ರಾಮನಗರ : ಗಂಧದ ನಾಡನ್ನು ಬಂದೂಕಿನ ನಾಡನ್ನಾಗಿ ಮಾಡಲು ಭಾರತೀಯ ಜನತಾ ಪಾರ್ಟಿ ನಾಯಕರು ಹೊರಟಿದ್ದಾರೆ ಎಂದು ಸಂಸದ ಡಿ ಕೆ ಸುರೇಶ್ ವಾಗ್ದಾಳಿ ನಡೆಸಿದ್ದಾರೆ.
ಕರುನಾಡನ್ನ ಬಂದೂಕು ನಾಡನ್ನಾಗಿ ಮಾಡಲು ಬಿಜೆಪಿ ಹೊರಟಿದೆ : ಸಂಸದ ಡಿ ಕೆ ಸುರೇಶ್ - ಗಾಳಿಯಲ್ಲಿ ಗುಂಡು ಹಾರಿಸಿದ ಬಿಜೆಪಿ ಕಾರ್ಯಕರ್ತರು
ಇವರು ಗುಂಡು ಹಾರಿಸಿದರೆ ಖುಷಿಗೆ, ಮತ್ತೊಬ್ಬರು ಹಾರಿಸಿದರೆ ದುಃಖಕ್ಕೆ ಎನ್ನುವಂತಾಗಿದೆ. ಇದನ್ನೇ ರಾಜ್ಯದಲ್ಲಿ ಅನುಸರಿಸಲಿ. ಗಂಧದನಾಡು ಎಂಬುದನ್ನ ಬಂದೂಕಿನನಾಡು ಎಂದು ಬದಲಿಸಲಿ, ಅದು ಬಿಜೆಪಿಯವರ ಸಂಸ್ಕೃತಿ..
ಜಿಲ್ಲೆಯ ಬಿಡದಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಕೇಂದ್ರ ಸಚಿವರ ಕಾರ್ಯಕ್ರಮದಲ್ಲಿ ಗುಂಡು ಹಾರಿಸಿದ ವಿಚಾರವಾಗಿ ಪ್ರತಿಕ್ರಿಯೆ ನೀಡಿ, ಗೃಹ ಸಚಿವರು ಸೇರಿದಂತೆ ಹಲವು ಮಂತ್ರಿಗಳು, ಬಿಜೆಪಿ ರಾಜ್ಯಾಧ್ಯಕ್ಷರ ಹೇಳಿಕೆಗಳನ್ನ ನಾನು ಗಮನಿಸಿದ್ದೇನೆ. ಅವರು ಉತ್ತರಪ್ರದೇಶ, ಬಿಹಾರದ ಸಂಸ್ಕೃತಿಯನ್ನ ಅನುಸರಿಸರಿಸಲು ಹೊರಟಿದ್ದಾರೆ ಎಂದು ಆರೋಪಿಸಿದರು.
ಇವರು ಗುಂಡು ಹಾರಿಸಿದರೆ ಖುಷಿಗೆ, ಮತ್ತೊಬ್ಬರು ಹಾರಿಸಿದರೆ ದುಃಖಕ್ಕೆ ಎನ್ನುವಂತಾಗಿದೆ. ಇದನ್ನೇ ರಾಜ್ಯದಲ್ಲಿ ಅನುಸರಿಸಲಿ. ಗಂಧದನಾಡು ಎಂಬುದನ್ನ ಬಂದೂಕಿನನಾಡು ಎಂದು ಬದಲಿಸಲಿ, ಅದು ಬಿಜೆಪಿಯವರ ಸಂಸ್ಕೃತಿ ಎಂದು ಲೇವಡಿ ಮಾಡಿದರು.