ಕರ್ನಾಟಕ

karnataka

ETV Bharat / state

ಪತ್ನಿಗೆ ವಿಷದ ಇಂಜಕ್ಷನ್​ ಕೊಟ್ಟು ಕೊಂದ ಪಾಪಿ ಪತಿ - Husband killed his wife by injecting poison

ಪತ್ನಿ ಮೇಲೆ ಅನುಮಾನಗೊಂಡ ಪತಿ ಆಕೆಗೆ ವಿಷದ‌ ಇಂಜೆಕ್ಷನ್‌ ಕೊಟ್ಟು ಉಸಿರುಗಟ್ಟಿಸಿ ಕೊಂದಿರುವ ಘಟನೆ ರಾಮನಗರದ ಹನುಮಂತ ನಗರದಲ್ಲಿ ನಡೆದಿದೆ.

Murder of wife by husband in Ramnagar
ಪೊಲೀಸರಿಂದ ಸ್ಥಳ ಪರಿಶೀಲನೆ

By

Published : Jan 15, 2020, 10:16 AM IST

Updated : Jan 15, 2020, 4:48 PM IST

ರಾಮನಗರ: ಪತಿ ಪತ್ನಿಯನ್ನು ವಿಷದ‌ ಇಂಜೆಕ್ಷನ್‌ ಕೊಟ್ಟು ಉಸಿರುಗಟ್ಟಿಸಿ ಕೊಂದಿರುವ ಘಟನೆ ರಾಮನಗರದ ಹನುಮಂತ ನಗರದಲ್ಲಿ ನಡೆದಿದೆ.

ಕೊಳಮಾರನಕುಪ್ಪೆ ಮೂಲದ ದೀಪಾ (22) ಕೊಲೆಯಾಗಿರುವ ದುರ್ದೈವಿ. ದೀಪಾಳನ್ನು ವಡ್ಡರದೊಡ್ಡಿಯ ವೆಂಕಟೇಶ ಎಂಬಾತನಿಗೆ ವಿವಾಹ ಮಾಡಿಕೊಡಲಾಗಿತ್ತು. ಸದಾ ತನ್ನ ಪತ್ನಿ ಮೇಲೆ ಅನುಮಾನ ಪಡುತಿದ್ದ ವೆಂಕಟೇಶ, ಆಕೆಗೆ ಮಾನಸಿಕ‌ ಮತ್ತು ದೈಹಿಕ ಕಿರುಕುಳ ನೀಡುತ್ತಿದ್ದನಂತೆ. ಜೊತೆಗೆ ಸರ್ಕಾರಿ ಆಸ್ಪತ್ರೆಯಲ್ಲಿ ದಿನಗೂಲಿ ‌ನೌಕರನಾಗಿರುವ ವೆಂಕಟೇಶನಿಗೆ ಅಕ್ರಮ ಸಂಭಂದವಿತ್ತು ಎನ್ನಲಾಗ್ತಿದೆ.

ಪೊಲೀಸರಿಂದ ಸ್ಥಳ ಪರಿಶೀಲನೆ

ಪತಿಯ ಅಕ್ರಮ ಸಂಬಂಧದ ಬಗ್ಗೆ ತಿಳಿದಿದ್ದ ದೀಪಾ, ತನ್ನ ಕುಟುಂಬಸ್ಥರಿಗೆ ತಿಳಿಸುವ ಬೆದರಿಕೆ ‌ಹಾಕಿದ್ದಳಂತೆ. ಇದರಿಂದ ಹೆದರಿದ ವೆಂಕಟೇಶ ರಸಗೊಬ್ಬರ ಅಂಗಡಿಯಿಂದ ಕ್ರಿಮಿನಾಶಕ ತಂದು ದೀಪಾಳಿಗೆ ಇಂಜೆಕ್ಟ್​ ಮಾಡಿ ಉಸಿರುಗಟ್ಟಿಸಿ ಸಾಯಿಸಿದ್ದಾನೆ. ಬಳಿಕ ತನಗೇನು ಗೊತ್ತಿಲ್ಲದಂತೆ ಸರ್ಕಾರಿ ಆಸ್ಪತ್ರೆಯಲ್ಲಿ ಹುಷಾರಿಲ್ಲ ಎಂದು ದಾಖಲಾಗಿದ್ದ.

ಹತ್ಯೆಯಾದ ಮಹಿಳೆ ಮತ್ತು ಆಕೆಯ ಪತಿ

ದೀಪಾ ಸಾವಿನ ಬಗ್ಗೆ ಪತಿ ವೆಂಕಟೇಶ ಬಳಿ ಎಷ್ಟೇ ವಿಚಾರಿಸಿದರೂ ಆತ ಮಾತ್ರ ಯಾವುದೇ ವಿಷಯವನ್ನು ಬಾಯಿಬಿಟ್ಟಿರಲಿಲ್ಲ. ಇದರಿಂದ ಅನುಮಾನಗೊಂಡ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ತಪ್ಪೊಪ್ಪಿಕೊಂಡಿದ್ದಾನೆ. ಈ ಬಗ್ಗೆ ಐಜೂರು ಠಾಣೆ ಪೊಲೀಸರು ಪ್ರಕರಣ ದಾಖಲಾಗಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

Last Updated : Jan 15, 2020, 4:48 PM IST

ABOUT THE AUTHOR

...view details