ಕರ್ನಾಟಕ

karnataka

By

Published : Aug 17, 2020, 9:46 PM IST

ETV Bharat / state

ರೌಡಿಶೀಟರ್​ಗಳ ಚಳಿ ಬಿಡಿಸಿದ ಮಾಗಡಿ ಪೊಲೀಸರು: ಪುಂಡರ ಪರೇಡ್​ ನಡೆಸಿ ಖಡಕ್​ ಎಚ್ಚರಿಕೆ

ಬೆಂಗಳೂರಿನಲ್ಲಿ ನಡೆದ ಗಲಭೆಯಿಂದಾಗಿ ಪಕ್ಕದ ಜಿಲ್ಲೆ ರಾಮನಗರದಲ್ಲಿಯೂ ಇದರ ಪ್ರಭಾವ ಬೀರಿದ್ದು, ಮುಂಜಾಗ್ರತಾ ಕ್ರಮವಾಗಿ ಮಾಗಡಿ ಪೊಲೀಸರು, ತಮ್ಮ ವ್ಯಾಪ್ತಿಯ ರೌಡಿ ಶೀಟರ್​ಗಳ ಮನೆಗೆ ತೆರಳಿ ಪರೇಡ್​ಗೆ ಕರೆ ತಂದರು. ಈ ವೇಳೆ ಅಪರಾಧ ಕೃತ್ಯಗಳಲ್ಲಿ ತೊಡಗದಂತೆ ಖಡಕ್​ ಎಚ್ಚರಿಕೆ ನೀಡಿದ್ದಾರೆ.

Magadi Police warned the Rowdisheeters
ರೌಡಿಶೀಟರ್​ಗಳ ಪೆರೇಡ್​ ನಡೆಸಿದ ಮಾಗಡಿ ಪೊಲೀಸರು

ರಾಮನಗರ: ಬೆಂಗಳೂರಲ್ಲಿ ನಡೆದ ಗಲಭೆ ಇತರ ಜಿಲ್ಲೆಗಳ ಮೇಲೂ ಪರಿಣಾಮ ಬೀರಿದ್ದರಿಂದ ಖಾಕಿ ಪಡೆ ಮತ್ತಷ್ಟು ಅಲರ್ಟ್ ಆಗಿದೆ. ಇಂದು ರಾಮನಗರ ಉಪವಿಭಾಗದ ಮಾಗಡಿ ಪೊಲೀಸರು ರೌಡಿಶೀಟರ್​​ಗಳ ಚಳಿ ಬಿಡಿಸಿದ್ದಾರೆ.

ಬೆಂಗಳೂರಿನ ಡಿಜೆ ಹಾಗೂ ಕೆ.ಜೆ. ಹಳ್ಳಿಯಲ್ಲಿ ನಡೆದಿರುವ ಗಲಭೆ ಬೆನ್ನಲ್ಲೇ ಪಕ್ಕದ ಜಿಲ್ಲೆ ರಾಮನಗರದಲ್ಲೂ ಪೊಲೀಸರು ಅಲರ್ಟ್ ಆಗಿದ್ದಾರೆ. ಅಪರಾಧ ಜಗತ್ತಿನಲ್ಲಿ ಗುರುತಿಸಿಕೊಂಡಿರುವ ರೌಡಿಶೀಟರ್​ಗಳ ಮನೆ ಬಾಗಿಲು ತಟ್ಟಿರುವ ಮಾಗಡಿ ಉಪವಿಭಾಗ ಡಿವೈಎಸ್​​ಪಿ ಓಂಪ್ರಕಾಶ್ ನೇತೃತ್ವದ ತಂಡ, ಫೀಲ್ಡಿಗಿಳಿದು ರೌಡಿಗಳ ಪರೇಡ್​​ ನಡೆಸಿದ್ದಾರೆ.

ರೌಡಿಶೀಟರ್​ಗಳ ಪರೇಡ್​ ನಡೆಸಿದ ಮಾಗಡಿ ಪೊಲೀಸರು

ಈ ಮೊದಲು ರೌಡಿಶೀಟರ್​​ಗಳಿಗೆ ಕರೆ ಮಾಡಿ ಪರೇಡ್ ಗೆ ಬರಲು ಹೇಳುತ್ತಿದ್ದರು. ಆದರೆ ಇದೀಗ ಖುದ್ದು ಪೊಲೀಸರೇ ಬೆಳ್ಳಂಬೆಳಗ್ಗೆ ರೌಡಿ ಶೀಟರ್​​ಗಳ ಮನೆಗಳಿಗೆ ತೆರಳಿ ಮಲಗಿದ್ದ ರೌಡಿಶೀಟರ್​​ಗಳನ್ನು ಎಚ್ಚರಿಸಿದ್ದಾರೆ. ಅಲ್ಲದೆ ಮನೆಗಳ ಪರಿಶೀಲನೆ ನಡೆಸಿ ಮನೆಯಲ್ಲಿದ್ದ ಆಯುಧಗಳನ್ನು ಜಪ್ತಿ ಮಾಡಿದ್ದಾರೆ‌.

ಮಾಗಡಿ ಪಟ್ಟಣದ ಕೋಟೆ ಬಯಲಿಗೆ ಅತ್ಯಂತ ಆ್ಯಕ್ಟೀವ್ ಆಗಿದ್ದ 75 ಮಂದಿ ರೌಡಿಶೀಟರ್​ಗಳನ್ನು ಕರೆತಂದು, ಅವರ ಇತ್ತೀಚಿನ ಚಟುವಟಿಕೆಗಳ ಬಗ್ಗೆ ಮಾಹಿತಿ ಕಲೆ ಹಾಕಿದ್ದಾರೆ. ಮುಂದಿನ ದಿನಗಳಲ್ಲಿ ಯಾವುದೇ ಅಪರಾಧ ಕೃತ್ಯಗಳನ್ನು ಎಸಗಿದ್ದು ಕಂಡುಬಂದರೆ ನಾವು ನಿಮ್ಮನ್ನು ಸುಮ್ಮನೇ ಬಿಡುವುದಿಲ್ಲ ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ.

ಬೆಂಗಳೂರಿನಲ್ಲಿ ನಡೆದಿರುವ ಗಲಭೆಯ ಪರಿಣಾಮ ಪಕ್ಕದ ಜಿಲ್ಲೆಗಳಿಗೂ ಪಸರಿಸಿರುವುದು ಒಂದೆಡೆಯಾದರೆ, ಲಾಕ್​ಡೌನ್​​ ಸಡಿಲಿಕೆ ಬಳಿಕ ಗ್ರಾಮೀಣ ಭಾಗದಲ್ಲಿ ಅಪರಾಧ ಕೃತ್ಯಗಳು ಹೆಚ್ಚಾಗುತ್ತಿದ್ದು, ಪೊಲೀಸರು ರೌಡಿ ಶೀಟರ್​ಗಳ‌ ಮೇಲೆ ಹದ್ದಿನ ಕಣ್ಣಿಟ್ಟಿದ್ದಾರೆ.

ABOUT THE AUTHOR

...view details