ಕರ್ನಾಟಕ

karnataka

ETV Bharat / state

ಮೈಸೂರು- ರಾಮನಗರದಲ್ಲಿ ಮುಷ್ಕರಕ್ಕೆ ನೈತಿಕ ಬೆಂಬಲ: ಎಂದಿನಂತೆ ಸಂಚರಿಸಿದ ಬಸ್​ಗಳು - ಸಾರಿಗೆ ಮುಷ್ಕರಕ್ಕೆ ಯಾವುದೇ ಬೆಂಬಲ ವ್ಯಕ್ತವಾಗಿಲ್ಲ

ಅರಮನೆ ನಗರಿಯಲ್ಲಿ ಸಾರಿಗೆ ಮುಷ್ಕರಕ್ಕೆ ಯಾವುದೇ ಬೆಂಬಲ ವ್ಯಕ್ತವಾಗಿಲ್ಲ. ಇನ್ನು ರಾಮನಗರದಲ್ಲಿ ಮುಷ್ಕರದಿಂದಾಗಿ ಯಾವುದೇ ಬಸ್ ಸಂಚಾರದಲ್ಲಿ ವ್ಯತ್ಯಯ ಇಲ್ಲ.

Moral support for strike in Mysore
ಮೈಸೂರು- ರಾಮನಗರದಲ್ಲಿ ಮುಷ್ಕರಕ್ಕೆ ನೈತಿಕ ಬೆಂಬಲ

By

Published : Feb 20, 2020, 12:09 PM IST

ಮೈಸೂರು/ ರಾಮನಗರ: ಅರಮನೆ ನಗರಿಯಲ್ಲಿ ಸಾರಿಗೆ ಮುಷ್ಕರಕ್ಕೆ ಯಾವುದೇ ಬೆಂಬಲ ವ್ಯಕ್ತವಾಗಿಲ್ಲ. ಎಂದಿನಂತೆ ಸಾರಿಗೆ ಬಸ್​​ಗಳು ಸಂಚರಿಸುತ್ತಿವೆ.

ವಿವಿಧ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಸಾರಿಗೆ ನೌಕರರು ಕರೆ ನೀಡಿದ್ದ ಮುಷ್ಕರಕ್ಕೆ, ನಗರದಲ್ಲಿ ಹಾಗೂ ಜಿಲ್ಲಾ ತಾಲೂಕು ಕೇಂದ್ರಗಳಲ್ಲಿ ಯಾವುದೇ ಬೆಂಬಲ ವ್ಯಕ್ತವಾಗಿಲ್ಲ.ಈ ಮುಷ್ಕರಕ್ಕೆ ನೈತಿಕ ಬೆಂಬಲ ನೀಡಿದ್ದೀವೆ, ಆದರೆ ಕರ್ತವ್ಯಕ್ಕೆ ಹಾಜರಾಗಿ ಕೆಲಸ ನಿರ್ವಹಿಸುತ್ತಿದ್ದೇವೆ ಎನ್ನುತ್ತಾರೆ ಹೆರಸರನ್ನು ಹೇಳಲು ಇಚ್ಚಿಸದ ನಗರ ಸಾರಿಗೆ ಬಸ್ ಚಾಲಕ.

ಮೈಸೂರು- ರಾಮನಗರದಲ್ಲಿ ಮುಷ್ಕರಕ್ಕೆ ನೈತಿಕ ಬೆಂಬಲ

ರಾಮನಗರದಲ್ಲಿ ಬಸ್​​ ಸಂಚಾರದಲ್ಲಿ ವ್ಯತ್ಯಯ ಇಲ್ಲ:

ಮುಷ್ಕರದಿಂದಾಗಿ ರಾಮನಗರ ಜಿಲ್ಲೆಯಲ್ಲಿ ಯಾವುದೇ ಬಸ್ ಸಂಚಾರದಲ್ಲಿ ವ್ಯತ್ಯಯ ಇಲ್ಲ. ಎಂದಿನಂತೆ ಬೆಂಗಳೂರು ಮೈಸೂರು ಕಡೆಗೆ ಬಸ್ ಸಂಚಾರ ಇದ್ದು, ಶಾಲಾ‌- ಕಾಲೇಜು, ಕೆಲಸಕ್ಕೆ ತೆರಳಬೇಕಾದವರಿಗೆ ಯಾವುದೇ ತೊಂದರೆ ಇಲ್ಲ. ಸಹಜವಾಗಿ ಎಂದಿನಂತೆ ಬಸ್ ಸಂಚಾರ ಆರಂಭವಾಗಿದ್ದು, ಕೆಲವು ನೌಕರರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಿದ್ದಾರೆ.

ABOUT THE AUTHOR

...view details