ಕರ್ನಾಟಕ

karnataka

ETV Bharat / state

ಊಟದ ವಿಚಾರವಾಗಿ ಜಗಳ... ತಾಯಿ, ಮಗ ಆತ್ಮಹತ್ಯೆ - ಈಟಿವಿ ಭಾರತ ಕನ್ನಡ

ಕ್ಷುಲ್ಲಕ ಕಾರಣಕ್ಕಾಗಿ ಜಗಳವಾಡಿದ ತಾಯಿ ಮತ್ತು ಮಗ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ramanagara
ತಾಯಿ, ಮಗ ಆತ್ಮಹತ್ಯೆ

By

Published : Jan 14, 2023, 1:04 PM IST

ರಾಮನಗರ: ತಾಯಿ, ಮಗ ಕ್ಷುಲ್ಲಕ ಕಾರಣಕ್ಕಾಗಿ ಜಗಳವಾಡಿ ಬಳಿಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಾಮನಗರದ ಕುಮಾರಸ್ವಾಮಿ ಲೇಜೌಟ್​ನಲ್ಲಿ ನಡೆದಿದೆ. ಮೃತರನ್ನು ವಿಜಯಲಕ್ಷ್ಮಿ(50) ಮತ್ತು ಹರ್ಷ(25)ಎಂದು ಗುರುತಿಸಲಾಗಿದೆ.

ತಾಯಿ ವಿಜಯಲಕ್ಷ್ಮಿ ಜೊತೆ ರಾತ್ರಿ ಊಟದ ವಿಚಾರವಾಗಿ ಮಗ ಹರ್ಷ ಜಗಳವಾಡಿದ್ದ. ಈ ಕಾರಣಕ್ಕೆ ಮನನೊಂದ ತಾಯಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ತಕ್ಷಣವೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ. ಇದರಿಂದ ಮನನೊಂದ ಹರ್ಷ, ನಾನೇ ತಾಯಿ ಸಾವಿಗೆ ಕಾರಣನಾದೆ ಎಂದು ಭಾವಿಸಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ಈ ಸಂಬಂಧ ಐಜೂರು ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

ಇದನ್ನೂ ಓದಿ:ಬಾಗಲಕೋಟೆ.. ಮೂರು ಹೆಣ್ಣು ಮಕ್ಕಳೊಂದಿಗೆ ತಾಯಿ ಆತ್ಮಹತ್ಯೆ

ABOUT THE AUTHOR

...view details