ಕರ್ನಾಟಕ

karnataka

ETV Bharat / state

ಉಪಚುನಾವಣೆಯಷ್ಟೇ ಅಲ್ಲ, ಭವಿಷ್ಯದ ಎಲ್ಲಾ ಚುನಾವಣೆಗಳಲ್ಲೂ ಬಿಜೆಪಿಗೆ ಗೆಲುವು : ಅಶ್ವಥ್ ನಾರಾಯಣ್

ರಾಜ್ಯದಲ್ಲಿ ಮತ್ತೊಮ್ಮೆ ಕಾಂಗ್ರೆಸ್​-ಜೆಡಿಎಸ್​ ಒಂದಾಗುವುದಿಲ್ಲ. ಭವಿಷ್ಯದಲ್ಲಿ ಭಾರತೀಯ ಜನತಾ ಪಾರ್ಟಿ ಬಿಟ್ಟು ರಾಜ್ಯದಲ್ಲಿ ಯಾವುದೇ ಒಂದು ಪಕ್ಷ ಅಧಿಕಾರಕ್ಕೆ ಬರಲ್ಲ, ಉಪ ಚುನಾವಣೆಯಾಗಲಿ ಅಥವಾ ಇನ್ಯಾವುದೇ ಚುನಾವಣೆಯಾಗಲಿ ಬಿಜೆಪಿಯೇ ಗೆಲ್ಲಲಿದೆ ಎಂದು ಉಪಮುಖ್ಯಮಂತ್ರಿ ಅಶ್ವಥ್​ ನಾರಾಯಣ್​ ತಿಳಿಸಿದ್ದಾರೆ.

DCM

By

Published : Oct 22, 2019, 3:33 AM IST

ರಾಮನಗರ: ಉಪಚುನಾವಣೆಯಲ್ಲಿ ಮಾತ್ರವಲ್ಲ, ಎಷ್ಟೇ ಚುನಾವಣೆ ನಡೆದರೂ ಭಾರತ ಜನತಾ ಪಾರ್ಟಿ ಬಿಟ್ಟು ಯಾವುದೇ ಪಕ್ಷ ಅಧಿಕಾರಕ್ಕೆ ಬರಲ್ಲ. ಶಾಶ್ವತವಾಗಿ ಬಿಜೆಪಿ ರಾಜ್ಯದಲ್ಲಿ ಬೇರೂರಲಿದೆ ಎಂದು ಉಪಮುಖ್ಯಮಂತ್ರಿ ಅಶ್ವಥ್ ನಾರಾಯಣ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಉಪಚುನವಾಣೆ ಬಿಜೆಪಿ ಸರ್ಕಾರಕ್ಕೆ ಡೆಡ್​ಲೈನ್​ ಆಗಲಿದಿಯಾ ಎಂಬ ವಿಚಾರಕ್ಕೆ ಮಾತನಾಡಿದ ಅವರು, ರಾಜ್ಯದಲ್ಲಿ ಮತ್ತೊಮ್ಮೆ ಕಾಂಗ್ರೆಸ್​-ಜೆಡಿಎಸ್​ ಒಂದಾಗುವುದಿಲ್ಲ. ಭವಿಷ್ಯದಲ್ಲಿ ಭಾರತೀಯ ಜನತಾ ಪಾರ್ಟಿ ಬಿಟ್ಟು ರಾಜ್ಯದಲ್ಲಿ ಯಾವುದೇ ಒಂದು ಪಕ್ಷ ಅಧಿಕಾರಕ್ಕೆ ಬರಲ್ಲ, ಉಪ ಚುನಾವಣೆಯಾಗಲಿ ಅಥವಾ ಇನ್ಯಾವುದೇ ಚುನಾವಣೆಯಾಗಲಿ ಬಿಜೆಪಿಯೇ ಗೆಲ್ಲಲಿದೆ, ರಾಜ್ಯದಲ್ಲಿ ಬಿಜೆಪಿ ಸರ್ಕಾರ ಶಾಶ್ವತವಾಗಿ ನೆಲೆಯೂರಲಿದೆ ಎಂದು ತಿಳಿಸಿದರು.

