ಕರ್ನಾಟಕ

karnataka

ETV Bharat / state

ಶಾಲೆಗೆ ಸಚಿವ ಸುರೇಶ್​ ಕುಮಾರ್​ ದಿಢೀರ್​ ಭೇಟಿ... ವಿದ್ಯಾಗಮನ ಕಾರ್ಯಕ್ರಮ ವೀಕ್ಷಣೆ - ಸಚಿವ ಸುರೇಶ್ ಕುಮಾರ್ ಸುದ್ದಿ,

ವೀರಪ್ಪನ್​ನಂತೆ ಯಾರೂ ಆಗಬಾರದು ಎಂದು ಮಕ್ಕಳಿಗೆ ತಿಳಿಸಿಕೊಡಲಾಗುವುದೆಂದು ಶಿಕ್ಷಣ ಸಚಿವ ಸುರೇಶ್​ ಕುಮಾರ್​ ಹೇಳಿದರು.

Minister Suresh Kumar, Minister Suresh Kumar visit, Minister Suresh Kumar visit to Ramanagar, Minister Suresh Kumar news, Minister Suresh Kumar 2020 news, ಸಚಿವ ಸುರೇಶ್ ಕುಮಾರ್, ಸಚಿವ ಸುರೇಶ್ ಕುಮಾರ್ ಭೇಟಿ, ರಾಮನಗರಕ್ಕೆ ಸಚಿವ ಸುರೇಶ್ ಕುಮಾರ್ ಭೇಟಿ, ಸಚಿವ ಸುರೇಶ್ ಕುಮಾರ್ ಸುದ್ದಿ, ಸಚಿವ ಸುರೇಶ್ ಕುಮಾರ್ 2020 ಸುದ್ದಿ,
ವೀರಪ್ಪನ್ ರೀತಿ ಯಾರು ಮತ್ತೆ ಹುಟ್ಟಬಾರದು ಎಂದ ಶಿಕ್ಷಣ ಸಚಿವ

By

Published : Sep 5, 2020, 6:27 AM IST

ರಾಮನಗರ: ಶಿಕ್ಷಣ ಸಚಿವ ಸುರೇಶ್ ಕುಮಾರ್ ಯಾವುದೇ ಮಾಹಿತಿ ನೀಡದೆ ದಿಢೀರ್ ಸರ್ಕಾರಿ ಶಾಲೆಗೆ ಭೇಟಿ ನೀಡಿ ಮಕ್ಕಳಿಗಾಗಿ ನಡೆಯುತ್ತಿರುವ ವಿದ್ಯಾಗಮನ ಕಾರ್ಯಕ್ರಮ ವೀಕ್ಷಿಸಿದರು.‌ ಅಲ್ಲದೆ ಶಿಕ್ಷಕರ ಕಾರ್ಯವೈಖರಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಮಾಗಡಿಯ ಖಾಸಗಿ ಶಾಲೆಗಳಲ್ಲಿ ಈಗಾಗಲೇ ಆನ್‌ಲೈನ್ ಕ್ಲಾಸ್‌ಗಳು ನಡೆಯುತ್ತಿದೆ. ಆದರೆ ಸರ್ಕಾರಿ ಶಾಲೆಗಳಲ್ಲಿ ಆನ್‌ಲೈನ್ ಕ್ಲಾಸ್ ಮಾಡಲು ತಾಂತ್ರಿಕ ಸಮಸ್ಯೆಗಳಿರುವುದರಿಂದ ಬದಲಾಗಿ ಶಿಕ್ಷಣ ತಜ್ಞ ಡಾ. ಎಂ.ಕೆ.ಶ್ರೀಧರ್ ತಂಡ ನೀಡಿದ ಹಲವು ಸಲಹೆಗಳ ಪೈಕಿ ಒಂದು ಸಲಹೆಯನ್ನು ಪಡೆದು ವಿದ್ಯಾಗಮನ ಮೂಲಕ ಮಕ್ಕಳು ಇರುವ ಕಡೆಯಲ್ಲೇ ಶಿಕ್ಷಕರು ಹೋಗಿ ಪಾಠ ಹೇಳಿಕೊಡುವ ಕಾರ್ಯಕ್ರಮ ಉತ್ತಮವಾಗಿದೆ. ಬಯಲು, ದೇವಸ್ಥಾನ, ರಂಗಮಂದಿರ, ಮನೆಯ ಛಾವಣಿ ಹತ್ತಿರ ಪಾಠ ಹೇಳಿಕೊಡಲಾಗುತ್ತಿದೆ. ಇದು ಇಡೀ ರಾಜ್ಯಾದ್ಯಂತ ಯಶಸ್ವಿಯಾಗಿದೆ ಎಂದರು.

