ಕರ್ನಾಟಕ

karnataka

ETV Bharat / state

ತಲೆಮೇಲೆ ಕಲ್ಲು ಎತ್ತಿಹಾಕಿ ಬರ್ಬರ ಹತ್ಯೆ... ಜೊತೆಗಿದ್ದವನೇ ಇಟ್ಟಿದ್ದನಾ  ಮುಹೂರ್ತ - kannada news

ವ್ಯಕ್ತಿಯೋರ್ವನ ತಲೆ‌ಮೇಲೆ ಕಲ್ಲು ಎತ್ತಿಹಾಕಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಚನ್ನಪಟ್ಟಣದ ಅಂಬೇಡ್ಕರ್ ಭವನದ ವರಾಂಡದಲ್ಲಿ ನಡೆದಿದೆ. ಹೊಸಕೋಟೆಯಿಂದ ಕೂಲಿಗಾಗಿ ಚನ್ನಪಟ್ಟಣಕ್ಕೆ ಬಂದಿದ್ದ ಆತನ ಜೊತೆಗಿದ್ದವನೇ‌ ಈ ಕೃತ್ಯ ಎಸಗಿರಬಹುದು ಎಂದು ಶಂಕಿಸಲಾಗಿದೆ.

ತಲೆಮೇಲೆ ಕಲ್ಲು ಎತ್ತಿಹಾಕಿ ಬರ್ಬರ ಹತ್ಯೆ

By

Published : May 28, 2019, 7:29 PM IST

ರಾಮನಗರ : ವ್ಯಕ್ತಿಯೋರ್ವನ ತಲೆ‌ಮೇಲೆ ಕಲ್ಲು ಎತ್ತಿಹಾಕಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಚನ್ನಪಟ್ಟಣದ ಅಂಬೇಡ್ಕರ್ ಭವನದ ವರಾಂಡದಲ್ಲಿ ನಡೆದಿದೆ.

ಚನ್ನಪಟ್ಟಣದ‌ ಸಾತನೂರು ಸರ್ಕಲ್ ಬಳಿ ಅಂಬೇಡ್ಕರ್ ಭವನದಲ್ಲಿ ವೆಂಕಟೇಶ್ 45 ಎಂಬಾತನನ್ನು ಕೊಲೆ ಮಾಡಲಾಗಿದೆ. ಅನೈತಿಕ ಸಂಬಂದ ಹಿನ್ನೆಲೆಯಲ್ಲಿ ಕೊಲೆಯಾಗಿರುವ ಶಂಕೆ ವ್ಯಕ್ತವಾಗಿದೆ. ತಡರಾತ್ರಿ ವೆಂಕಟೇಶ್ ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಲಾಗಿದ್ದು, ಈ ಸಂಬಂಧ ಒಬ್ಬನನ್ನ ವಶಕ್ಕೆ ಪಡೆದಿದ್ದು ವಿಚಾರಣೆ ನಡೆಸಲಾಗುತ್ತಿದೆ

ತಲೆಮೇಲೆ ಕಲ್ಲು ಎತ್ತಿಹಾಕಿ ವ್ಯಕ್ತಿ ಬರ್ಬರ ಹತ್ಯೆ

ವೆಂಕಟೇಶ್ ಮೂಲತಃ ಹೊಸಕೋಟೆಯಿಂದ ಕೂಲಿಗಾಗಿ ಚನ್ನಪಟ್ಟಣಕ್ಕೆ ಬಂದಿದ್ದ ಆತನ ಜೊತೆಗಿದ್ದವನೇ‌ ಈ ಕೃತ್ಯ ಎಸಗಿರಬಹುದು ಎಂದು ಶಂಕಿಸಲಾಗಿದೆ.ಈ ಕುರಿತು ಚನ್ನಪಟ್ಟಣ ನಗರ ಪೋಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ .

ABOUT THE AUTHOR

...view details