ರಾಮನಗರ :ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿತ ಪ್ರಕರಣಗಳು ಹೆಚ್ಚುತ್ತಿದೆ. ಹೀಗಾಗಿ ಪುತ್ರ ನಿಖಿಲ್ ಕುಮಾರಸ್ವಾಮಿ ಮತ್ತು ರೇವತಿ ಅವರ ಮದುವೆಯನ್ನು ಕುಟುಂಬಸ್ಥರ ಸಮ್ಮುಖದಲ್ಲಿ ಸರಳವಾಗಿ ನಡೆಸಲು ತೀರ್ಮಾನಿಸಿದ್ದೇವೆ ಎಂದು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ತಿಳಿಸಿದರು.
ನಿಖಿಲ್ ವಿವಾಹ ಸರಳವಾಗಿ ಮನೆಯಲ್ಲೇ ನಡೆಯಲಿದೆ: ಹೆಚ್.ಡಿ.ಕುಮಾರಸ್ವಾಮಿ - nikhil kumarswamy marraige latest updates
ಕೊರೊನಾ ಬಿಕ್ಕಟ್ಟು ಎದುರಾದ ಕಾರಣ ನಿಖಿಲ್ ಮದುವೆಯನ್ನು ಸರಳವಾಗಿ ಮನೆಯಲ್ಲೇ ನಡೆಸಲು ತೀರ್ಮಾನಿಸಿದ್ದೇವೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ತಿಳಿಸಿದರು.
ನಿಖಿಲ್ ವಿವಾಹ ಮನೆಯಲ್ಲೇ ನಡೆಯಲಿದೆ
ನಗರದ ರೇಷ್ಮೆ ಮಾರುಕಟ್ಟೆ ಹಾಗೂ ಎಪಿಎಂಸಿಗೆ ಭೇಟಿ ನೀಡಿದ್ದ ವೇಳೆ ಮಾತನಾಡಿದ ಅವರು, ಮೊದಲೇ ನಿಗದಿಯಾದಂತೆ ಏಪ್ರಿಲ್ 17 ರ ಶುಭ ಲಗ್ನದಲ್ಲೇ ವಿವಾಹ ನಡೆಸಲಾಗುವುದು. ನಮ್ಮ ಮನೆ ಅಥವಾ ರೇವತಿ ಅವರ ಮನೆಯಲ್ಲಿ ಮದುವೆ ಕಾರ್ಯ ನಡೆಯುತ್ತದೆ ಎಂದರು.
ಈ ಮೊದಲು ರಾಮನಗರದ ಹೊರವಲಯದ ಜಾನಪದ ಲೋಕದ ಬಳಿ ಮದುವೆಗೆ ಸಿದ್ಧತೆ ನಡೆಸಲಾಗಿತ್ತು.
TAGGED:
nikhil marraige