ರಾಮನಗರ: ಜಿಲ್ಲಾ ಕಾರಾಗೃಹಕ್ಕೆ ಶಿಫ್ಟ್ ಆಗಿರುವ ಬೆಂಗಳೂರಿನ ಪಾದರಾಯನಪುರದ ಗಲಭೆ ಆರೋಪಿಗಳ ಪೈಕಿ ಇಬ್ಬರಿಗೆ ಕೊರೊನಾ ಸೋಂಕು ತಗುಲಿರುವ ಹಿನ್ನೆಲೆ ಜಿಲ್ಲಾಧಿಕಾರಿ ಎಂ.ಎಸ್.ಅರ್ಚನಾ ತುರ್ತು ಸಭೆ ನಡೆಸಿದ್ದಾರೆ.
ಇಬ್ಬರಿಗೆ ಕೊರೊನಾ ಪಾಸಿಟಿವ್: ಪಾದರಾಯನಪುರದ ಪುಂಡರು ಮತ್ತೆ ಬೆಂಗಳೂರಿಗೆ ಶಿಫ್ಟ್! - ರಾಮನಗರ ಕಾರಾಗೃಹ
ರಾಮನಗರ ಕಾರಾಗೃಹದಲ್ಲಿರುವ ಪಾದರಾಯನಪುರದ ಗಲಭೆ ಆರೋಪಿಗಳನ್ನು ಶಿಫ್ಟ್ ಮಾಡಲು ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದೆ.
![ಇಬ್ಬರಿಗೆ ಕೊರೊನಾ ಪಾಸಿಟಿವ್: ಪಾದರಾಯನಪುರದ ಪುಂಡರು ಮತ್ತೆ ಬೆಂಗಳೂರಿಗೆ ಶಿಫ್ಟ್! casdsd](https://etvbharatimages.akamaized.net/etvbharat/prod-images/768-512-6919433-thumbnail-3x2-vish.jpg)
ಬೆಂಗಳೂರಿನಿಂದ ಶಿಫ್ಟ್ ಮಾಡುವ ಸಂಧರ್ಭದಲ್ಲಿ ಯಾರೆಲ್ಲಾ ಸಿಬ್ಬಂದಿ ಕರ್ತವ್ಯ ನಿರ್ವಹಿಸಿದ್ದರು ಎಂಬ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಿದ್ದಾರೆ. ಅಲ್ಲದೆ ಸ್ಥಳಾಂತರಕ್ಕೆ ಸಂಬಂಧಿಸಿದಂತೆ ಗೊಂದಲವಾಗಿದ್ದು, ಒಮ್ಮೆ ಸ್ಥಳಾಂತರಕ್ಕಾಗಿ ಆಗಮಿಸಿದ್ದ ಬಸ್ಗಳನ್ನು ಘಟಕಕ್ಕೆ ಮರಳುವಂತೆ ಸೂಚಿಸಲಾಗಿತ್ತು. ನಂತರ ಮತ್ತೆ 13 ಬಸ್ಗಳು ವಾಪಸ್ ಬರುವಂತೆ ಜಿಲ್ಲಾಡಳಿತ ಸೂಚಿಸಿದೆ. ಪೊಲೀಸರಿಗೂ ಸಹ ಫುಲ್ ಅಲರ್ಟ್ ಆಗಿರುವಂತೆ ಜಿಲ್ಲಾಡಳಿತ ಸೂಚಿಸಿದೆ.
ಅಲ್ಲದೆ ಮತ್ತೆ ಆರೋಪಿಗಳನ್ನು ಬೆಂಗಳೂರಿಗೆ ಶಿಫ್ಟ್ ಮಾಡಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಈ ನಡುವೆ ರಾಮನಗರದಲ್ಲಿ ಬೆಳ್ಳಂಬೆಳಿಗ್ಗೆಯೇ ಶುರುವಾದ ಮಳೆ ಕಿರಿಕಿರಿ ಉಂಟುಮಾಡಿದೆ. ಸಭೆಯಲ್ಲಿ ಜಿಲ್ಲಾಧಿಕಾರಿ ಎಸ್ಪಿ ಅನೂಪ್ ಶೆಟ್ಟಿ, ಎಡಿಸಿ ವಿಜಯ್, ಜಿಲ್ಲಾ ಆರೋಗ್ಯಾಧಿಕಾರಿ ಸೇರಿದಂತೆ ಜಿಲ್ಲಾಮಟ್ಟದ ಅಧಿಕಾರಿಗಳು ಭಾಗಿಯಾಗಿದ್ದರು.