹೆಚ್ಚಾಗಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವತ್ತ ಕ್ರಮ ಕೈಗೊಳ್ಳಬೇಕಿದೆ.

Last Updated : Apr 25, 2021, 8:38 PM IST

ABOUT THE AUTHOR

...view details