ರಾಮನಗರ: ಸಿಎಂ ಬಸವರಾಜ ಬೊಮ್ಮಾಯಿ ಅವರಿದ್ದ ವೇದಿಕೆಯಲ್ಲಿ ಸಚಿವ ಡಾ.ಅಶ್ವತ್ಥ್‌ನಾರಾಯಣ್ ಹಾಗೂ ಸಂಸದ ಡಿ.ಕೆ.ಸುರೇಶ್ ನಡುವೆ ದೊಡ್ಡ ಜಟಾಪಟಿ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿದೆ.
ಸಚಿವರು ಹೇಳಿದ್ದೇನು?
ರಾಮನಗರ: ಸಿಎಂ ಬಸವರಾಜ ಬೊಮ್ಮಾಯಿ ಅವರಿದ್ದ ವೇದಿಕೆಯಲ್ಲಿ ಸಚಿವ ಡಾ.ಅಶ್ವತ್ಥ್‌ನಾರಾಯಣ್ ಹಾಗೂ ಸಂಸದ ಡಿ.ಕೆ.ಸುರೇಶ್ ನಡುವೆ ದೊಡ್ಡ ಜಟಾಪಟಿ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿದೆ.
ಸಚಿವರು ಹೇಳಿದ್ದೇನು?
'ಯಾರಪ್ಪ ಅದು ಗಂಡು?, ಸಿಎಂ ನಮ್ಮ ಜಿಲ್ಲೆಗೆ ಬಂದಿರುವಾಗ ಗಲಾಟೆ ಮಾಡೋನು. ನಾವು ಜಿಲ್ಲೆಗೆ ಬಂದಿರುವುದು ಅಭಿವೃದ್ಧಿ ಮಾಡೋದಕ್ಕೆ ರಾಜಕೀಯ ಮಾಡಲು ಅಲ್ಲ. ಏನೋ ಇಬ್ಬರು, ಮೂವರು ಸಂಘ ಕಟ್ಟಿಕೊಂಡು ಬಂದು ಕಾರ್ಯಕ್ರಮದಲ್ಲಿ ಗಲಾಟೆ ಮಾಡೋನು ಗಂಡಲ್ಲ' ಎಂದು ಸಚಿವ ಡಾ.ಅಶ್ವತ್ಥ್ ನಾರಾಯಣ್ ಹೇಳಿದರು.
ಹೀಗೆ ಸಚಿವರು ವೇದಿಕೆಯ ಡಯಾಸ್ ಬಳಿ ನಿಂತು ಮಾತನಾಡುತ್ತಿದ್ದಂತೆ ಅದೇ ವೇದಿಕೆ ಮೇಲೆ ಕುಳಿತಿದ್ದ ಡಿ.ಕೆ.ಸುರೇಶ್ ಏಕಾಏಕಿ ಸಚಿವರ ಮಾತಿಗೆ ಗರಂ ಆಗಿ ಎದೆಯುಬ್ಬಿಸಿಕೊಂಡು ಬಂದರು. ಇದು ಕೈ ಕೈ ಮಿಲಾಯಿಸುವ ಹಂತ ತಲುಪಿತು. ಪರಿಷತ್ ಸದಸ್ಯ ರವಿ ಸಚಿವರ ಮೈಕ್ ಕಿತ್ತು ಹಾಕಿದರು. ಈ ವೇಳೆ ಮಧ್ಯಪ್ರವೇಶಿದ ಪೊಲೀಸರು ಇಬ್ಬರು ನಾಯಕರ ಜಗಳ ಬಿಡಿಸುವ ಪ್ರಯತ್ನ ಮಾಡಿದರು. ಇದಾದ ನಂತರ ವೇದಿಕೆಯಲ್ಲೇ ಕುಳಿತ ಡಿ.ಕೆ.ಸುರೇಶ್, ಎಂಎಲ್‌ಸಿ ರವಿ ಸಚಿವರ ವಿರುದ್ಧ ಪ್ರತಿಭಟನೆ ನಡೆಸಿದರು.
ಇದನ್ನೂ ಓದಿ:VIDEO: ಸಿಎಂ ಎದುರೇ ಸಚಿವ ಅಶ್ವತ್ಥ ನಾರಾಯಣ - ಸಂಸದ ಡಿಕೆ ಸುರೇಶ್ ಜಟಾಪಟಿ..ವೇದಿಕೆಯಲ್ಲೇ ಬೆಂಬಲಿಗರ ಬಿಗ್ ಫೈಟ್!