ಅಕ್ಟೋಬರ್‌ನಲ್ಲಿ ಶಾಲೆ ಆರಂಭ?

ಕೊರೊನಾ ಮಹಾಮಾರಿಯಿಂದ ಶಾಲಾ ಕಾಲೇಜುಗಳು ಇಲ್ಲಿಯವರೆಗೂ ಪ್ರಾರಂಭವಾಗಿಲ್ಲ. ಜೂನ್​ನಲ್ಲಿ ಶಾಲೆ ಆರಂಭವಾಗಬೇಕಿತ್ತು. ಆದರೆ ಸೆಪ್ಟೆಂಬರ್ ಆದರೂ ಆರಂಭವಾಗಿಲ್ಲ. ಸೆಪ್ಟೆಂಬರ್ 20ರ ನಂತರ ಮಕ್ಕಳು ಶಾಲೆಗೆ ಬರಬಹುದು. ಆದರೆ ಶಾಲೆ ಆರಂಭಿಸುವಂತಿಲ್ಲ. ಸೆಪ್ಟೆಂಬರ್‌ನಲ್ಲಿ ಕೇಂದ್ರ ಸರ್ಕಾರ ಹಸಿರು ನಿಶಾನೆ ತೋರಿಸಿದರೆ ನಮ್ಮ ಪ್ರಕ್ರಿಯೆಯನ್ನು ಆರಂಭಿಸುತ್ತೇವೆ. ಅಕ್ಟೋಬರ್‌ನಲ್ಲೇ ಶಾಲೆ ಆರಂಭವಾಗುತ್ತದೆಂಬ ಬಗ್ಗೆ ಸಚಿವರು ಸ್ಪಷ್ಟನೆ ನೀಡಲಿಲ್ಲ.

ವೀರಪ್ಪನ್​ನಂತೆ ಯಾರೂ ಆಗಬಾರದು ಎಂದ ಶಿಕ್ಷಣ ಸಚಿವ

ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ಆರಂಭ...

ಪ್ರತೀ ವರ್ಷದಂತೆ ಈ ವರ್ಷವು ಸಹ ಶಿಕ್ಷಕರ ವರ್ಗಾವಣೆ ಆರಂಭವಾಗಿದ್ದು, ಕಳೆದ ವರ್ಷ ಕಡ್ಡಾಯ ವರ್ಗಾವಣೆಯಲ್ಲಿ ಹೋಗಿರುವ ಶಿಕ್ಷಕರು ಸಾಕಷ್ಟು ವೇದನೆ ಅನುಭವಿಸಿದ್ದಾರೆ. ಅವರಿಗೆ ಪುನಃ ತಾವಿರುವ ಶಾಲೆಗೆ ಬರಲು ಅವಕಾಶ ಕೊಡಲಾಗುತ್ತದೆ. ನಂತರ ಉಳಿದ ಪ್ರಕ್ರಿಯೆ ಇನ್ನೊಂದು ವಾರದಲ್ಲಿ ಆರಂಭವಾಗಲಿದೆ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದರು.

ಪಠ್ಯಕ್ರಮ ಇಳಿಕೆ ಬಗ್ಗೆ ಸ್ಪಷ್ಟನೆ ಇಲ್ಲ...

