ರಾಮನಗರ: ಮಾಜಿ ಸಿಎಂ ಕುಮಾರಸ್ವಾಮಿ ಪುತ್ರ ನಿಖಿಲ್ ವಿವಾಹ ಮಹೋತ್ಸವದ ಸಕಲ ಸಿದ್ದತೆಯಲ್ಲಿ ತೊಡಗಿದ್ದಾರೆ. ಏಪ್ರಿಲ್ 17 ಕ್ಕೆ ದಿನಾಂಕ ನಿಗದಿಯಾಗಿದ್ದು ಮದುವೆಯನ್ನ ರಾಮನಗರ ಜಿಲ್ಲೆಯಲ್ಲೆಯೇ ಮಾಡಲು ನಿರ್ಧರಿಸಿದ್ದರು. ಅದರಂತೆ ಇಂದು ಹೆಚ್ಡಿಕೆ ಬೀಗರೊಂದಿಗೆ ಸ್ಥಳ ವೀಕ್ಷಣೆ ನಡೆಸಿದ್ದಾರೆ.
ನಿಖಿಲ್ -ರೇವತಿ ಮದುವೆಗೆ ರಾಮನಗರದಲ್ಲಿ ನಿರ್ಮಾಣವಾಗಲಿದೆ ಬೃಹತ್ ಸೆಟ್... ಜಾಗ ವೀಕ್ಷಿಸಿದ ಹೆಚ್ಡಿಕೆ
ಮಾಜಿ ಸಿಎಂ ಕುಮಾರಸ್ವಾಮಿ ಪುತ್ರ ನಿಖಿಲ್ ವಿವಾಹ ಮಹೋತ್ಸವದ ಸಕಲ ಸಿದ್ದತೆಯಲ್ಲಿ ತೊಡಗಿದ್ದಾರೆ. ಏಪ್ರಿಲ್ 17 ಕ್ಕೆ ದಿನಾಂಕ ನಿಗದಿಯಾಗಿದ್ದು ಮದುವೆಯನ್ನ ರಾಮನಗರ ಜಿಲ್ಲೆಯಲ್ಲಿಯೇ ಮಾಡಲು ನಿರ್ಧರಿಸಿದ್ದರು. ಅದರಂತೆ ಇಂದು ಹೆಚ್ಡಿಕೆ ಬೀಗರೊಂದಿಗೆ ಸ್ಥಳ ವೀಕ್ಷಣೆ ನಡೆಸಿದ್ದಾರೆ.
ರಾಮನಗರ ಹೊರ ವಲಯದಲ್ಲಿರುವ ಜನಪದ ಲೋಕದ ಹಿಂಭಾಗದ ಜಾಗವನ್ನು ಮಾಜಿ ಸಿಎಂ ಹೆಚ್. ಡಿ. ಕುಮಾರಸ್ವಾಮಿ ವೀಕ್ಷಣೆ ಮಾಡಿದ್ದಾರೆ. ಪುತ್ರ ನಿಖಿಲ್ ಕುಮಾರ ಸ್ವಾಮಿ ಮದುವೆ ಮಂಜುನಾಥ್ ಪುತ್ರಿ ರೇವತಿ ಜೊತೆಗೆ ನಿಶ್ಚಯವಾಗಿದ್ದು, ನಿಶ್ಚಿತಾರ್ಥ ಕಾರ್ಯ ಫೆ.10 ಕ್ಕೆ ಮುಗಿದಿದೆ. ಮದುವೆ ನಡೆಯುವ ಸ್ಥಳದ ವೀಕ್ಷಣೆ ನಡೆಸಿದ್ದ ಹೆಚ್ಡಿಕೆೆ ತಮ್ಮ ಬೀಗರೊಂದಿಗೆ ಇಂದು ಸಹ ಭೇಟಿ ನೀಡಿ ಮದುವೆ ನಡೆಸಲು ಇಚ್ಚಿಸಿದ್ದ ಸ್ಥಳ ವೀಕ್ಷಣೆ ನಡೆಸಿದರು.
ಮದುವೆಗೆ 10 ಲಕ್ಷ ಜನರು ಸೇರುವ ನಿರೀಕ್ಷೆಯಿದ್ದು, ಯಾವುದೇ ಅನಾನುಕೂಲವಾಗದಂತೆ ಕ್ರಮ ಕೈಗೊಳ್ಳಲು ಹೆಚ್ಡಿಕೆ ಖುದ್ದು ಭೇಟಿ ನೀಡಿದ್ದರು. ಸೆಂಟ್ರಲ್ ಮುಸ್ಲಿಂ ಅಸೋಸಿಯೇಷನ್ ಗೆ ಹಾಗೂ ಇತರ ಖಾಸಗಿ ವ್ಯಕ್ತಿಗಳಿಬ್ಬರಿಗೆ ಸೇರಿದ ಜಾಗವಾಗಿದ್ದು ಏಪ್ರಿಲ್ 17 ಕ್ಕೆ ನಿಗದಿಯಾಗಿರುವ ನಿಖಿಲ್ - ರೇವತಿ ವಿವಾಹಕ್ಕಾಗಿ ಅದ್ದೂರಿ ಸೆಟ್ ನಿರ್ಮಿಸಲು ಚಿಂತಿಸಿದ್ದಾರೆ.