ರಾಮನಗರ: ಕೊರೊನಾ ಸಂಕಷ್ಟದಲ್ಲಿ ಜೀವ ಪಣಕ್ಕಿಟ್ಟು ದುಡಿಯುತ್ತಿರುವ ಕೊರೊನಾ ವಾರಿಯರ್ಸ್ಗೆ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ನೆರವಿನ ಹಸ್ತ ಚಾಚಿದ್ದಾರೆ.
ರಾಮನಗರ ಜಿಲ್ಲೆಯ ಮರಳವಾಡಿ, ಹಾರೋಹಳ್ಳಿ ವ್ಯಾಪ್ತಿಯ ಆಶಾ, ಅಂಗನವಾಡಿ ಕಾರ್ಯಕರ್ತರು ಮತ್ತು ಸ್ಟಾಫ್ ನರ್ಸ್ಗಳಿಗೆ ನೆರವು ನೀಡಿದ್ದಾರೆ. ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸ್ಟಾಪ್ ನರ್ಸ್ಗಳಿಗೆ ಗೌರವಧನ ಮತ್ತು ಸ್ಟೀಮ್ ಮಿಷಿನ್ ವಿತರಣೆ ಮಾಡಿದ್ದಾರೆ.
ಕೊರೊನಾ ವಾರಿಯುರ್ಸ್ಗೆ ನಿಖಿಲ್ ಕುಮಾರಸ್ವಾಮಿಯವರಿಂದ ನೆರವಿನ ಹಸ್ತ ಎರಡು ದಿನಗಳ ಹಿಂದೆ ರಾಮನಗರದ ಡಿಹೆಚ್ಒ ಕಚೇರಿಯ ಮುಂಭಾಗದಲ್ಲಿ ಆಶಾ-ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸ್ಟಾಫ್ ನರ್ಸ್ಗಳಿಗೆ ಆರ್ಥಿಕ ನೆರವು ನೀಡಲಾಯಿತು. ಇದರ ಜೊತೆಗೆ ನೆಬುಲೈಝರ್ ಮಿಷನ್ ಕೂಡ ವಿತರಿಸಲಾಯಿತು.
ಕೊರೊನಾ ವಾರಿಯುರ್ಸ್ಗೆ ನಿಖಿಲ್ ಕುಮಾರಸ್ವಾಮಿಯವರಿಂದ ನೆರವಿನ ಹಸ್ತ ಇದನ್ನು ಓದಿ: ಸಿಂಧೂರಿ-ಶಿಲ್ಪಾ ಸಂಘರ್ಷಕ್ಕೆ ಕಡಿವಾಣ ಹಾಕಲಿ, ಇಲ್ಲದಿದ್ರೆ ಈ ಸರ್ಕಾರ ಅಧಿಕಾರ ಬಿಟ್ಟು ತೊಲಗಲಿ.. ಹೆಚ್ಡಿಕೆ