ಕರ್ನಾಟಕ

karnataka

ETV Bharat / state

ವಿಧಾನಸಭಾ ಸಮರ ತಯಾರಿಗೆ 'ಸೈನಿಕ'ನಿಗೆ ಪಟ್ಟ.. ಸಿ ಪಿ ಯೋಗೇಶ್ವರ್​ಗೆ ಸಚಿವ ಸ್ಥಾನ ಸಾಧ್ಯತೆ!? - ರಾಜ್ಯ ಸಚಿವ ಸಂಪುಟ ವಿಸ್ತರಣೆ

ಪಿವೈಗೆ ಸಚಿವ ಸ್ಥಾನ ನೀಡಿದ್ರೆ ಹಳೇ ಮೈಸೂರು ಪ್ರಾಂತ್ಯದಲ್ಲಿ ಬಿಜೆಪಿ ಬಲವಾಗಲಿದೆ. ಈ ಕಾರಣದಿಂದಲೇ ಯೋಗೇಶ್ವರ್‌ಗೆ ಪ್ರಮುಖ ಖಾತೆ ನೀಡಿ ಪಕ್ಷ ಸಂಘಟನೆಯ ಜವಾಬ್ದಾರಿ ಕೂಡ ನೀಡಲಿದ್ದಾರೆ ಎಂಬ ಮಾಹಿತಿ ಇದೆ. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮುರಿಸಿ, ಬಿಜೆಪಿ ಸರ್ಕಾರ ಬರಲು ತಮ್ಮ ಪಾತ್ರದ ಬಗ್ಗೆ ಕಮಲ ವರಿಷ್ಠರ ಗಮನ ಸೆಳೆದು ಮಂತ್ರಿಗಿರಿ ಗಿಟ್ಟಿಸಿಕೊಳ್ಳಲಿದ್ದಾರೆಂದು ಚರ್ಚೆಯಾಗುತ್ತಿದೆ..

minister post for  C P Yogeshwar
ಸಿ.ಪಿ.ಯೋಗೇಶ್ವರ್

By

Published : Mar 22, 2022, 12:07 PM IST

Updated : Mar 22, 2022, 12:13 PM IST

ರಾಮನಗರ: ಉತ್ತರಪ್ರದೇಶ ಸೇರಿದಂತೆ ಪಂಚರಾಜ್ಯ ಚುನಾವಣೆಯಲ್ಲಿ ಭರ್ಜರಿ ಗೆಲುವು ಪಡೆದಿರುವ ಬಿಜೆಪಿ ಸರ್ಕಾರ ಇದೀಗ ರಾಜ್ಯದಲ್ಲೂ ಮತ್ತೆ ಅಧಿಕಾರಕ್ಕೆ ಬರುವುದಕ್ಕೆ ಈಗಿನಿಂದಲೇ ತಯಾರಿ ನಡೆಸಿದೆ. ಪಕ್ಷ ಮತ್ತು ಸರ್ಕಾರದಲ್ಲಿ ಭಾರಿ ಬದಲಾವಣೆ ಮಾಡಲಿರುವ ಬಗ್ಗೆ ಮಾಹಿತಿ ಈಗಾಗಲೇ ಲಭ್ಯವಾಗಿದೆ.

ಸಂಪುಟದಲ್ಲಿ ಸಾಕಷ್ಟು ಬದಲಾವಣೆ ತರಲು ಮುಂದಾಗಿರುವ ಬಿಜೆಪಿ ವರಿಷ್ಠರು, ಅಧಿಕಾರದಲ್ಲಿರುವ ಹಲವು ಸಚಿವರಿಗೆ ಪಕ್ಷ ಸಂಘಟನೆಯ ಜವಾಬ್ದಾರಿ ವಹಿಸಲಿದ್ದಾರೆ. ಇನ್ನು ಕೆಲವರಿಗೆ ಸಚಿವ ಸ್ಥಾನ ನೀಡಲಿದ್ದಾರೆ. ಮಾಜಿ ಸಚಿವ ಸಿ ಪಿ ಯೋಗೇಶ್ವರ್​ಗೆ ಸಚಿವ ಸಂಪುಟದಲ್ಲಿ ಸ್ಥಾನ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ.