ಕೊರೊನಾ ಮಹಾಮಾರಿಯಿಂದ ಶಾಲೆಗಳು ತಡವಾಗುತ್ತಿರುವುದರಿಂದ ಪಠ್ಯಕ್ರಮ ಕಡಿಮೆ ಮಾಡುವುದರ ಬಗ್ಗೆ ಇನ್ನೂ ಸ್ಪಷ್ಟವಾಗಿ ನಿರ್ಧಾರ ಮಾಡಿಲ್ಲ. ಶಿಕ್ಷಕರು ಈಗಿರುವ ಪಠ್ಯಕ್ರಮವನ್ನು ಸಂಪೂರ್ಣ ಮುಗಿಸಬಹುದೆಂದು ಹೇಳುತ್ತಿದ್ದಾರೆ. ಶಾಲೆ ಆರಂಭವಾದ ನಂತರ ಎಷ್ಟು ದಿನ ಸಮಯ ಸಿಗುತ್ತದೆ. ಅದರ ಮೇಲೆ ನಿರ್ಧಾರ ಮಾಡಬಹುದು. ಶನಿವಾರ ಕೂಡ ಪೂರ್ಣ ದಿನ ಶಾಲೆ ನಡೆಸುವ ಬಗ್ಗೆ ಚಿಂತನೆ ನಡೆದಿದೆ ಎಂದರು.

ವೀರಪ್ಪನ್​ನಂತೆ ಯಾರೂ ಆಗಬಾರದು...

ಮುಂದಿನ ಪೀಳಿಗೆಗೆ ವೀರಪ್ಪನ್​ನಂತಹ ನರಹಂತಕರು ಯಾರೂ ಆಗಬಾರದು ಎಂಬ ನಿಟ್ಟಿನಲ್ಲಿ ಚಾಮರಾಜನಗರದ ಗೋಪಿನಾಥ್ ನಗರದಲ್ಲಿ ಅರಣ್ಯಾಧಿಕಾರಿ ಶ್ರೀನಿವಾಸ್‌ ಅವರನ್ನು ವೀರಪ್ಪನ್ ಶಿರಚ್ಛೇದನ ಮಾಡಿರುವ ಜಾಗದಲ್ಲಿ ಸ್ಮಾರಕವಿದೆ. ಮಿಣ್ಯಂ ಎಂಬ ಜಾಗದಲ್ಲಿ ಸಿ.ಪಿ.ಹರಿಕೃಷ್ಣ, ಶಕಿಲಂ ಅವರನ್ನೆಲ್ಲಾ ವೀರಪ್ಪನ್ ಕರೆಸಿ ಮೋಸ ಮಾಡಿ ಮೇಲಿನಿಂದ ಕಲ್ಲು ಎತ್ತು ಹಾಕಿ ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ರಾಮಪುರ ಪೊಲೀಸ್ ಠಾಣೆಯಲ್ಲಿ ರಾತ್ರಿ ಪೊಲೀಸ್ ಸಿಬ್ಬಂದಿ ಮಲಗಿದ್ದಾಗ ವೀರಪ್ಪನ್ ಗುಂಪು ನುಗ್ಗಿ ಎಲ್ಲರನ್ನು ಹತ್ಯೆ ಮಾಡಿದೆ. ಈ ಮೂರು ಜಾಗಗಳಲ್ಲಿ ಸ್ಮಾರಕ ಮಾಡಿ ಮಕ್ಕಳಿಗೆ ವೀರಪ್ಪನ್​ನಂತೆ ಯಾರೂ ಆಗಬಾರದು ಎಂದು ತಿಳಿಸಿಕೊಡಲಾಗುತ್ತೆ. ಇನ್ನು ಈ ಸಮಾಜದಲ್ಲಿ ಯಾರು ವೀರಪ್ಪನ್​ನಂತೆ ಇರಬಾರದು ಎಂಬ ನಿಟ್ಟಿನಲ್ಲಿ ಸ್ಮಾರಕಗಳ ನಿರ್ಮಾಣ ಮಾಡಲಿದ್ದೇವೆಂದು ಸಚಿವರು ತಿಳಿಸಿದರು.

ABOUT THE AUTHOR

...view details