ಕರ್ನಾಟಕ

karnataka

ETV Bharat / state

ನಾವು ಗಂಡಸರು, ಗಂಡಸ್ತನವನ್ನು ಕೆಲಸದಲ್ಲಿ ತೋರುವೆವು: ಸಚಿವ ಅಶ್ವತ್ಥ್ ನಾರಾಯಣ್

'ಅವರ ಕೈಯಲ್ಲಿ ಮೇಕೆದಾಟು ಅನುಷ್ಠಾನ ಮಾಡಲು ಆಗಲ್ಲ. ನಾವು ಗಂಡಸರಾಗಿರೋದಕ್ಕೆ ಅದನ್ನು ಅನುಷ್ಠಾನ ಮಾಡುತ್ತೇವೆ, ನೀವು ಗಂಡಸರಾಗಿದ್ದರೆ ಅನುಷ್ಠಾನ ಮಾಡಿ' ಎಂದು ಸಚಿವ ಅಶ್ವತ್ಥ್ ನಾರಾಯಣ್ ಸವಾಲು ಹಾಕಿದರು.

ಅಶ್ವತ್ಥ್ ನಾರಾಯಣ್
ಅಶ್ವತ್ಥ್ ನಾರಾಯಣ್

By

Published : Jan 11, 2022, 3:49 PM IST

ರಾಮನಗರ: 'ನಾವು ಗಂಡಸರು, ಗಂಡಸ್ತನವನ್ನು ಕೆಲಸದಲ್ಲಿ ತೋರುವೆವು. ನಮಗೆ ಕೆಲಸ ಮಾಡುವ ಧೈರ್ಯ, ಗಂಡಸ್ತನ ಇದೆ. ಕಾಂಗ್ರೆಸ್ ಜನರ ಪರವಾಗಿಲ್ಲ, ಬರೀ ಸುಳ್ಳು ಮೋಸ. ಮೇಕೆದಾಟು ಯೋಜನೆ ಕಾಂಗ್ರೆಸ್​​​ನಿಂದ ಅಸಾಧ್ಯ. ಬಿಜೆಪಿ ಸರ್ಕಾರ ಮೇಕೆದಾಟು ಯೋಜನೆ ಮಾಡೇ ಮಾಡುತ್ತದೆ. ಬಿಜೆಪಿ ಸರ್ಕಾರದಿಂದ ಮಾತ್ರ ಯೋಜನೆ ಅನುಷ್ಠಾನ ಸಾಧ್ಯ' ಎಂದು ಸಚಿವ ಡಾ.ಅಶ್ವತ್ಥ್ ನಾರಾಯಣ್ ಹೇಳಿದ್ದಾರೆ.

ನಗರದ ಜಾನಪದ ಲೋಕದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, 'ನಮ್ಮ ನಾಡಿನ ನೆಲ,ಜಲ ವಿಚಾರದಲ್ಲಿ ನಮ್ಮ ನಾಡನ್ನು ಕಾಪಾಡಲು ನಾವು ಬದ್ಧ. ಅಧಿಕಾರಕ್ಕಾಗಿ ನಾವು ಏನು ಬೇಕಾದರೂ ಮಾಡಲ್ಲ. 2008ರಿಂದ ನಮ್ಮ ಪಕ್ಷ ಅಧಿಕಾರದಲ್ಲಿದ್ದಾಗ ಎಲ್ಲ 11 ಜಿಲ್ಲೆಯಲ್ಲಿ ನೀರಾವರಿ ಮಾಡಿದ್ದೇವೆ' ಎಂದು ಹೇಳಿದರು.


'ಮೇಕೆದಾಟು ಯೋಜನೆಯನ್ನು ಅನುಷ್ಠಾನ ಮಾಡುತ್ತೇವೆ ಎಂದು ಯಡಿಯೂರಪ್ಪನವರು ಹೇಳಿದ್ದಾರೆ, ನಾವು ಅದಕ್ಕೆ ಬದ್ಧವಾಗಿದ್ದೇವೆ. ಈ ಕೇಸ್​​​ ನ್ಯಾಯಾಲಯದಲ್ಲಿದೆ, ಅದು ನಡೀತಿದೆ. ಕಾಂಗ್ರೆಸ್ ಸರ್ಕಾರ ಇದ್ದಾಗ ಒಂದು ಡಿಪಿಆರ್ ಮಾಡಲಿಕ್ಕೆ ಎಷ್ಟು ವರ್ಷ ಬೇಕಿತ್ತು. ಒಂದು ಡಿಪಿಆರ್ ಅನ್ನು ಅವರು ತಯಾರು ಮಾಡಿಲ್ಲ' ಎಂದು ಸಚಿವರು ಆರೋಪಿಸಿದರು.

'ಬಿಜೆಪಿ ಮೇಕೆದಾಟು ಅನುಷ್ಠಾನ ಮಾಡುತ್ತೆ ಎಂದು ಅವರಿಗೆ ಗೊತ್ತಿದೆ. ಅದಕ್ಕೆ ಅವರು ವಿರೋಧ ಮಾಡಿ ರಾಜಕೀಯ ಮಾಡುತ್ತಿದ್ದಾರೆ. ಶಿವಕುಮಾರ್ ಅವರಿಗೆ ಅಸ್ತಿತ್ವ ಇಲ್ಲ. ಬಂಡತನ ಇರುವ ವ್ಯಕ್ತಿ ಅಂದ್ರೆ ಅದು ಡಿ.ಕೆ.ಶಿವಕುಮಾರ್, ಒಬ್ಬ ಚುನಾಯಿತ ಪ್ರತಿನಿಧಿಗಳು ಹೇಗೆ ನಡೆದುಕೊಳ್ಳಬೇಕು, ಇವೆಲ್ಲವೂ ಗೊತ್ತಿಲ್ಲದೇ ರೂಲ್ಸ್ ಬ್ರೇಕ್ ಮಾಡಿದ್ದಾರೆ' ಎಂದರು.

ABOUT THE AUTHOR

...view details