ಡಿಸಿಎಂ ಅಶ್ವಥ್ ನಾರಾಯಣ್

ಉಪಚುನಾವಣೆ ಬಳಿಕ ಬೇರೆ ಪಕ್ಷದ ಕೆಲವರು ಬಿಜೆಪಿ ಸೇರಲಿದ್ದಾರೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ನಾರಾಯಣ್​ ರಾಜಕೀಯ ನಿಂತ ನೀರಲ್ಲ. ಯಾರು ಯಾವ ಪಕ್ಷಕ್ಕಾದರೂ ಸೇರಬಹುದು. ಹಾಗೆಯೇ ಬಿಜೆಪಿ ಪಕ್ಷಕ್ಕೆ ಯಾರು ಬೇಕಾದರೂ ಬರಬಹುದು, ಕೆಲವರು ಬರುವ ಮನಸ್ಸು ಮಾಡಿದ್ದಾರೆ, ನಾವು ಕೂಡ ಸ್ವಾಗತಿಸುತ್ತೇವೆ. ಅದರ ಬಗ್ಗೆ ಸಮಯ ಬಂದಾಗ ತಿಳಿಯುತ್ತದೆ ಎಂದು ಡಿಸಿಎಂ ಅಶ್ವಥ್ ನಾರಾಯಣ್ ತಿಳಿಸಿದರು.

ಡಿಕೆಶಿ ಬಗ್ಗೆ ಅಷ್ಟೊಂದ್​ ಬಿಲ್ಡಪ್​ ಬೇಡ:

ಡಿಕೆಶಿ ದೆಹಲಿ ಮನೆ ಮೇಲೆ ಸಿಬಿಐ ದಾಳಿ ವಿಚಾರದಲ್ಲಿ ಕಾನೂನು ವ್ಯವಸ್ಥೆ ಪಾಲನೆಯಾಗುತ್ತಿದೆ ಅಷ್ಟೆ, ಇದರಲ್ಲಿ ಯಾರ ವಿರುದ್ಧವೂ ನಡೆಯುತ್ತಿರುವ ದ್ವೇಷದ ಕ್ರಮ ಅಲ್ಲ. ಸಮಾಜದಲ್ಲಿ ಒಬ್ಬ ವ್ಯಕ್ತಿಯ ಬಗ್ಗೆ ನಾವು ಚಿಂತಿಸಬಾರದು, ನನ್ನಂತಹ ನೂರು ರಾಜಕಾರಣಿಗಳು ಬರ್ತಾರೆ, ಹೋಗ್ತಾರೆ ಆದರೆ ಉತ್ತಮ ಸಮಾಜ ಕಟ್ಟಿದರೆ ಮಾತ್ರ ಉಳಿಯುತ್ತಾರೆ. ಯಾರ್ಯಾರ ಶಕ್ತಿ ಏನೆಂದು ಜನರಿಗೆ ಗೊತ್ತಿದೆ. ನಾವು ಒಬ್ಬ ವ್ಯಕ್ತಿಗೆ ಅಷ್ಟೊಂದು ಬಿಲ್ಡಪ್ ಕೊಡೋದು ಬೇಕಿಲ್ಲ, ನನ್ನ ತಮ್ಮನ ಮೇಲೂ 10 ಕಡೆ ಐಟಿ ದಾಳಿ ನಡೆದಿತ್ತು. ಅದನ್ನ ಕಾನೂನು ದುರ್ಬಳಕೆ ಅನ್ನೋಕಾಗುತ್ತ ಕಾನೂನು ಬಳಕೆಯಾಗಬೇಕಿದೆ, ಬಳಕೆಯೇ ಆಗಿಲ್ಲ ಅಂದ್ರೆ ನ್ಯಾಯ ಹೇಗೆ ಉಳಿಯುತ್ತದೆ ಎಂದರು.

ABOUT THE AUTHOR

...view details