ರಾಮನಗರ: ಬಿಡದಿ ಬಳಿಯ ಮಂಚನಬೆಲೆ ಜಲಾಶಯದ ಹತ್ತಿರ ಸೇತುವೆ ಕುಸಿತವಾದ ಸ್ಥಳಕ್ಕೆ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಮಾಗಡಿ ತಾಲೂಕಿನ ಜಲಾಶಯದ ಸೇತುವೆ ಕುಸಿತದ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದ ಅವರು ಶೀಘ್ರದಲ್ಲೇ ಉತ್ತಮ ಸೇತುವೆ ನಿರ್ಮಾಣದ ಭರವಸೆ ನೀಡಿದರು.
ಮೈಸೂರು ಭಾಗದಲ್ಲಿ ಪಕ್ಷ ಬಲವರ್ಧನೆ: ಮೈಸೂರು ಭಾಗದ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಗಳ ಪಟ್ಟಿ ಪ್ರಕಟ ವಿಚಾರವಾಗಿ ಪ್ರತಿಕ್ರಿಯಿಸಿ, ಬಹುತೇಕ ಜಿಟಿಡಿ ಹೆಸರು ಫೈನಲ್ ಎಂಬ ಸುಳಿವು ನೀಡಿದರು. ಆದ್ರೆ ಯಾವುದೂ ಫೈನಲ್ ಆಗಿಲ್ಲ. ಟಿ.ನರಸೀಪುರ, ಪಿರಿಯಾಪಟ್ಟಣ, ನಮ್ಮ ಹಾಲಿ ಎಂ ಎಲ್ಎ ಇದ್ದಾರೆ. ಚಾಮುಂಡೇಶ್ವರಿಯಿಂದ ಜಿ ಟಿ ದೇವೇಗೌಡ ಇರ್ತಾರೆ ಎಂದರು.
ಹುಣಸೂರಲ್ಲಿ ಹರೀಶ್ ಗೌಡರನ್ನು ನಿಲ್ಲಿಸಬೇಕು ಎಂದು ನಿರ್ಣಯ ಆಗಿದೆ. ಹೆಚ್ ಡಿ ಕೋಟೆಯಲ್ಲಿ ಇಬ್ಬರಿದ್ದಾರೆ. ಇಬ್ಬರು ಒಮ್ಮತದಿಂದ ತೀರ್ಮಾನಕ್ಕೆ ಬರುವಂತೆ ತಿಳಿಸಿದ್ದೇನೆ. 15 ರಿಂದ 20 ದಿನಗಳ ಒಳಗೆ ಮಾಹಿತಿ ಪಡೆದು ಫೈನಲ್ ಮಾಡ್ತೇನೆ. ಉಳಿದ ಕ್ಷೇತ್ರಗಳ ಅಭ್ಯರ್ಥಿಗಳನ್ನು ಪಕ್ಷ ತೀರ್ಮಾನ ಮಾಡಲಿದೆ ಎಂದು ಹೇಳಿದರು.