ಕರ್ನಾಟಕ

karnataka

ETV Bharat / state

ನಾಳೆ, ನಾಡಿದ್ದು ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಪಾದಯಾತ್ರೆ: ವಾಹನ ಸಂಚಾರಕ್ಕೆ ಬದಲಿ ವ್ಯವಸ್ಥೆ - ಮೇಕೆದಾಟು ಪಾದಯಾತ್ರೆಗೆ ಬದಲಿ ಸಂಚಾರ ವ್ಯವಸ್ಥೆ

ಕಾಂಗ್ರೆಸ್‌ ಹಮ್ಮಿಕೊಂಡಿರುವ ಮೇಕೆದಾಟು ಪಾದಯಾತ್ರೆಯು ಇಂದು ರಾತ್ರಿ ಕನಕಪುರದಿಂದ ರಾಮನಗರ ಪ್ರವೇಶಿಸಲಿದೆ. ನಾಳೆ (ಜನವರಿ 13) ಮತ್ತು 14 ರಂದು ಮೈಸೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸಲಿದೆ.

mekedatu-padayathre
ಮೇಕೆದಾಟು ಪಾದಯಾತ್ರೆ

By

Published : Jan 12, 2022, 5:29 PM IST

ರಾಮನಗರ: ಕಾಂಗ್ರೆಸ್ ಪಕ್ಷದ ಮೇಕೆದಾಟು ಪಾದಯಾತ್ರೆ ನಾಳೆ ಮತ್ತು ಜನವರಿ 14 ರಂದು ಬೆಂಗಳೂರು- ಮೈಸೂರು ಹೆದ್ದಾರಿಯಲ್ಲಿ ನಡೆಯಲಿದೆ. ಹೀಗಾಗಿ, ವಾಹನ ಸಂಚಾರ ಮಾರ್ಗವನ್ನು ಪೊಲೀಸ್ ಇಲಾಖೆ ಬದಲಾಯಿಸಲು ತಯಾರಿ ನಡೆಸಿದೆ.

ಮೈಸೂರು, ಚಾಮರಾಜನಗರ, ಮಡಿಕೇರಿ ಕಡೆಯಿಂದ ಬೆಂಗಳೂರು ಕಡೆಗೆ, ಬೆಂಗಳೂರು ಕಡೆಯಿಂದ ಮೈಸೂರು, ಚಾಮರಾಜನಗರ, ಮಡಿಕೇರಿ ಕಡೆಗೆ ಸಂಚರಿಸಲಿರುವ ಎಲ್ಲಾ ಮಾದರಿಯ ವಾಹನಗಳ ಸವಾರರು ರಾಷ್ಟ್ರೀಯ ಹೆದ್ದಾರಿಯ ಮುಖಾಂತರ ಸಂಚರಿಸುವ ಬದಲು ಮೈಸೂರು-ಬನ್ನೂರು-ಕಿರುಗಾವಲು-ಮಳವಳ್ಳಿ-ಹಲಗೂರು-ಸಾತನೂರು-ಕನಕಪುರ-ಹಾರೋಹಳ್ಳಿ-ಕಗ್ಗಲೀಪುರ-ಬನಶಂಕರಿ-ಸಾರಕ್ಕಿ ಮಾರ್ಗವಾಗಿ ಅಥವಾ ಮೈಸೂರು-ಶ್ರೀರಂಗಪಟ್ಟಣ-ಪಾಂಡವಪುರ-ನಾಗಮಂಗಲ-ಬೆಳ್ಳೂರುಕ್ರಾಸ್-ಕುಣಿಗಲ್ ನೆಲಮಂಗಲ ಮಾರ್ಗವಾಗಿ ಸಂಚರಿಸಬೇಕು. ಹೀಗಾಗಿ, ಸಾರ್ವಜನಿಕರು ಸಹಕಾರ ನೀಡಬೇಕು ಎಂದು ಪೊಲೀಸ್ ಇಲಾಖೆ ಪ್ರಕಟಣೆಯಲ್ಲಿ ಮನವಿ ಮಾಡಿದೆ.

ಪಾದಯಾತ್ರೆ ಹಿನ್ನೆಲೆಯಲ್ಲಿ ನಾಳೆ-ನಾಡಿದ್ದು ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ವಾಹನ ಸಂಚಾರ ಬಂದ್​ ಮಾಡುವ ಮೂಲಕ ಪೊಲೀಸ್​ ಇಲಾಖೆಯೇ ಪರೋಕ್ಷವಾಗಿ ಪಾದಯಾತ್ರೆಗೆ ಅನುಮತಿ ಕೊಟ್ಟಂತಿದೆ ಎಂಬ ಟೀಕೆಯೂ ಸಾರ್ವಜನಿಕ ವಲಯದಿಂದ ಕೇಳಿಬಂದಿದೆ. ಅನುಮತಿ ಇಲ್ಲದಿದ್ದರೂ ಪಾದಯಾತ್ರೆ ನಡೆಯುತ್ತಿದ್ದು, ಒಂದು ವೇಳೆ ಈ ಮಾರ್ಗದಲ್ಲಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟರೆ ದಿನಗಟ್ಟಲೆ ಟ್ರಾಫಿಕ್​ ಉಂಟಾಗಿ ಜನಜೀವನ ಅಸ್ತವ್ಯಸ್ತವಾಗಲಿದೆ.

ಇದನ್ನೂ ಓದಿ:ಕೋವಿಡ್​ ಹೆಚ್ಚಳ: ಕೊಪ್ಪಳದ ಹುಲಿಗೆಮ್ಮದೇವಿ ದೇವಸ್ಥಾನ ಬಂದ್​​

For All Latest Updates

ABOUT THE AUTHOR

...view details