ರಾಮನಗರ: ಪಂಚರತ್ನ ರಥಯಾತ್ರೆಗೆ ಅಭೂತಪೂರ್ವ ಬೆಂಬಲ ದೊರೆತಿದೆ. ಪಂಚರತ್ನ ಯಾತ್ರೆ ಹೋದ ಕಡೆಯಲ್ಲಿ ಅತ್ಯಂತ ಅದ್ಬುತ ಯಶಸ್ಸು ಕಂಡಿದೆ. ಅಲ್ಲದೇ ಜನರು ಪ್ರೀತಿ ಅಭಿಮಾನ ತೋರುತ್ತಿದ್ದಾರೆ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ.
ನವೆಂಬರ್ 18ರಂದು ಕೋಲಾರ ಜಿಲ್ಲೆಯ ಮುಳಬಾಗಿಲಿನಿಂದ ಯಾತ್ರೆ ಆರಂಭಗೊಂಡಿತ್ತು. ಈ ರಥಯಾತ್ರೆಯನ್ನು ಕೋಲಾರ ಜಿಲ್ಲೆಯ ಜನರು ಯಶಸ್ವಿಗೊಳಿಸಿದ್ದರು. ನಂತರ ಚಿಕ್ಕಬಳ್ಳಾಪುರ ಮತ್ತು ತುಮಕೂರು ಜಿಲ್ಲೆಯಲ್ಲೂ ಯಶಸ್ಸು ಕಂಡಿದೆ. ಅದರಲ್ಲೂ ಗುಬ್ಬಿಯಲ್ಲಿ ತಡರಾತ್ರಿ 2ಗಂಟೆಯ ತನಕ ಜನ ಕಾದು ಕುಳಿತಿದ್ದರು ಎಂದು ನಿಖಿಲ್ ಕುಮಾರ್ ಸ್ವಾಮಿ ತಿಳಿಸಿದ್ದಾರೆ.
ಈ ರಥಯಾತ್ರೆ ಡಿ.15ರಂದು ರಾಮನಗರ ಜಿಲ್ಲೆ ಪ್ರವೇಶ ಮಾಡಲಿದೆ. ಹೀಗಾಗಿ ಇಂದು ಕೇತಗಾನಹಳ್ಳಿ ತೋಟದ ಮನೆಯಲ್ಲಿ ಸಭೆ ನಡೆಸಲಾಗಿದೆ. ಪೂರ್ವಭಾವಿ ಸಭೆಯಲ್ಲಿ ಸಿದ್ಧತೆ ಬಗ್ಗೆ ಚರ್ಚೆ ನಡೆಸಲಾಗಿದ್ದು, ಡಿಸೆಂಬರ್ 16ರಂದು ಮಾಜಿ ಸಿಎಂ ಹೆಚ್‌ಡಿಕೆ ಅವರ ಜನ್ಮದಿನವಿದೆ. ಈ ಸಲುವಾಗಿ ಶ್ರೀನಿವಾಸ ಕಲ್ಯಾಣ ಕಾರ್ಯಕ್ರಮ ಆಯೋಜಿಸಲಾಗಿದ್ದು, ರಾಜ್ಯದ ಜನರ ಒಳಿತಿಗಾಗಿ ಈ ಧಾರ್ಮಿಕ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಶ್ರೀನಿವಾಸ ಕಲ್ಯಾಣ ಕಾರ್ಯಕ್ರಮ ಎಲ್ಲರ ಕೈಯಲ್ಲಿ ಸಾಧ್ಯವಿಲ್ಲ. ಭಗವಂತನ ಕೃಪೆ ಮತ್ತು ಶಕ್ತಿಯಿಂದ ನಮಗೆ ಇದು ಸಾದ್ಯವಾಗಿದೆ ಎಂದು ಹೇಳಿದರು.