ರಾಮನಗರ: ಇಂದು ಮತ್ತೊಂದು ಕೊರೊನಾ ಪಾಸಿಟಿವ್ ಕೇಸ್ ಪತ್ತೆಯಾಗಿದ್ದು, ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 16ಕ್ಕೆ ಏರಿದೆ.
ರಾಮನಗರದಲ್ಲಿ ಮತ್ತೊಂದು ಕೊರೊನಾ ದೃಢ: 16ಕ್ಕೆ ಏರಿದ ಸೋಂಕಿತರ ಸಂಖ್ಯೆ - Ramanagar corona news
ರಾಮನಗರಕ್ಕೆ ಚೆನ್ನೈನಿಂದ ಆಗಮಿಸಿದ್ದ ಐವರು ಯುವಕರಲ್ಲಿ ಓರ್ವನಿಗೆ ಕೊರೊನಾ ದೃಢಪಟ್ಟಿದೆ.
ರಾಮನಗರದಲ್ಲಿ ಓರ್ವನಿಗೆ ಕೊರೊನಾ ದೃಢರಾಮನಗರದಲ್ಲಿ ಓರ್ವನಿಗೆ ಕೊರೊನಾ ದೃಢ
ಬಿಡದಿ ಬಳಿಯ ಟೊಯೊಟಾ ಬಾಷ್ ಕಂಪನಿಯ ಕಾರ್ಮಿಕನಾಗಿರುವ 23 ವರ್ಷದ ಯುವಕನಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಈತ ಚೆನ್ನೈನಿಂದ ಆಗಮಿಸಿದ್ದು, ಈತ ಸೇರಿದಂತೆ ಐವರು ಯುವಕರನ್ನು ರಾಮನಗರದ ಮೊರಾರ್ಜಿ ದೇಸಾಯಿ ಹಾಸ್ಟೆಲ್ನಲ್ಲಿ ಕ್ವಾರಂಟೈನ್ ಮಾಡಲಾಗಿತ್ತು.
ಕ್ವಾರಂಟೈನ್ನಲ್ಲಿದ್ದ ಯುವಕನಿಗೆ ಇದೀಗ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ. ಸೋಂಕಿತನಿಗೆ ರಾಮನಗರ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.