ಕರ್ನಾಟಕ

karnataka

ETV Bharat / state

ಕೋವಿಡ್​​ ಲಸಿಕೆ ಪಡೆದ ಶಾಸಕಿ ಅನಿತಾ ಕುಮಾರಸ್ವಾಮಿ - mla anitha kumarswamy latest news

ತೀರಾ ಅವಶ್ಯಕತೆ ಇದ್ರೆ ಲಾಕ್ ಡೌನ್ ಮಾಡಲಿ. ಒಂದು ವಾರ ಇಲ್ಲವೇ, 15 ದಿನ ಲಾಕ್ ಡೌನ್ ಮಾಡಲಿ ಎಂದು ಶಾಸಕಿ ಅನಿತಾ ಕುಮಾರಸ್ವಾಮಿ ಸಲಹೆ ನೀಡಿದರು. ‌

mla anitha kumarswamy takes corona vaccine
ಶಾಸಕಿ ಅನಿತಾ ಕುಮಾರಸ್ವಾಮಿ

By

Published : Mar 22, 2021, 7:29 PM IST

ರಾಮನಗರ:ನಗರದ ಜಿಲ್ಲಾ‌ ಆಸ್ಪತ್ರೆಯಲ್ಲಿ ಶಾಸಕಿ ಅನಿತಾ ಕುಮಾರಸ್ವಾಮಿ ಕೋವಿಶೀಲ್ಡ್ ಲಸಿಕೆ ಪಡೆದುಕೊಂಡರು.

ಶಾಸಕಿ ಅನಿತಾ ಕುಮಾರಸ್ವಾಮಿ

ರಾಮನಗರದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈಗಾಗಲೇ ರಾಜ್ಯದಲ್ಲಿ ಕೊರೊನಾ 2ನೇ ಅಲೆ ಪ್ರಾರಂಭವಾಗಿದೆ. ನಾನು ಇಂದು ಕೋವಿಶೀಲ್ಡ್ ಲಸಿಕೆ ಪಡೆದುಕೊಂಡಿದ್ದೇನೆ. ಸಾರ್ವಜನಿಕರು ಯಾವುದೇ ಆತಂಕ ಪಡದೇ ಲಸಿಕೆ ಪಡೆದು ಕೊರೊನಾ ರೋಗದಿಂದ ಮುಕ್ತಿ ಹೊಂದುವಂತೆ ಅನಿತಾ ಕುಮಾರಸ್ವಾಮಿ ಕರೆ ನೀಡಿದರು.

ಲಾಕ್​ಡೌನ್​ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು ತೀರಾ ಅವಶ್ಯಕತೆ ಇದ್ರೆ ಲಾಕ್ ಡೌನ್ ಮಾಡಲಿ. ಒಂದು ವಾರ ಇಲ್ಲವೇ, 15 ದಿನ ಲಾಕ್ ಡೌನ್ ಮಾಡಲಿ ಎಂದು ಸಲಹೆ ನೀಡಿದರು. ‌

ABOUT THE AUTHOR

...view details