ರಾಮನಗರ: 20ನೇ ಶತಮಾನದಲ್ಲಿ ಜಾರಿಯಲ್ಲಿದ್ದ ಅಸ್ಪೃಶ್ಯತೆ, ಜಾತಿ ಪದ್ಧತಿ ಎಂಬ ಅನಿಷ್ಟಗಳು ಇಂದಿನ ಆಧುನಿಕ ಯುಗದಲ್ಲೂ ಜಾರಿಯಲ್ಲಿರುವ ನಿದರ್ಶನವೊಂದು ತಾಲೂಕಿನಲ್ಲಿ ಕಂಡು ಬಂದಿದೆ.
ತಾಲೂಕಿನ ನಂಜಾಪುರ ಗ್ರಾಮದಲ್ಲಿನ ಸೆಲೂನ್ ಶಾಪ್ಗೆ ದಲಿತರಿಗೆ ಅವಕಾಶವಿಲ್ಲ ತಾಲೂಕಿನ ಕೆಲವೊಂದು ಗ್ರಾಮದಲ್ಲಿ ಇನ್ನೂ ಜಾತಿ ವ್ಯವಸ್ಥೆ, ಅಸ್ಪೃಶ್ಯತೆ ಜೀವಂತವಾಗಿದ್ದು, ಅದರ ಪ್ರಭಾವ ಎಷ್ಟಿದೆ ಅಂದರೆ ದಲಿತ ಎಂಬ ಕಾರಣಕ್ಕಾಗಿ ವ್ಯಕ್ತಿಯೊಬ್ಬನಿಗೆ ಸೆಲೂನ್ನಲ್ಲಿ ಶೇವಿಂಗ್, ಹೇರ್ ಕಟಿಂಗ್ ಕೂಡ ಮಾಡದಿರುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ತಾಲೂಕಿನ ನಂಜಾಪುರ ಗ್ರಾಮದಲ್ಲಿನ ಸೆಲೂನ್ ಶಾಪ್ಗೆ ದಲಿತರಿಗೆ ಅವಕಾಶವಿಲ್ಲ. ಒಂದೊಮ್ಮೆ ದಲಿತರು ಹೇರ್ ಕಟಿಂಗ್, ಶೇವಿಂಗ್ ಮಾಡಿ ಎಂದು ಬಂದರೆ ಅಂಗಡಿಗೆ ಬೀಗ ಹಾಕಿಕೊಂಡು ಅಂಗಡಿಯವರು ಮಂಗ ಮಾಯವಾಗುತ್ತಾರೆ. ಇದು ಅಲ್ಲಿನ ಸವರ್ಣೀಯರಲ್ಲಿನ ಕೆಲವರ ಕಟ್ಟಾಜ್ಞೆಯಂತೆ. ಅದಕ್ಕಾಗಿ ದಲಿತರಿಗೆ ಇಲ್ಲಿ ಸೆಲೂನ್ ಸರ್ವಿಸ್ ಇಲ್ಲ.
ಇದೀಗ ಗ್ರಾಮದ ಯುವಕರು ಇದರ ವಿರುದ್ಧ ಧ್ವನಿಯೆತ್ತಿದ್ದು, ಅಂಗಡಿ ಬೀಗ ಜಡಿದುಕೊಂಡು ಮಾಲೀಕ ಮಂಗಮಾಯವಾಗಿದ್ದಾನೆ. ಅದೇನೇ ಆದರೂ ಸಮಾಜದಲ್ಲಿ ಜಾತಿ ಎಂಬ ಪೆಡಂಭೂತ ಜೀವಂತ ಇರಬಾರದೆಂದು ಸರ್ಕಾರ ಹಲವು ಕಾನೂನು ಜಾರಿಗೆ ತಂದಿದ್ದರೂ ಅವುಗಳಿಗೆ ಇಲ್ಲಿ ಮಾತ್ರ ಲೆಕ್ಕಕ್ಕಿಲ್ಲದಂತಾಗಿದೆ.