ರಾಮನಗರ :ರಾಜಕೀಯ ನಾಯಕರು ಜವಾಬ್ದಾರಿಯುತವಾಗಿ ಮಾತನಾಡಬೇಕು. ವೈಯಕ್ತಿಕವಾಗಿ ಯಾರೊಬ್ಬರ ಮೇಲೆ ಟೀಕೆ ಮಾಡುವುದು ಸರಿಯಲ್ಲ ಎಂದು ಜೆಡಿಎಸ್ ಶಾಸಕಿ ಅನಿತಾ ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜೆಡಿಎಸ್ ಶಾಸಕಿ ಅನಿತಾ ಕುಮಾರಸ್ವಾಮಿ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಗೋವಿಂದಹಳ್ಳಿ ಗ್ರಾಮದಲ್ಲಿ ನೂತನ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಜಮೀರ್ ಅಹ್ಮದ್ ನಾಲಿಗೆ ಮೇಲೆ ನಿಯಂತ್ರಣ ಇಟ್ಟುಕೊಂಟು ಮಾತನಾಡಬೇಕು. ಜನರು ರಾಜಕೀಯ ನಾಯಕರನ್ನು ಗಮನಿಸುತ್ತಾರೆ. ಮುಂದಿನ ದಿನಗಳಲ್ಲಿ ಜನರೇ ಈ ಬಗ್ಗೆ ನಿರ್ಧಾರ ಮಾಡುತ್ತಾರೆ ಎಂದರು.
ಕುಮಾರಸ್ವಾಮಿ ಅವರು ಎಂಪಿ ಆಗಿದ್ದಾಗ ಜಮೀರ್ ಪರಿಚಯವಾಗಿದ್ದು, ಇವರು ಹೇಗೆ ಕುಮಾರಸ್ವಾಮಿ ಅವರನ್ನು ಸಾಕಿದರು. ಅವರಿಗೇನು ಅಪ್ಪ - ಅಮ್ಮ ಇರಲಿಲ್ಲವಾ, ಅವರ ಹೇಳಿಕೆ ಎಲ್ಲ ಬಾಲಿಷ ಎನಿಸುತ್ತದೆ ಎಂದರು.
ಚುನಾವಣೆ ಬಂದಾಗ ಮಾತ್ರ ಕುಮಾರಸ್ವಾಮಿ ಅವರು ಟಾರ್ಗೆಟ್ ಆಗುತ್ತಾರೆ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿ, ಈಗ ಚುನಾವಣೆ ಇದೆಯಲ್ಲ ಅದಕ್ಕೆ ಒಬ್ಬರಿಗೊಬ್ಬರು ಆರೋಪ-ಪ್ರತ್ಯಾರೋಪ ಮಾಡುತ್ತಿದ್ದಾರೆ. ಮುಂದೆ ಇದೆಲ್ಲವೂ ನಿಲ್ಲುತ್ತದೆ ಬಿಡಿ ಎಂದರು.
ಇದನ್ನೂ ಓದಿ: ಬಿಜೆಪಿ, ಕಾಂಗ್ರೆಸ್ ಮತದಾರರಿಗೆ ಹಣ ಹಂಚುತ್ತಿವೆ: ಹೆಚ್ಡಿಕೆ ಆರೋಪ