ರಾಮನಗರ:ಲವ್ ಯೂ ರಚ್ಚು ಚಿತ್ರೀಕರಣದ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ 6 ಜನರಿಗೆ ರಾಮನಗರ ಜಿಲ್ಲಾ ಸತ್ರ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. ನಟ ಅಜಯ್ ರಾವ್, ನಿರ್ದೇಶಕ ಶಂಕರ್, ಕ್ರೇನ್ ಆಪರೇಟರ್ ಮಹದೇವ್, ಸಾಹಸ ನಿರ್ದೇಶಕ ವಿನೋದ್ ಕುಮಾರ್, ಪ್ರೊಡಕ್ಷನ್ ಮ್ಯಾನೇಜರ್ ಫರ್ನಾಂಡೀಸ್, ನಿರ್ಮಾಪಕ ಗುರುದೇಶಪಾಂಡೆಗೆ ನ್ಯಾಯಾಲಯ ಬೇಲ್ ನೀಡಿದೆ.
ವಿನೋದ್ ಕುಮಾರ್, ಶಂಕರ್, ಮಹದೇವ್ ರಾಮನಗರ ಜಿಲ್ಲಾ ಕಾರಾಗೃಹದಲ್ಲಿದ್ದು, ಇವರು ಇಂದು ಅಥವಾ ನಾಳೆ ಬಿಡುಗಡೆಯಾಗುವ ಸಾಧ್ಯತೆ ಇದೆ.
ಲವ್ ಯೂ ರಚ್ಚು ಚಿತ್ರೀಕರಣದ ವೇಳೆ ಫೈಟರ್ ವಿವೇಕ್ ಮೃತಪಟ್ಟ ಘಟನೆ ಸಂಬಂಧ ಗುರುವಾರ ನಟ ಅಜಯ್ ರಾವ್ ಕೂಡ ಠಾಣೆಗೆ ಬಂದು ವಿಚಾರಣೆಗೆ ಹಾಜರಾದರು.