ಕರ್ನಾಟಕ

karnataka

ETV Bharat / state

ಪ್ರೀತಿಗೆ ಪೋಷಕರ ಅಡ್ಡಿ... ಬೆಟ್ಟದಿಂದ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ ಪ್ರೇಮಿಗಳು!

ಪ್ರೀತಿಗೆ ಪೋಷಕರ ಅಡ್ಡಿ. ನೊಂದು ಆತ್ಮಹತ್ಯೆಗೆ ಯತ್ನಿಸಿದ ಪ್ರೇಮಿಗಳು. ರಾಮನಗರದ ರಾಮದೇವರ ಬೆಟ್ಟದ ಬಳಿ ಘಟನೆ

ಆತ್ಮಹತ್ಯೆಗೆ ಯತ್ನಿಸಿದ ಪ್ರೇಮಿಗಳು

By

Published : Jun 27, 2019, 3:48 AM IST

Updated : Jun 27, 2019, 5:18 AM IST

ರಾಮನಗರ:ಪ್ರೀತಿಗೆ ಮನೆಯವರು ವಿರೋಧಿಸಿದ್ದಕ್ಕೆ ಪ್ರೇಮಿಗಳಿಬ್ಬರು ಆತ್ಮಹತ್ಯೆಗೆ ಯತ್ನಿಸಿದ ಘಟನೆ ರಾಮದೇವರ ಬೆಟ್ಟದಲ್ಲಿ ನಡೆದಿದೆ.

ನಗರದ ಹೊರವಲಯದಲ್ಲಿರುವ ಬೆಂಗಳೂರಿನ ನಿವಾಸಿ ರಾಕೇಶ್ ಹಾಗೂ ಐಶ್ವರ್ಯ ಇಬ್ಬರು ಕಳೆದ ಒಂದು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಇಬ್ಬರು ಬೇರೆ ಬೇರೆ ಜಾತಿಯವರಾದ ಕಾರಣ ಇವರ ಪ್ರೀತಿಗೆ ಪೋಷಕರು ವಿರೋಧಿಸಿದ್ದರಂತೆ. ಇದರಿಂದ ಮನನೊಂದ ಪ್ರೇಮಿಗಳು ರಾಮದೇವರ ಬೆಟ್ಟದಿಂದ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎನ್ನಲಾಗುತ್ತಿದೆ.

ಇನ್ನು ಬೆಟ್ಟದಿಂದ ಜಿಗಿದಿದ್ದನ್ನು ಕಂಡ ಸಾರ್ವಜನಿಕರು ಈ ಬಗ್ಗೆ ವಿಷಯ ಮುಟ್ಟಿಸಿದ್ದರು. ತಕ್ಷಣ ಪೊಲೀಸರು ಸ್ಥಳಕ್ಕೆ ಆಗಮಿಸಿ ರಾಕೇಶ್ ಹಾಗೂ ಐಶ್ವರ್ಯರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ.

ಎತ್ತರದಿಂದ ಜಿಗಿದ ಕಾರಣ ಯುವಕನ ಕಾಲು ಮುರಿದಿದೆ. ಯುವತಿಯ ತಲೆಗೆ ಪೆಟ್ಟಾಗಿದೆ. ಈ ಕುರಿತು ರಾಮನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Last Updated : Jun 27, 2019, 5:18 AM IST

For All Latest Updates

TAGGED:

ABOUT THE AUTHOR

...view details