ಕರ್ನಾಟಕ

karnataka

ETV Bharat / state

ಮಾಗಡಿಯಲ್ಲಿ ಆಯತಪ್ಪಿ ಬೈಕ್​ನಿಂದ ಕಲ್ಯಾಣಿಗೆ ಬಿದ್ದು ತಾಯಿ-ಮಗಳು ಸಾವು - ಮಾಗಡಿ ಬೈಕ್​ ಅಪಘಾತ ಪ್ರಕರಣ

ಬೈಕ್​ನಲ್ಲಿ ತೆರಳುತ್ತಿದ್ದ ತಾಯಿ, ಮಗಳು ಆಯತಪ್ಪಿ ಕಲ್ಯಾಣಿಗೆ ಬಿದ್ದು ಸಾವನ್ನಪ್ಪಿರುವ ಘಟನೆ ಜಿಲ್ಲೆ ಮಾಗಡಿ ಪಟ್ಟಣದಲ್ಲಿ ಸಂಭವಿಸಿದೆ.

mother-and-daughter-died-as-bike-skid-in-magadi
ಮಾಗಡಿಯಲ್ಲಿ ಆಯತಪ್ಪಿ ಬೈಕ್​ನಿಂದ ಕಲ್ಯಾಣಿಗೆ ಬಿದ್ದು ತಾಯಿ, ಮಗಳು ಸಾವು

By

Published : Jun 25, 2022, 3:37 PM IST

ರಾಮನಗರ:ಬೈಕ್​ನಲ್ಲಿ ತೆರಳುತ್ತಿದ್ದ ತಾಯಿ-ಮಗಳು ಆಯತಪ್ಪಿ ರಸ್ತೆ ಪಕ್ಕದಲ್ಲಿದ್ದ ಕಲ್ಯಾಣಿಗೆ ಬಿದ್ದು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಮಾಗಡಿ ಪಟ್ಟಣದಲ್ಲಿ ಶನಿವಾರ ಬೆಳಗ್ಗೆ ಸಂಭವಿಸಿದೆ. ಇಲ್ಲಿನ ಕೆಂಪೇಗೌಡ ನಗರದ ನಿವಾಸಿ ಮಂಗಳಮ್ಮ (35) ಹಾಗೂ ಮಗಳು ಸನ್ನಿಧಿ (6) ಮೃತಪಟ್ಟವರು.‌

ಹುಲುವೇನಹಳ್ಳಿ ಮೂಲದ ರಂಗೇಗೌಡ ಎಂಬುವರ ಪತ್ನಿ ಮಂಗಳಮ್ಮ ತನ್ನ ಮಗಳೊಂದಿಗೆ ಎಲೆಕ್ಟ್ರಿಕ್​ ಬೈಕ್​ನಲ್ಲಿ ತರಕಾರಿ ತೆರಲು ತೆರಳುತ್ತಿದ್ದ ವೇಳೆ ದುರ್ಘಟನೆ ನಡೆದಿದೆ. ಮೇಲ್ನೋಟಕ್ಕೆ ಬೈಕ್​ ಸ್ಕಿಡ್​ ಆಗಿ ಕಲ್ಯಾಣಿಗೆ ಬಿದ್ದಿರುವಂತೆ ಕಂಡುಬಂದಿದೆ. ಅವರೇ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆಯೂ ಇದೆ. ಬೈಕ್​ ಕಲ್ಯಾಣಿಗೆ ಬೀಳದಿರುವುದು ಅನುಮಾನಕ್ಕೆ ಕಾರಣವಾಗಿದೆ.

ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕಾಗಮಿಸಿ ಇಬ್ಬರ ಶವ ಮೇಲಕ್ಕೆತ್ತಿದ್ದು, ಸರ್ಕಾರಿ ಶವಾಗಾರಕ್ಕೆ ಮರಣೋತ್ತರ ಪರೀಕ್ಷೆಗೆ ಕೊಂಡೊಯ್ಯಲಾಗಿದೆ. ರಂಗೇಗೌಡ ಸುಮಾರು ವರ್ಷಗಳ ಹಿಂದೆ ಪಟ್ಟಣದ ಕೆಂಪೇಗೌಡ ನಗರದಲ್ಲಿ ಮನೆ ನಿರ್ಮಿಸಿಕೊಂಡು ಜೀವನ ನಡೆಸುತ್ತಿದ್ದರು. ಅವರಿಗೆ ಇಬ್ಬರು ಪುತ್ರಿಯರಲ್ಲಿ ಸನ್ನಿಧಿ ಎರಡನೇ ಪುತ್ರಿ. ಹುಲುವೇನಹಳ್ಳಿಯ ರಂಗೇಗೌಡ ಅವರು ಪಟ್ಟಣದಲ್ಲಿ ದಿನಸಿ ಅಂಗಡಿ ಇಟ್ಟುಕೊಂಡಿದ್ದರು.

ಬೆಳಗ್ಗೆ ಮಂಗಳಮ್ಮ, ಸನ್ನಿಧಿ ಮನೆಯಿಂದ ತೆರಳಿರುವ ಬಗ್ಗೆ ಸಿಸಿಟಿವಿಯಲ್ಲಿ ದೃಶ್ಯ ಸೆರೆಯಾಗಿದ್ದು, ಸ್ವತಃ ಅವರೇ ಕಲ್ಯಾಣಿಗೆ ಬಿದ್ದಿದ್ದಾರೆಯೇ ಅಥವಾ ಆಕಸ್ಮಿಕವಾಗಿ ಬಿದ್ದಿದ್ದಾರೆಯೇ ಎಂಬ ಬಗ್ಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಈ ಬಗ್ಗೆ ಮಾಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:ವಿದ್ಯುತ್ ಕಂಬಕ್ಕೆ ತ್ರಿಚಕ್ರ ಸ್ಕೂಟರ್ ಡಿಕ್ಕಿ: ಇಬ್ಬರು ಸಾವು, ಮತ್ತೊಬ್ಬರ ಸ್ಥಿತಿ ಗಂಭೀರ

ABOUT THE AUTHOR

...view details