ಕರ್ನಾಟಕ

karnataka

ETV Bharat / state

ಸಿನಿಮಾ ಶೂಟಿಂಗ್ ವೇಳೆ ಶಾರ್ಟ್​ ಸರ್ಕ್ಯೂಟ್​​: 'ಲವ್​​ ಯೂ ರಚ್ಚು' ಸಿನಿಮಾ ಫೈಟರ್​ ಸಾವು - Love You rachchu cinema

ಅಜಯ್​ ರಾವ್​​ ಮತ್ತು ರಚಿತಾ ರಾಮ್​ ನಟನೆಯ 'ಲವ್​ ಯೂ ರಚ್ಚು' ಸಿನಿಮಾ ಚಿತ್ರಿಕರಣದ ವೇಳೆ ವಿದ್ಯುತ್​​ ಅವಘಡ ಸಂಭವಿಸಿ ತಮಿಳುನಾಡು ಮೂಲದ ಫೈಟರ್​ ಸಾವನ್ನಪ್ಪಿದ್ದಾನೆ.

love-you-rachchu-cinema
ಲವ್​​ ಯೂ ರಚ್ಚು

By

Published : Aug 9, 2021, 3:13 PM IST

Updated : Aug 9, 2021, 7:04 PM IST

ರಾಮನಗರ: 'ಲವ್ ಯೂ ರಚ್ಚು' ಸಿನಿಮಾ ಶೂಟಿಂಗ್ ವೇಳೆ ವಿದ್ಯುತ್​ ಅವಘಡ ಸಂಭವಿಸಿ ಫೈಟರ್ ಸಾವನ್ನಪ್ಪಿದ ಘಟನೆ ಜಿಲ್ಲೆಯ ಬಿಡದಿಯ ಜೋಗಿನದೊಡ್ಡಿ ಬಳಿ ನಡೆದಿದೆ.

ತಮಿಳುನಾಡು ಮೂಲದ ಫೈಟರ್​ ವಿವೇಕ್ (28)​ ಮೃತ ವ್ಯಕ್ತಿ. ಅಜಯ್ ರಾವ್ ಮತ್ತು ರಚಿತಾ ರಾಮ್ ನಟನೆಯ ಲವ್ ಯೂ ರಚ್ಚು ಸಿನಿಮಾ ಶೂಟಿಂಗ್ ನಡೆಯುತ್ತಿತ್ತು. ಶಾರ್ಟ್ ಸರ್ಕ್ಯೂಟ್​ನಿಂದ ಇಬ್ಬರಿಗೆ ಗಾಯವಾಗಿತ್ತು. ಇದರಲ್ಲಿ ವಿವೇಕ್​ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾನೆ. ಮತ್ತೊಬ್ಬನನ್ನು ಚಿಕಿತ್ಸೆಗಾಗಿ ಬೆಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕಳೆದ ಐದು ದಿನಗಳಿಂದ‌ ಪುಟ್ಟರಾಜು ಎಂಬುವರ ತೆಂಗಿನ ತೋಟದಲ್ಲಿ ಚಿತ್ರೀಕರಣ ನಡೆಯುತ್ತಿದ್ದು, ಇಂದು ಕೊನೆ‌ಯ ದಿನವಾಗಿತ್ತು. ಫೈಟ್ ಸಂಬಂಧ ರೋಪ್​​ ಎಳೆಯುವ ವೇಳೆ ವಿದ್ಯುತ್ ತಗುಲಿ ವಿವೇಕ್ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಗುರು ದೇಶಪಾಂಡೆ ನಿರ್ಮಾಣದ ಸಿನಿಮಾ ಇದಾಗಿದೆ. ವಿನೋದ್ ಸಾಹಸ‌ ನಿರ್ದೇಶನದಲ್ಲಿ ನಡೆಯುತ್ತಿರುವ ಸಾಹಸ ದೃಶ್ಯದ ವೇಳೆ ದುರಂತ ಸಂಭವಿಸಿದೆ.

ಸಿನಿಮಾ ಶೂಟಿಂಗ್ ವೇಳೆ ಅವಘಡ

ಅಲ್ಲದೇ ಚಿತ್ರೀಕರಣಕ್ಕೆ ಪೊಲೀಸರಿಂದ ಯಾವುದೇ ಅನುಮತಿ ಪಡೆದಿರಲಿಲ್ಲ ಎನ್ನಲಾಗಿದ್ದು, ಘಟನೆ ಬಳಿಕ ತೋಟದ ಮಾಲೀಕ ನಾಪತ್ತೆಯಾಗಿದ್ದಾನೆ. ಘಟನೆ ಬಳಿಕ ಚಿತ್ರೀಕರಣ ಸ್ಥಗಿತಗೊಂಡಿದೆ. ಬಿಡದಿ‌ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅವಘಡ ಸಂಭವಿಸಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

Last Updated : Aug 9, 2021, 7:04 PM IST

ABOUT THE AUTHOR

...view details