ರಾಮನಗರ:ತನ್ನಿಬ್ಬರು ಮಕ್ಕಳಿಗೆ ವಿಷ ಉಣಿಸಿ ಹತ್ಯೆಗೈದ ಬಳಿಕ ತಾಯಿಯೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಾಮನಗರ ಜಿಲ್ಲೆಯ ಮಾಗಡಿ ತಾಲ್ಲೂಕಿನ ಹೊಸಪಾಳ್ಯ ಗ್ರಾಮದಲ್ಲಿ ನಡೆದಿದೆ. ಮಾಗಡಿ ತಾಲ್ಲೂಕು ರೈತ ಸಂಘದ ಅಧ್ಯಕ್ಷ ಹೊಸಪಾಳ್ಯ ಲೋಕೇಶ್ ಅವರ ಪತ್ನಿ ರೂಪಾ(38), ಮಕ್ಕಳಾದ 6 ವರ್ಷದ ಹರ್ಷಿತಾ ಹಾಗು 4 ವರ್ಷದ ಸ್ಪೂರ್ತಿ ಮೃತರೆಂದು ಗುರುತಿಸಲಾಗಿದೆ.
ಪುಟ್ಟ ಮಕ್ಕಳಿಗೆ ವಿಷವುಣಿಸಿ ತಾನೂ ಸಾವಿಗೆ ಶರಣಾದ ರೈತ ಸಂಘದ ಅಧ್ಯಕ್ಷನ ಪತ್ನಿ - ಈಟಿವಿ ಭಾರತ್ ಕರ್ನಾಟಕ
ತಾಯಿಯೇ ಇಬ್ಬರು ಮಕ್ಕಳಿಗೆ ಜಮೀನಿನಲ್ಲಿ ವಿಷವುಣಿಸಿ ಕೊಂದು ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಹೃದಯ ವಿದ್ರಾವಕ ಘಟನೆ ರಾಮನಗರದಲ್ಲಿ ನಡೆದಿದೆ.
ತಾಯಿಯೇ ಮಕ್ಕಳಿಗೆ ವಿಷವುಣಿಸಿ ಆತ್ಮಹತ್ಯೆ
ಇವರು ಹೊಸಪಾಳ್ಯ ಗ್ರಾಮದ ತಮ್ಮ ಜಮೀನಿನ ಬಳಿ ಮೊದಲು ಮಕ್ಕಳಿಗೆ ವಿಷವುಣಿಸಿ ನಂತರ ತಾನೂ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಮಾಗಡಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಮಾಗಡಿ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.
ಇದನ್ನೂ ಓದಿ :ಕಡಬ: ಬಸ್ ಏರಿ ನಿಗದಿತ ಸ್ಥಳದಲ್ಲಿ ಇಳಿಯದೆ ನಾಪತ್ತೆಯಾಗಿದ್ದ ಬಾಲಕಿ
Last Updated : Sep 4, 2022, 12:14 PM IST