ಕರ್ನಾಟಕ

karnataka

ETV Bharat / state

ಪಾದಯಾತ್ರೆ ಸ್ಥಳಕ್ಕೆ ಎಡಿಜಿಪಿ ಭೇಟಿ.. ಯಾತ್ರೆ ನಿಲ್ಲಿಸುವಂತೆ ಕೆಪಿಸಿಸಿಗೆ ಖಡಕ್​​​ ಎಚ್ಚರಿಕೆ ಕೊಟ್ಟ ಎಸ್​​​ಪಿ

ರಾಮನಗರ ಕಾಂಗ್ರೆಸ್ ಕಚೇರಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ಜಂಟಿ ಪತ್ರಿಕಾಗೋಷ್ಠಿ ನಡೆಸಲಾಗುತ್ತಿದೆ. ಯಾವುದೇ ಕಾರಣಕ್ಕೂ ಪಾದಯಾತ್ರೆ ನಿಲ್ಲಿಸುವ ಪ್ರಶ್ನೆಯೇ ಇಲ್ಲ ಎಂದು ಡಿ.ಕೆ. ಬ್ರದರ್ಸ್ ತಿಳಿಸಿದ್ದಾರೆ. ಇದೇ ವೇಳೆ ಪಾದಯಾತ್ರೆ ಸ್ಥಳಕ್ಕೆ ಎಡಿಜಿಪಿ ಪ್ರತಾಪ್​ ರೆಡ್ಡಿ ಹಾಗೂ ಎಸ್​​​ಪಿ ಗಿರೀಶ್ ಭೇಟಿ ನೀಡಿ ಪಾದಯಾತ್ರೆ ನಿಲ್ಲಿಸುವಂತೆ ಎಚ್ಚರಿಕೆ ಕೊಟ್ಟರು.

ramanagara
ಮೇಕೆದಾಟು

By

Published : Jan 13, 2022, 12:10 PM IST

ರಾಮನಗರ: ಮೇಕೆದಾಟು ಯೋಜನೆ ಜಾರಿಗಾಗಿ ಕಾಂಗ್ರೆಸ್​ ನಡೆಸುತ್ತಿರುವ ಪಾದಯಾತ್ರೆಯು 5 ನೇ ದಿನಕ್ಕೆ ಕಾಲಿಟ್ಟಿದೆ. ಸರ್ಕಾರ ಎಚ್ಚರಿಕೆ ಹಾಗೂ ಹೈಕೋರ್ಟ್​​​ನ ಅಭಿಪ್ರಾಯವನ್ನೂ ಮೀರಿ ಕಾಂಗ್ರೆಸ್​ ಪಾದಯಾತ್ರೆ ಮುಂದುವರೆದಿದೆ.

ನಿನ್ನೆ ಹೈಕೋರ್ಟ್​ ಹೇಳಿದರೆ ಪಾದಯಾತ್ರೆ ನಿಲ್ಲಿಸುವುದಾಗಿ ಹೇಳಿದ್ದ​​ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಮನಗರಕ್ಕೆ ಆಗಮಿಸಿ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದಾರೆ. ಸಿದ್ದರಾಮಯ್ಯ ಆಗಮಿಸುತ್ತಿದ್ದಂತೆ ಕಾರ್ಯಕರ್ತರು ಜಯಘೋಷ ಮೊಳಗಿಸಿದರು.

ರಾಮನಗರ ಕಾಂಗ್ರೆಸ್ ಕಚೇರಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ಜಂಟಿ ಪತ್ರಿಕಾಗೋಷ್ಠಿ ಕೂಡಾ ನಡೆಯಿತು ಯಾವುದೇ ಕಾರಣಕ್ಕೂ ಪಾದಯಾತ್ರೆ ನಿಲ್ಲಿಸುವ ಪ್ರಶ್ನೆಯೇ ಇಲ್ಲ ಎಂದು ಡಿ.ಕೆ. ಬ್ರದರ್ಸ್ ತಿಳಿಸಿದ್ದಾರೆ.

ಪಾದಯಾತ್ರೆ ಸ್ಥಳಕ್ಕೆ ಎಸ್​​​ಪಿ ಎಡಿಜಿಪಿ ಭೇಟಿ: ಎಚ್ಚರಿಕೆ

ಈ ನಡುವೆ ಪಾದಯಾತ್ರೆ ಸ್ಥಳಕ್ಕೆ ರಾಮನಗರ ಎಸ್​ಪಿ ಗಿರೀಶ್ ಹಾಗೂ ಎಡಿಜಿಪಿ ಪ್ರತಾಪ್​ ರೆಡ್ಡಿ ಭೇಟಿ ನೀಡಿ ಪಾದಯಾತ್ರೆ ಕೈ ಬಿಡುವಂತೆ ಮನವಿ ಮಾಡಿದರು. ಸರ್ಕಾರದ ಆದೇಶ ಹಾಗೂ ಹೈಕೋರ್ಟ್​ನ ಅಭಿಪ್ರಾಯಕ್ಕೆ ಮನ್ನಣೆ ನೀಡಿ ಪಾದಯಾತ್ರೆ ಕೈ ಬಿಡುವಂತೆ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯಗೆ ಮನವರಿಕೆ ಮಾಡಿಕೊಟ್ಟರು. ಇದೇ ವೇಳೆ, ಪಾದಯಾತ್ರೆ ಕೈ ಬಿಡದಿದ್ದರೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಪಾದಯಾತ್ರೆಯಲ್ಲಿ ಸಾವಿರಾರು ಜನ

ನಗರದ ಐಜೂರು ವೃತ್ತದಿಂದ ಪಾದಯಾತ್ರೆ ನಡೆಸಲು ಸಜ್ಜಾಗಿದ್ದು, ಈಗಾಗಲೇ ಸಾವಿರಾರು ಕಾರ್ಯಕರ್ತರು ಜಮಾಯಿಸಿದ್ದಾರೆ. ಪಾದಯಾತ್ರೆ ತಡೆಯುವಂತೆ ಸರ್ಕಾರದಿಂದ ಆದೇಶ ಹೊರಡಿಸಲಾಗಿದೆ‌. ನಗರದ ಐಜೂರು ವೃತ್ತದಲ್ಲಿ ಹೆಚ್ಚಿನ ಪೊಲೀಸರ ನಿಯೋಜನೆ ಮಾಡಲಾಗಿದೆ. 3 ಸಾವಿರಕ್ಕೂ ಹೆಚ್ಚು ಪೊಲೀಸರು ಈಗ ರಾಮನಗರದಲ್ಲಿ ಠಿಕಾಣಿ ಹೂಡಿದ್ದಾರೆ.

ಇದನ್ನೂ ಓದಿ:ಡಿಕೆಶಿ ಗುಂಡಾಗಿರಿ, ಉಢಾಪೆಗೆ ಸರ್ಕಾರ ಎಂದೂ ಜಗ್ಗಲ್ಲ: ಕಾಂಗ್ರೆಸ್​ ಪಾದಯಾತ್ರೆ ವಿರುದ್ಧ ಸಿಪಿವೈ ಆಕ್ರೋಶ

ABOUT THE AUTHOR

...view details