ಕರ್ನಾಟಕ

karnataka

ETV Bharat / state

ದೇವಾಲಯದ ಹುಂಡಿ ಒಡೆದು ಹಣ ಕಳ್ಳತನ - kannada news

ದೇವಾಲಯದ ಬಾಗಿಲು ಮುರಿದು 50 ಸಾವಿರ ಸಾವಿರ ಹಣವನ್ನ ದೋಚಿ ಪರಾರಿಯಾದ ಕಳ್ಳರು.

ದೇವಾಲಯ ಹುಂಡಿ ಹೊಡೆದು ಹಣ ಕಳ್ಳತನ

By

Published : Mar 30, 2019, 6:44 PM IST

ರಾಮನಗರ :ದೇವಸ್ಥಾನದ ಹುಂಡಿ ಒಡೆದು ಹಣ ಕಳ್ಳತನ ಮಾಡಿರುವ ಘಟನೆ ನಗರದ ಬೆಂಗಳೂರು-ಮೈಸೂರು ಹೆದ್ದಾರಿ ಪಕ್ಕದ ಜಿಲ್ಲಾಧಿಕಾರಿ ಕಚೇರಿ ಎದುರು ಇರುವ ಪಂಚಮುಖಿ ಆಂಜನೇಯ ಸ್ವಾಮಿ ದೇವಾಲಯದಲ್ಲಿ ನಡೆದಿದೆ.

ದೇವಾಲಯ ಹುಂಡಿ ಹೊಡೆದು ಹಣ ಕಳ್ಳತನ

ಬೆಳಗಿನ ಜಾವ ಬಂದು ದುಷ್ಕರ್ಮಿಗಳು ದೇವಾಲಯದ ಬಾಗಿಲು ಮುರಿದು ಹುಂಡಿಯನ್ನ ಒಡೆದು ಸುಮಾರು 50 ಸಾವಿರ ಹಣವನ್ನ ದೋಚಿ ಪರಾರಿಯಾಗಿದ್ದಾರೆ. ಕಿಡಿಗೇಡಿಗಳ ಚಲನವಲನಗಳು ದೇವಾಲಯದ ಸಿಸಿಟಿವಿಯಲ್ಲಿ ಸೆರೆಯಾಗಿವೆ. ಈ ಹಿಂದೆಯೂ ಕೂಡ ಇದೇ ದೇವಾಲಯದಲ್ಲಿ ಕಳ್ಳತನವಾಗಿತ್ತು. ಸದ್ಯ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಸಿಸಿಟಿವಿ ದೃಶ್ಯಾವಳಿಯನ್ನ ವಶಪಡಿಸಿಕೊಂಡಿದ್ದಾರೆ. ರಾಮನಗರ ಟೌನ್ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.

ಹೆಚ್ಚಾದ ಕಳವು ಪ್ರಕರಣ

ನಗರ ಪ್ರದೇಶದಲ್ಲಿ ಇತ್ತೀಚೆಗೆ ಕಳವು ಪ್ರಕರಣಗಳು ಹೆಚ್ಚಾಗುತ್ತಿದ್ದು, ಪೊಲೀಸರು ಹಾಗೂ ಜನಸಾಮಾನ್ಯರ ಜೊತೆಗಿನ‌ ಬಾಂಧವ್ಯ ಕಡಿಮೆಯಾಗಿರುವುದೇ ಕಾರಣ ಎಂದು ಹೊರಾಟಗಾರ ರಾಜೀವ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪೊಲೀಸರು ರಾತ್ರಿಯ ಸಮಯ‌ ಕರ್ತವ್ಯ ನಿರ್ವಹಣೆಗಿಂತ ಹೆಚ್ಚು ಅನ್ಯ ವಿಚಾರಗಳಲ್ಲಿ ಬ್ಯುಸಿಯಾಗಿದ್ದಾರೆ. ನಗರದಲ್ಲಿ ಸಿಸಿಟಿವಿಗಳು ಕೆಟ್ಟು ನಿಂತಿವೆ. ಕನಿಷ್ಠ ಅವುಗಳನ್ನು ದುರಸ್ತಿ ಮಾಡುವ ಪ್ರಯತ್ನ ಕೂಡ ನಡೆಯುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ABOUT THE AUTHOR

...view details