ಮುಂದೆ ನಡೆಯಬಹುದಾದ ಬದಲಾವಣೆಯಲ್ಲಿ ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ಅವರಿಗೆ ಯುಗಾದಿಗೆ ಮಂತ್ರಿ ಯೋಗದ ಗಿಫ್ಟ್ ಸಿಗಲಿದೆ ಎನ್ನಲಾಗಿದೆ. ರಾಮನಗರ ಜಿಲ್ಲೆ ಹೆಚ್ ಡಿ ಕುಮಾರಸ್ವಾಮಿ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರ ಪ್ರಾಬಲ್ಯವಿರುವ ಜಿಲ್ಲೆ.

ಇವರಿಬ್ಬರಿಂದ ಮುಖ್ಯಮಂತ್ರಿ ಸ್ಥಾನಕ್ಕೆ ಪೈಪೋಟಿ ಇರಲಿದೆ. ಆದರೆ, ಬಿಜೆಪಿ ಚನ್ನಪಟ್ಟಣ ಹೊರತು ಪಡಿಸಿದರೆ ಬೇರೆ ತಾಲೂಕುಗಳಲ್ಲಿ ನಗಣ್ಯ. ಹೆಚ್​ಡಿಕೆ ಮತ್ತು ಡಿಕೆಶಿ ವಿರುದ್ಧ ಸದಾ ಕೆಂಡಕಾರುವ ಯೋಗೇಶ್ವರ್​​​ಗೆ ಸಂಪುಟ ವಿಸ್ತರಣೆಯಲ್ಲಿ ಸಚಿವ ಸ್ಥಾನ ಕೊಟ್ಟರೆ ರಾಮನಗರ ಮತ್ತು ನೆರೆಯ ಜಿಲ್ಲೆಗಳಲ್ಲಿ ಪಕ್ಷ ಸಂಘಟನೆಯಾಗುತ್ತದೆ ಎನ್ನುವ ಮಾತು ಸ್ಥಳೀಯವಾಗಿ ಪ್ರಬಲವಾಗಿ ಕೇಳಿ ಬರುತ್ತಿದೆ.

ಹಳೇ ಮೈಸೂರು ಪ್ರಾಂತ್ಯದಲ್ಲಿ ಪಕ್ಷ ಬಲವರ್ಧನೆ :ಒಂದು ವೇಳೆ, ಸಿಪಿವೈಗೆ ಸಚಿವ ಸ್ಥಾನ ನೀಡಿದ್ರೆ ಹಳೇ ಮೈಸೂರು ಪ್ರಾಂತ್ಯದಲ್ಲಿ ಬಿಜೆಪಿ ಬಲವಾಗಲಿದೆ. ಈ ಕಾರಣದಿಂದಲೇ ಯೋಗೇಶ್ವರ್‌ಗೆ ಪ್ರಮುಖ ಖಾತೆ ನೀಡಿ ಪಕ್ಷ ಸಂಘಟನೆಯ ಜವಾಬ್ದಾರಿ ಕೂಡ ನೀಡಲಿದ್ದಾರೆ ಎಂಬ ಮಾಹಿತಿ ಇದೆ. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮುರಿಸಿ, ಬಿಜೆಪಿ ಸರ್ಕಾರ ಬರಲು ತಮ್ಮ ಪಾತ್ರದ ಬಗ್ಗೆ ಕಮಲ ವರಿಷ್ಠರ ಗಮನ ಸೆಳೆದು ಮಂತ್ರಿಗಿರಿ ಗಿಟ್ಟಿಸಿಕೊಳ್ಳಲಿದ್ದಾರೆಂದು ಚರ್ಚೆಯಾಗುತ್ತಿದೆ.

