ಕರ್ನಾಟಕ

karnataka

ETV Bharat / state

10-15 ದಿನದ ಹಿಂದೆ ಇಂದ್ರಜಿತ್ ಲಂಕೇಶ್ ತೋಟದ ಮನೆಗೆ ಬಂದಿದ್ದರು : ನಿಖಿಲ್ ಕುಮಾರಸ್ವಾಮಿ - ಸ್ಯಾಂಡಲ್​ವುಡ್ ಸುದ್ದಿ

ಸಾರ್ವಜನಿಕವಾಗಿ ಯಾರು ಹೇಗೆ ಬದುಕುತ್ತಾರೆ ಎಂಬುದು ಅವರವರ ವಿಚಾರ ಮತ್ತು ಅವರಿಗೇ ಬಿಟ್ಟಿದ್ದು. ಕುಮಾರಣ್ಣ ಅವರನ್ನ ಎಲ್ಲಾ ವಿಚಾರದಲ್ಲಿಯೂ ಕ್ಲಬ್ ಮಾಡುವುದು ಸರಿಯಾದ ಕ್ರಮವಲ್ಲವೆಂದರು. ಬೇರೆ ಬೇರೆ ದುರುದ್ದೇಶಕ್ಕೆ ಫೋಟೋಗಳನ್ನ ಹಂಚಿಕೊಂಡಿದ್ದಾರೆ. ಈಗಿನ ಫೋಟೋ ವೈರಲ್ ಬಗ್ಗೆ ಇಂದ್ರಜಿತ್ ಲಂಕೇಶ್ ಅವರನ್ನೇ ಪ್ರಶ್ನೆ ಮಾಡಿ..

nikhil-kumaraswamy
ನಿಖಿಲ್ ಕುಮಾರಸ್ವಾಮಿ

By

Published : Jul 17, 2021, 7:44 PM IST

ರಾಮನಗರ :ಚಿತ್ರ ನಿರ್ದೇಶಕ ಇಂದ್ರಜಿತ್ ಲಂಕೇಶ್ ಅವರು ನಮ್ಮ ತೋಟದ ಮನೆಗೆ ಬಂದಿದ್ದರು. ಅಂದು ಕುಮಾರಸ್ವಾಮಿ ಅವರನ್ನು 10- 15 ದಿನಗಳ ಹಿಂದೆ ಭೇಟಿಯಾಗಿದ್ದರು ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ.

ರಾಮನಗರದಲ್ಲಿ ಮಾತನಾಡಿದ ಅವರು, ಬಿಡದಿಯ ಕೇತುಗಾನಹಳ್ಳಿಯ ತೋಟದ ಮನೆಗೆ ಬಂದಿರಬಹುದು. ಯಾವುದೋ ಬೇರೆ ವಿಚಾರದ ಬಗ್ಗೆ ಮಾತನಾಡಲು ಅವರು ಬಂದಿರಬಹುದು. ನಾನು ಕೂಡ ಅವರನ್ನು‌ ಹಲವು ಸಲ ಭೇಟಿ ಮಾಡಿದ್ದೇನೆ. ಮಾತನಾಡಿದ್ದೇನೆ ಎಂದಿದ್ದಾರೆ.

10-15 ದಿನದ ಹಿಂದೆ ಇಂದ್ರಜಿತ್ ಲಂಕೇಶ್ ತೋಟದ ಮನೆಗೆ ಬಂದಿದ್ದರು: ನಿಖಿಲ್ ಕುಮಾರಸ್ವಾಮಿ

ಇವತ್ತಿನ ವಿಷಯಕ್ಕೆ ಆ ಭೇಟಿಯನ್ನ ತಳುಕು ಹಾಕುವುದು ಬೇಡ. ನಾನು ಯಾರ ಬಗ್ಗೆಯೂ ಮಾತನಾಡುವುದಿಲ್ಲ. ಸಾರ್ವಜನಿಕ ಜೀವನದಲ್ಲಿ ಇರುವವರು ಜವಾಬ್ದಾರಿಯುತವಾಗಿ ಇರಬೇಕು. ನಮ್ಮ ನಡೆಗಳನ್ನ ಜನರು ಗಮನಿಸುತ್ತಿರುತ್ತಾರೆ ಎಂದು ಮಾರ್ಮಿಕವಾಗಿ‌ ಉತ್ತರಿಸಿದ್ದಾರೆ.

ಸಾರ್ವಜನಿಕವಾಗಿ ಯಾರು ಹೇಗೆ ಬದುಕುತ್ತಾರೆ ಎಂಬುದು ಅವರವರ ವಿಚಾರ ಮತ್ತು ಅವರಿಗೇ ಬಿಟ್ಟಿದ್ದು. ಕುಮಾರಣ್ಣ ಅವರನ್ನ ಎಲ್ಲಾ ವಿಚಾರದಲ್ಲಿಯೂ ಕ್ಲಬ್ ಮಾಡುವುದು ಸರಿಯಾದ ಕ್ರಮವಲ್ಲವೆಂದರು. ಬೇರೆ ಬೇರೆ ದುರುದ್ದೇಶಕ್ಕೆ ಫೋಟೋಗಳನ್ನ ಹಂಚಿಕೊಂಡಿದ್ದಾರೆ. ಈಗಿನ ಫೋಟೋ ವೈರಲ್ ಬಗ್ಗೆ ಇಂದ್ರಜಿತ್ ಲಂಕೇಶ್ ಅವರನ್ನೇ ಪ್ರಶ್ನೆ ಮಾಡಿ. ಅವರೇ ಫೋಟೋ ವಿಚಾರವಾಗಿ ಪ್ರತಿಕ್ರಿಯೆ ಕೊಡುತ್ತಾರೆ ಎಂದರು.

ಓದಿ:ತಾಕತ್ತಿದ್ದರೆ ನನ್ನ Voice Record ಬಿಡುಗಡೆ ಮಾಡ್ಲಿ; ಇಂದ್ರಜಿತ್ ಲಂಕೇಶ್​​​ಗೆ ದರ್ಶನ್ ಸವಾಲು!

ABOUT THE AUTHOR

...view details