ರಾಮನಗರ:ರೈಲಿಗೆ ತಲೆ ಕೊಟ್ಟು ಅನುಮಾನಾಸ್ಪದವಾಗಿ ಕನಕಪುರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಜಗನ್ನಾಥ್ ಅವರ ಮಗ ಮೃತ ಪಟ್ಟಿರುವ ಘಟನೆ ಜರುಗಿದೆ. ಇಂದು ಸಂಜೆ ಚನ್ನಪಟ್ಟಣದ ರಾಮಮ್ಮನ ಕೆರೆಯ ಬಳಿಯ ಸ್ಮಶಾನದ ಪಕ್ಕದ ರೈಲ್ವೆ ಟ್ರ್ಯಾಕ್ ನ ಬಳಿ 19 ವರ್ಷದ ಸುಕೇಶ್ ಸಾವನ್ನಪ್ಪಿದ್ದಾನೆ.
ರೈಲಿಗೆ ತಲೆ ಕೊಟ್ಟು ಪ್ರಾಧಿಕಾರ ಅಧ್ಯಕ್ಷರ ಮಗ ಆತ್ಮಹತ್ಯೆ!
ಕನಕಪುರ ಯೋಜನಾ ಪ್ರಾಧಿಕಾರದ ಅಧ್ಯಕ್ಷರ ಮಗ ರೈಲಿಗೆ ತಲೆ ಕೊಟ್ಟು ಅನುಮಾನಾಸ್ಪದವಾಗಿ ಮೃತ ಪಟ್ಟಿರುವ ಘಟನೆ ನಡೆದಿದೆ.
death
ಮೃತ ಸುಕೇಶ್ ಮೈಸೂರಿನ ಜೆ.ಎಸ್.ಎಸ್. ಕಾಲೇಜಿನಲ್ಲಿ ಪ್ರಥಮ ವರ್ಷದ ಕಾನೂನು ಪದವಿ ವ್ಯಾಸಂಗ ಮಾಡುತ್ತಿದ್ದ. ರಜೆಯಿದ್ದ ಕಾರಣ ಚನ್ನಪಟ್ಟಣ ತಾಲೂಕಿನ ಹೊಂಗನೂರು ಗ್ರಾಮದ ತಮ್ಮ ಅಜ್ಜಿಯ ಮನೆಗೆ ಬಂದಿದ್ದಾಗ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಸಾವಿಗೆ ನಿಖರ ಕಾರಣ ಇನ್ನು ತಿಳಿದು ಬಂದಿಲ್ಲ. ಮರಣೋತ್ತರ ಪರೀಕ್ಷೆಗಾಗಿ ಶವವನ್ನ ಚನ್ನಪಟ್ಟಣ ಸಾರ್ವಜನಿಕ ಆಸ್ಪತ್ರೆಯಲ್ಲಿ ಇಡಲಾಗಿದೆ. ಚನ್ನಪಟ್ಟಣ ರೈಲ್ವೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.