ಸಂಪುಟ ವಿಸ್ತರಣೆ ವೇಳೆ ಸಚಿವ ಸ್ಥಾನ :ಜೆಡಿಎಸ್ ಜೊತೆಗೆ ಬಿಜೆಪಿ ಮೈತ್ರಿಮಾಡಿಕೊಳ್ಳುವುದಿಲ್ಲ ಎಂಬ ಸಂಗತಿಯನ್ನು ಬಿಜೆಪಿ ಉಸ್ತುವಾರಿ ಅರುಣ್‌ಸಿಂಗ್ ಸ್ಪಷ್ಟಪಡಿಸಿದ್ದಾರೆ. ಇದೀಗ ಹಳೇ ಮೈಸೂರು ಭಾಗದಲ್ಲಿ ಪಕ್ಷ ಸಂಘಟನೆ ಬಿಜೆಪಿಗೆ ಅಗತ್ಯವಾಗಿದ್ದು, ಇದಕ್ಕಾಗಿ ಯೋಗೇಶ್ವರ್‌ಗೆ ಅಧಿಕಾರ ನೀಡಿ ಹಳೇ ಮೈಸೂರು ಭಾಗದಲ್ಲಿ ಪಕ್ಷ ಸಂಘಟನೆ ಬಲಪಡಿಸುವ ಕಾರ್ಯಕ್ಕೆ ಚಾಲನೆ ನೀಡಲಿದ್ದಾರೆ ಎಂದು ಮೂಲಗಳು ಮಾಹಿತಿ ನೀಡಿವೆ. ಯೋಗೇಶ್ವರ್​ ಸಂಪುಟ ವಿಸ್ತರಣೆಯಲ್ಲಿ ಸಚಿವರಾಗುವುದು ಖಚಿತ ಎನ್ನಲಾಗುತ್ತಿದೆ.

ರಾಜಕೀಯ ಹಿನ್ನೆಲೆ : ಹಾಗೆಯೇ ಪಕ್ಷದ ಸೂಚನೆಯಂತೆ ಒಮ್ಮೆ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಿಂದಲೂ ಸ್ಪರ್ಧೆ ಮಾಡಿದ್ದರು. ಹಿಂದಿನ ಬಿಜೆಪಿ ಸರ್ಕಾರದಲ್ಲಿ ಅರಣ್ಯ ಸಚಿವರಾಗಿದ್ದಾಗ ಡಿ.ಕೆ.ಬ್ರದರ್ಸ್ ಹಾಗೂ ಹೆಚ್.ಡಿ.ಕುಮಾರಸ್ವಾಮಿಗೆ ರಾಜಕೀಯವಾಗಿ ಸೆಡ್ಡು ಹೊಡೆದಿದ್ದರು. ರಾಮನಗರ ಜಿಲ್ಲೆಯ ಜೊತೆಗೆ ಮಂಡ್ಯ ಜಿಲ್ಲೆಯ ಉಸ್ತುವಾರಿ ಸಚಿವರಾಗಿದ್ದರು.

ಮೇಕೆದಾಟು ಯೋಜನೆಗೆ ಬೇಕಾದ ಎಲ್ಲ ಕ್ರಮಗಳನ್ನು ಕೈಗೊಳ್ಳುತ್ತೇವೆ: ಸಿಎಂ ಬೊಮ್ಮಾಯಿ

2023ರಲ್ಲಿ ರಾಜ್ಯದಲ್ಲಿ ಬಿಜೆಪಿಗೆ ಶಕ್ತಿ ಬರಬೇಕು. ಅದರಲ್ಲಿಯೂ ವಿಶೇಷವಾಗಿ ಹಳೇ ಮೈಸೂರು ಭಾಗದಲ್ಲಿ ಒಕ್ಕಲಿಗರ ಮತ ಸೆಳೆಯಲು, ಆ ವರ್ಚಸ್ಸು ಇರುವ ಪ್ರಬಲ ನಾಯಕ ಯೋಗೇಶ್ವರ್​​​​ಗೆ ಸಚಿವ ಸ್ಥಾನ ಫಿಕ್ಸ್ ಎಂದು ಆರ್‌ಎಸ್‌ಎಸ್ ಮೂಲಕ್ಕೆ ಮಾಹಿತಿ ಕಳುಹಿಸುವ ಕೆಲಸ ನಡೆಯುತ್ತಿದೆ. ಆರ್‌ಎಸ್‌ಎಸ್ ಜೊತೆಗೆ ಸಮೀಪವಾಗುತ್ತಿರುವ ಯೋಗೇಶ್ವರ್, ಮಂತ್ರಿ ಸ್ಥಾನ ಪಡೆಯಲೇಬೇಕೆನ್ನುವ ಪ್ರಬಲ ಯತ್ನದಲ್ಲಿದ್ದಾರೆ.

Last Updated : Mar 22, 2022, 12:13 PM IST

ABOUT THE AUTHOR

...view details