ಕರ್ನಾಟಕ

karnataka

ETV Bharat / state

ಮಹಾಶಿವರಾತ್ರಿಗೆ ಎಲ್ಲೆಡೆ ಜನ ಉಪವಾಸ: ಇಲ್ಲಿ ಮಾತ್ರ ಮಾಂಸದೂಟ ಸವಿದು ಹಬ್ಬದಾಚರಣೆ! - ಗೌರಿ ಹಬ್ಬದಂದು ಮಾಂಸದೂಟ

ರಾಮನಗರ ಜಿಲ್ಲೆಯ ಮಂಗಾಡಹಳ್ಳಿ ಗ್ರಾಮದಲ್ಲಿ ಶಿವರಾತ್ರಿ ಹಬ್ಬವನ್ನ ವಿಭಿನ್ನವಾಗಿ ಆಚರಿಸಲಾಯಿತು. ಗ್ರಾಮದಲ್ಲಿರುವ ದೇವಸ್ಥಾನದ ಆವರಣದಲ್ಲಿ ಮಾಂಸದೂಟ ಮಾಡಿ, ಭಕ್ತರು ಪಂಕ್ತಿಯಲ್ಲಿ ಕುಳಿತು ಮಾಂಸದೂಟ ಸವಿದು ಹಬ್ಬವನ್ನ ಆಚರಿಸಿದರು.

ಮಹಾಶಿವರಾತ್ರಿಗೆ ಎಲ್ಲೆಡೆ ಜನ ಉಪವಾಸ: ಇಲ್ಲಿ ಮಾತ್ರ ಮಾಂಸದೂಟ ಸವಿದು ಹಬ್ಬದಾಚರಣೆ!
ಮಹಾಶಿವರಾತ್ರಿಗೆ ಎಲ್ಲೆಡೆ ಜನ ಉಪವಾಸ: ಇಲ್ಲಿ ಮಾತ್ರ ಮಾಂಸದೂಟ ಸವಿದು ಹಬ್ಬದಾಚರಣೆ!

By

Published : Mar 2, 2022, 4:25 PM IST

Updated : Mar 2, 2022, 4:54 PM IST

ರಾಮನಗರ:ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಮಂಗಾಡಹಳ್ಳಿ ಗ್ರಾಮದಲ್ಲಿ ವಿಭಿನ್ನವಾಗಿ ಶಿವರಾತ್ರಿ ಹಬ್ಬವನ್ನ ಆಚರಿಸಲಾಯಿತು. ಈ ಗ್ರಾಮದ ಸಿದ್ದಪ್ಪಾಜಿ ದೇವಸ್ಥಾನದ ಬಳಿ ಭಕ್ತರೆಲ್ಲರೂ ಸೇರಿ ಕುರಿ, ಕೋಳಿ ಬಲಿಕೊಟ್ಟು ಅಲ್ಲಿಯೇ ಪ್ರಸಾದವನ್ನ ತಯಾರು ಮಾಡುತ್ತಾರೆ.

ನೂರಾರು ಕೋಳಿ, ಕುರಿಯ ಮಾಂಸದ ಅಡುಗೆ:ಕೋಳಿ, ಕುರಿಯ ಮಾಂಸದ ಅಡುಗೆ ಮಾಡಿ, ದೇವರಿಗೆ ಪ್ರಸಾದ ಸಮರ್ಪಣೆ ಮಾಡಲಾಗುತ್ತದೆ. ನಂತರ ದೇವಸ್ಥಾನದ ಮುಂಭಾಗ ಕುಳಿತು ಭಕ್ತರು ಪ್ರಸಾದ ಸೇವಿಸುತ್ತಾರೆ. ಸುಮಾರು ನೂರಾರು ಕೋಳಿಗಳನ್ನ ಈ ಹಬ್ಬದಲ್ಲಿ ಬಲಿ ಕೊಡಲಾಗುತ್ತದೆ. ಎರಡರಿಂದ ಮೂರು ಸಾವಿರ ಭಕ್ತರು ಒಟ್ಟಿಗೆ ಕುಳಿತು ಮಾಂಸದ ಪ್ರಸಾದವನ್ನ ಸೇವಿಸುತ್ತಾರೆ.

ಮಾಂಸದೂಟ ಸವಿದು ಶಿವರಾತ್ರಿ ಹಬ್ಬ ಆಚರಣೆ

ಇದನ್ನೂ ಓದಿ:ಶ್ರಮಿಕ ಮಹಿಳೆಯರ ಸ್ವಾಭಿಮಾನಿ ಸಂಕೇತ ಈ ಚರಕ

ಗೌರಿ ಹಬ್ಬದ ಸೋಮವಾರದಂದೂ ಮಾಂಸದೂಟ:ಅಂದಹಾಗೆ ಮಂಗಾಡಹಳ್ಳಿ ಗ್ರಾಮದಲ್ಲಿ ಕಳೆದ ಹಲವು ವರ್ಷಗಳಿಂದ ಈ ಆಚರಣೆ ಮಾಡಿಕೊಂಡು ಬರಲಾಗುತ್ತಿದೆ. ಪ್ರತಿವರ್ಷ ಭಕ್ತರು ದೇವಸ್ಥಾನಕ್ಕೆ ಬಂದು ಹರಕೆ ಮಾಡಿಕೊಳ್ಳುತ್ತಾರೆ. ತಮ್ಮ ಇಷ್ಟಾರ್ಥಗಳು ನೆರೆವೇರಿದ ಬಳಿಕ ಈ ಹಬ್ಬದ ದಿನದಂದು ತಮ್ಮ ಹರಕೆ ತೀರಿಸುತ್ತಾರೆ. ಕೇವಲ ಶಿವರಾತ್ರಿ ದಿನದಂದು ಮಾತ್ರ ಅಲ್ಲ. ಗೌರಿಹಬ್ಬ ಸೋಮವಾರ ಬಂದ್ರೆ ಅಂದು ಸಹ ಮಾಂಸದೂಟವನ್ನ ಮಾಡುತ್ತಾರೆ.

ಒಟ್ಟಾರೆ ಶಿವಭಕ್ತಿ ಸ್ಮರಣೆ ಜೊತೆಗೆ ಈ ಗ್ರಾಮದಲ್ಲಿನ ಭಕ್ತರು ಬಾಡೂಟ ಸವಿಯುವ ರೂಢಿಯನ್ನ ಹಿಂದಿನಿಂದಲೂ ಕೂಡ ಮಾಡಿಕೊಂಡು ಬಂದಿದ್ದಾರೆ.

Last Updated : Mar 2, 2022, 4:54 PM IST

ABOUT THE AUTHOR

...view details