ಕರ್ನಾಟಕ

karnataka

ETV Bharat / state

ಕಂದಾಯ ಇಲಾಖೆ ಅಧಿಕಾರಿಗಳ ಯಡವಟ್ಟು.. ಇರೋದು ಬಿಟ್ಟು ಬೇರೆ ಜಾತಿ ಪ್ರಮಾಣ ಪತ್ರ..

ಸರ್ಕಾರ‌ವು ತನ್ನ ಪ್ರತಿ ಯೋಜನೆಗೂ ಆಧಾರವಾಗಿ ಜಾತಿ ಮತ್ತು ಆದಾಯ ಪ್ರಮಾಣ ಪತ್ರವನ್ನ ಮಾನದಂಡವಾಗಿಸಿದೆ. ಆದರೆ, ಇದನ್ನು ಸರಿಯಾದ ರೀತಿಯಲ್ಲಿ ಅರ್ಜಿದಾರರಿಗೆ ಒದಗಿಸಬೇಕಾಗಿರುವುದು ಆಯಾ ಇಲಾಖೆಗೆ ಸಂಬಂಧಿಸಿದ ಅಧಿಕಾರಿಗಳ ಕರ್ತವ್ಯ. ಗಾಣಿಗ ಜಾತಿಯ ಅರ್ಜಿದಾರರಿಗೆ ಒಕ್ಕಲಿಗ ಜಾತಿ ಪ್ರಮಾಣ ನೀಡಿ ಕರ್ತವ್ಯಲೋಪಕ್ಕೆ ಗುರಿಯಾಗಿರುವ ಘಟನೆ ರಾಮನಗರ ಬಿಡದಿ ಹೋಬಳಿಯಲ್ಲಿ ನಡೆದಿದೆ.

ಅರ್ಜಿದಾರ ಮಾತನಾಡಿದ್ದಾರೆ

By

Published : Aug 11, 2019, 1:57 PM IST

ರಾಮನಗರ :ಬಿಡದಿ ಹೋಬಳಿಯ ಶ್ಯಾನುಮಂಗಲ ಗ್ರಾಮದ ಗಾಣಿಗ ಜನಾಂಗದ ಸುವರ್ಣಮ್ಮ ಲೇಟ್ ಶ್ಯಾಮಸುಂದರ್ ಅವರ ಕುಟುಂಬದ ಜಾತಿಯನ್ನು ಒಕ್ಕಲಿಗ ಎಂದು ಉಲ್ಲೇಖಿಸಿ ಪ್ರಮಾಣ ಪತ್ರ ನೀಡಲಾಗಿದ್ದು, ಅಧಿಕಾರಿಗಳನ್ನು ಪ್ರಶ್ನಿಸಿದರೆ ಇದು ಕಣ್ ತಪ್ಪಿನಿಂದ‌ ಆಗಿರುವ ಪ್ರಮಾದ ಎನ್ನುತ್ತಿದ್ದಾರೆ.

ಜಾತಿ ಪ್ರಮಾಣ ಪತ್ರದಲ್ಲಿ ಅಧಿಕಾರಿಗಳ ನಿರ್ಲಕ್ಷ್ಯ..

ಈ‌ ಸಂಬಂಧ‌ ಹಿರಿಯ ಅಧಿಕಾರಿಗಳಿಗೆ ದೂರು ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎನ್ನುವ ಸುವರ್ಣಮ್ಮ ಹಾಗೂ ಮಗ ವೀರಭದ್ರ, ಇದು ಅಧಿಕಾರಿಗಳ‌ ನಿರ್ಲಕ್ಷ್ಯಕ್ಕೆ ಹಿಡಿದ ಕನ್ನಡಿಯಾಗಿದೆ. ಸಣ್ಣ ದಾಖಲೆ‌ ನೀಡದಿದ್ದರೂ ತಿಂಗಳಾನುಗಟ್ಟಲೆ ತಿರುಗಿಸುವ ಅಧಿಕಾರಿಗಳು ಲಂಚ ನೀಡದೇ ಇದ್ದರೆ‌ ಇಂತಹ ಪ್ರಮಾದಕ್ಕಿಳಿಯುತ್ತಾರೆ. ಇದರಿಂದ ಸಾಕಷ್ಟು ಜನ‌ರು ಸಮಸ್ಯೆ ಎದುರಿಸಬೇಕಿದೆ‌ ಎಂದು ಆಕ್ರೋಶ‌ ವ್ಯಕ್ತಪಡಿಸಿದ್ದಾರೆ.

ಜಾತಿ ಪ್ರಮಾಣ ಪತ್ರ ಒಮ್ಮೆ ನೀಡಿದರೆ ಐದು ವರ್ಷ ಬದಲಾಯಿಸಲು ಸಾದ್ಯವಿಲ್ಲ. ಸರ್ಕಾರದ ಯಾವುದೇ ಯೋಜನೆಗಳ ಫಲಾನುಭವಿಯಾಗಬೇಕಾದರೆ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಬೇಕು. ಆದರೆ, ಅಧಿಕಾರಿಗಳ ತಪ್ಪಿಗೆ ಜನಸಾಮಾನ್ಯರು ಪರಿತಪಿಸಬೇಕಾಗಿದೆ. ಅನುದಾನ ಪಡೆಯಲು‌ ಮುಂದಾದರೆ ಸುಳ್ಳು ದಾಖಲೆ‌ ನೀಡಿರುವ ಆರೋಪ ಕೂಡ ನಮ್ಮ ಮೇಲೆಯೇ ಹಾಕುತ್ತಾರೆ. ಆದ್ದರಿಂದ ಸಂಬಂಧ ಪಟ್ಟವರು ತಪ್ಪಿತಸ್ಥ ಅಧಿಕಾರಿಗಳ ವಿರುದ್ದ ಶಿಸ್ತು ಕ್ರಮಕ್ಕೆ‌ ಮುಂದಾಗಬೇಕು ಎಂದು ಒತ್ತಾಯಿಸಿದ್ದಾರೆ.

ABOUT THE AUTHOR

...view details