ರಾಮನಗರ:ಜಿಲ್ಲೆಯ ಚನ್ನಪಟ್ಟಣದ ಸೀಬನಹಳ್ಳಿ ಗುಡ್ಡೆಯ ಸಮೀಪ ತಲೆ, ಚರ್ಮವಿಲ್ಲದ ಸುಮಾರು 50 ಕ್ಕೂ ಹೆಚ್ಚು ಪ್ರಾಣಿಗಳ ಮೃತದೇಹ ಪತ್ತೆಯಾಗಿವೆ. ಇದು ಸ್ಥಳೀಯ ಗ್ರಾಮಸ್ಥರಲ್ಲಿ ಆತಂಕ ಮೂಡಿದೆ. ಕಳೆದ ರಾತ್ರಿ ಸೀಬನಹಳ್ಳಿ ಗುಡ್ಡೆ ಪಕ್ಕದಲ್ಲಿ ಯಾರೋ ಪ್ರಾಣಿಗಳ ಮೃದೇಹ ಬಿಸಾಡಿ ಹೋಗಿದ್ದಾರೆ. ಇಂದು ಬೆಳ್ಳಂ ಬೆಳಗ್ಗೆ ತಲೆ - ಚರ್ಮವಿಲ್ಲದ ಪ್ರಾಣಿಗಳ ಮೃತದೇಹದ ರಾಶಿಕಂಡ ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ.
ತಲೆ-ಕಾಲು ಇಲ್ಲದ 50ಕ್ಕೂ ಹೆಚ್ಚು ಪ್ರಾಣಿಗಳ ಮೃತ ದೇಹಗಳು ಪತ್ತೆ ಓದಿ:ಅಣ್ಣಾವರು ಅಭಿನಯದ ಬಂಗಾರದ ಮನುಷ್ಯ ಬಿಡುಗಡೆಯಾಗಿ ಇಂದಿಗೆ 50 ವರ್ಷ; ಕಡಿಮೆಯಾಗದ ಚಾರ್ಮ್
ಯಾರೋ ಕಿಡಿಗೇಡಿಗಳು ಕಾಡು ಪ್ರಾಣಿಗಳನ್ನ ಕೊಂದು ಬೇಟೆ ಆಡಿ ಚರ್ಮ ಸುಲಿದು, ತಲೆಕತ್ತರಿಸಿಕೊಂಡು ಬಿಸಾಡಿರಬಹುದು ಎಂದು ಶಂಕಿಸಲಾಗಿದೆ. ಇನ್ನು ಕೆಲವರು ಸತ್ತ ಕುರಿಗಳನ್ನು ಅದರ ಮಾಲೀಕರು ಈ ರೀತಿ ಬಿಸಾಡಿರಬಹುದೆಂದೂ ಅನುಮಾನ ಪಟ್ಟಿದ್ದಾರೆ. ಅಷ್ಟೇ ಅಲ್ಲ ವಾಮಾಚಾರಕ್ಕೆ ಪ್ರಾಣಿಗಳನ್ನ ಬಳಸಿಕೊಂಡಿರಬಹುದು ಅಂತಾ ಚರ್ಚೆ ನಡೆಸುತ್ತಿದ್ದಾರೆ. ಗ್ರಾಮದಲ್ಲಿ ಹೀಗೆ ತರಹೇವಾರಿ ಚರ್ಚೆಯಾಗುತ್ತಿದೆ.
ಓದಿ:ಹಸಿರು ಇಂಧನ ಬಳಕೆ ಉತ್ತೇಜಿಸುವ ನವೀಕರಿಸಬಹುದಾದ ಇಂಧನ ನೀತಿಗೆ ಸಚಿವ ಸಂಪುಟ ಸಭೆ ಅಸ್ತು!
ಸದ್ಯಕ್ಕೆ ಚನ್ನಪಟ್ಟಣ ತಾಲೂಕಿನ ಎಂ.ಕೆ.ದೊಡ್ಡಿ ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸುತ್ತಿದ್ದಾರೆ.