ರಾಮನಗರ: ಜಿಲ್ಲೆಯಲ್ಲಿ ಕಾಡು ಪ್ರಾಣಿಗಳ ಹಾವಳಿ ಹೆಚ್ಚಾಗಿದೆ. ಆನೆ, ಚಿರತೆ ದಾಳಿಯಿಂದ ಜನರು ನಿದ್ದೆಗೆಟ್ಟಿದ್ದಾರೆ. ಇದೀಗ ಕಾಡಾನೆ ದಾಳಿಯಿಂದ ವ್ಯಕ್ತಿಯೋರ್ವ ಮೃತಪಟ್ಟಿರುವ ಘಟನೆ ಬನ್ನೇರುಘಟ್ಟ ಅರಣ್ಯ ಪ್ರದೇಶದಲ್ಲಿ ನಡೆದಿದೆ.
ರುದ್ರೇಗೌಡ (55) ಮೃತ ವ್ಯಕ್ತಿಯಾಗಿದ್ದು, ಕನಕಪುರ ತಾಲೂಕಿನ ಕೋಡಿಹಳ್ಳಿ ಸಮೀಪದ ಚಿಕ್ಕಪೇಟೆಹಳ್ಳಿ ಗ್ರಾಮದವರಾಗಿದ್ದಾರೆ. ಇಂದು ಮುಂಜಾನೆ ಜಮೀನಿಗೆ ಹೋಗಿದ್ದ ವೇಳೆ ಆನೆ ದಾಳಿಗೆ ಸಿಲುಕಿ, ಕಾಲು ಮುರಿದುಕೊಂಡು ಗಂಭೀರವಾಗಿ ಗಾಯಗೊಂಡಿದ್ದರು. ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯದಲ್ಲೇ ರುದ್ರೇಗೌಡ ಮೃತ ಪಟ್ಟಿದ್ದಾನೆಂದು ತಿಳಿದು ಬಂದಿದೆ.