ಕರ್ನಾಟಕ

karnataka

ETV Bharat / state

ಮಾಗಡಿಯಲ್ಲಿ ಭೀಕರ ಅಪಘಾತ: ಬಿಇ ವಿದ್ಯಾರ್ಥಿನಿ ಸಾವು, ಹಲವರ ಸ್ಥಿತಿ ಗಂಭೀರ - ಬೆಂಗಳೂರಿನ ಬಿಎಂಎಸ್ ಕಾಲೇಜಿನ ವಿದ್ಯಾರ್ಥಿಗಳು

ಬೆಂಗಳೂರಿನ ಬಿಎಂಎಸ್ ಕಾಲೇಜಿನ ವಿದ್ಯಾರ್ಥಿಗಳು ಎರಡು ಕಾರ್ ಗಳಲ್ಲಿ ಸಾವನದುರ್ಗ ಪ್ರವಾಸಕ್ಕೆ ಬಂದಿದ್ದು, ಮುಂಜಾನೆ 3.30ರ ಸುಮಾರಿಗೆ ಮಾಗಡಿ ಮಾರ್ಗವಾಗಿ ಬೆಂಗಳೂರಿಗೆ ವಾಪಸ್ ಆಗುತ್ತಿದ್ದರು. ಈ ವೇಳೆ ಕಾರು ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿದ್ದು, ಓರ್ವ ವಿದ್ಯಾರ್ಥಿನಿ ಮೃತಪಟ್ಟಿದ್ದಾಳೆ.

One died many injured in accident at Ramanagara
ಓರ್ವ ವಿದ್ಯಾರ್ಥಿನಿ ಸಾವು, ಹಲವರು ಗಂಭೀರ

By

Published : Nov 7, 2021, 1:29 PM IST

Updated : Nov 7, 2021, 3:24 PM IST

ರಾಮನಗರ: ಮಾಗಡಿ ತಾಲೂಕಿನ ಜೋಡುಗಟ್ಟೆ ಗೇಟ್ ಬಳಿ ಭೀಕರ ಅಪಘಾತ ಸಂಭವಿಸಿದ ಪರಿಣಾಮ ಓರ್ವ ವಿದ್ಯಾರ್ಥಿನಿ ಸಾವಿಗೀಡಾಗಿದ್ದು, ಏಳು ಮಂದಿ ಗಾಯಗೊಂಡಿದ್ದಾರೆ.

ಎಂಜಿನಿಯರಿಂಗ್ ವಿದ್ಯಾರ್ಥಿನಿ ಆಕಾಂಕ್ಷಾ ಗುಪ್ತಾ (26) ಮೃತಪಟ್ಟಿದ್ದು, ಏಳು ಮಂದಿ ಗಾಯಗೊಂಡಿದ್ದಾರೆ. ಬೆಂಗಳೂರಿನ ಬಿಎಂಎಸ್ ಕಾಲೇಜಿನ ವಿದ್ಯಾರ್ಥಿಗಳು ಎರಡು ಕಾರ್ ಗಳಲ್ಲಿ ಸಾವನದುರ್ಗ ಪ್ರವಾಸಕ್ಕೆ ಬಂದಿದ್ದು, ಮುಂಜಾನೆ 3.30ರ ಸುಮಾರಿಗೆ ಮಾಗಡಿ ಮಾರ್ಗವಾಗಿ ಬೆಂಗಳೂರಿಗೆ ವಾಪಸ್ ಆಗುತ್ತಿದ್ದರು. ಈ ವೇಳೆ ಕಾರು ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿದೆ. ಅಪಘಾತದಲ್ಲಿ ಜಮ್ಮು ಮೂಲದ ವಿದ್ಯಾರ್ಥಿನಿ ಆಕಾಂಕ್ಷಾ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಆಶೀಶ್ ರಾಜಾ, ದಿವ್ಯಾಂಶು, ಆಶುತೋಷ್, ದರ್ಶನ್, ಯಶೋವರ್ಧನ್ ಸಿಂಗ್, ಭವ್ಯಾ ಎಂಬುವರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮಾಗಡಿ‌ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Last Updated : Nov 7, 2021, 3:24 PM IST

ABOUT THE AUTHOR

...view details