ರಾಮನಗರ: ತಾಲೂಕಿನ ಹೊನ್ನನಾಯಕನಹಳ್ಳಿಯಲ್ಲಿದ್ದ ಕ್ವಾರಂಟೈನ್ ಸೆಂಟರ್ ಅನ್ನು ಚನ್ನಪಟ್ಟಣದ ಹೌಸಿಂಗ್ ಬೋರ್ಡ್ನಲ್ಲಿರುವ ಬಾಯ್ಸ್ ಹಾಸ್ಟೆಲ್ಗೆ ಸ್ಥಳಾಂತರಿಸುವ ಹಿನ್ನೆಲೆ, ಸ್ಥಳೀಯರಲ್ಲಿ ಆತಂಕ ಮೂಡಿದ್ದು, ರಸ್ತೆಗೆ ಬೇಲಿ ಹಾಕಿ ಪ್ರತಿಭಟನೆ ನಡೆಸಿದ್ದಾರೆ.
ಕ್ವಾರಂಟೈನ್ ಕೇಂದ್ರ ಸ್ಥಳಾಂತರಕ್ಕೆ ಸ್ಥಳೀಯರ ವಿರೋಧ: ಬೇಲಿ ಹಾಕಿ ಪ್ರತಿಭಟನೆ - Honnanayakanahalli
ರಾಮನಗರ ತಾಲೂಕಿನ ಹೊನ್ನನಾಯಕನಹಳ್ಳಿಯಲ್ಲಿದ್ದ ಕ್ವಾರಂಟೈನ್ ಸೆಂಟರ್ ಅನ್ನು ಕಬ್ಬಾಳು - ಸಾತನೂರು ರಾಜ್ಯ ಹೆದ್ದಾರಿಯ ಪಕ್ಕದಲ್ಲಿರುವ ಬಾಯ್ಸ್ ಹಾಸ್ಟೆಲ್ಗೆ ಸ್ಥಳಾಂತರಿಸಲು ತಾಲೂಕು ಆಡಳಿತ ನಿರ್ಧರಿಸಿದ್ದು, ಇದಕ್ಕೆ ವಿರೋಧ ಪಡಿಸಿದ ಸ್ಥಳೀಯರು ಪ್ರತಿಭಟನೆ ನಡೆಸಿದ್ದಾರೆ.
ಕಬ್ಬಾಳು - ಸಾತನೂರು ರಾಜ್ಯ ಹೆದ್ದಾರಿಯ ಪಕ್ಕದಲ್ಲೇ ಇರುವ ಬಾಯ್ಸ್ ಹಾಸ್ಟೆಲ್ನ ಅಕ್ಕಪಕ್ಕದಲ್ಲಿ ಹಲವಾರು ಮನೆಗಳಿವೆ. ಆದ್ದರಿಂದ ಜನವಸತಿ ಪ್ರದೇಶದಲ್ಲಿ ಕ್ವಾರಂಟೈನ್ ಸೆಂಟರ್ ಮಾಡುವ ನಿರ್ಧಾರಕ್ಕೆ ಸಾರ್ವಜನಿಕರು ವಿರೋಧ ವ್ಯಕ್ತಪಡಿಸಿದ್ದಾರೆ. ಸದ್ಯ ತಾಲೂಕಿನ ಹೊನ್ನನಾಯಕನಹಳ್ಳಿಯಲ್ಲಿ ಕ್ವಾರಂಟೈನ್ ಸೆಂಟರ್ ಇತ್ತು. ಆದರೆ, ಈಗ ಏಕಾಏಕಿ ನಗರದ ಮಧ್ಯ ಭಾಗದಲ್ಲಿನ ಮಹದೇಶ್ವರ ದೇವಸ್ಥಾನದ ಬಳಿಯ ಬಾಯ್ಸ್ ಹಾಸ್ಟೆಲ್ಗೆ ಶಿಫ್ಟ್ ಮಾಡಲು ತಾಲೂಕು ಆಡಳಿತ ನಿರ್ಧರಿಸಿದೆ.
ಈ ಹಾಸ್ಟೆಲ್ ಸುತ್ತಲು ಮನೆಗಳಿವೆ. ಪುಟ್ಟ ಮಕ್ಕಳು, ಗರ್ಭಿಣಿಯರಿದ್ದಾರೆ, ಇಲ್ಲಿಗೆ ಸ್ಥಳಾಂತರ ಮಾಡಬಾರದು ಎಂದು ಆಗ್ರಹಿಸಿ ದೇವಸ್ಥಾನದ ಮುಖ್ಯದ್ವಾರಕ್ಕೆ ಬೇಲಿ ಹಾಕಿ ಆಕ್ರೋಶ ವ್ಯಕ್ತಪಡಿಸಿದ ಸ್ಥಳೀಯರು, ಈ ಬಗ್ಗೆ ಚನ್ನಪಟ್ಟಣ ತಹಶೀಲ್ದಾರ್, ರಾಮನಗರ ಜಿಲ್ಲಾಧಿಕಾರಿ ಕ್ರಮವಹಿಸಬೇಕು ಎಂದು ಒತ್ತಾಯಿಸಿದ್ದಾರೆ.