ಕರ್ನಾಟಕ

karnataka

ETV Bharat / state

ಜೆಡಿಎಸ್​ ಕಾರ್ಯಕರ್ತನಿಂದ್ಲೇ ಹೆಚ್​ಡಿಕೆ,ಅನಿತಾ ಕುಮಾರಸ್ವಾಮಿಗೆ ಪಾಠ! ವಿಡಿಯೋ ವೈರಲ್​​ - ETV Bharath

ಪಕ್ಕದ ಕ್ಷೇತ್ರಗಳ ಜನಪ್ರತಿನಿಧಿಗಳನ್ನು ನೋಡಿ ಕಲಿಯಿರಿ ಎಂದು ಆಕ್ರೋಶಭರಿತವಾಗಿ ಮುಖ್ಯಮಂತ್ರಿ ಹೆಚ್​ಡಿಕೆ ಹಾಗೂ ಶಾಸಕಿ‌ ಅನಿತಾ ಕುಮಾರಸ್ವಾಮಿ ಅವರಿಗೆ ಕುಟುಕಿದ್ದು ಜನಗಳಿಂದ ಆಯ್ಕೆಯಾಗಿದ್ದೀರಿ, ಜನರಿಗೆ ಸಹಾಯ ಮಾಡಿ ಎಂದು ಮನವಿ ಮಾಡಿದ್ದಾರೆ.

ವೈರಲ್​ ಆದ ವಿಡಿಯೋ

By

Published : Jun 15, 2019, 12:00 AM IST

ರಾಮನಗರ: ಜೆಡಿಎಸ್ ಕಾರ್ಯಕರ್ತ ಮುಖ್ಯಮಂತ್ರಿ ಹೆಚ್​.ಡಿ.ಕುಮಾರಸ್ವಾಮಿ ಹಾಗೂ ಶಾಸಕಿ ಅನಿತಾಕುಮಾರಸ್ವಾಮಿ ಅವರಿಗೆ ರಾಮನಗರ ಜಿಲ್ಲೆಯ ಅಭಿವೃದ್ಧಿಗೆ ಸಂಬಂಧಿಸಿದಂತೆ ಕಿವಿಮಾತು ಹೇಳಿರುವ ವಿಡಿಯೋ ಸಾಮಾಜಿಕ‌ ಜಾಲತಾಣಗಳಲ್ಲಿ‌ ವೈರಲ್‌ ಆಗಿದೆ.

ರಾಮನಗರ ಜಿಲ್ಲೆಯಲ್ಲಿ ಯಾವ ಕೆಲಸ ಕಾರ್ಯಗಳು ನಡೆಯುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿ ವಿಡಿಯೋ ಮಾಡಿರುವ ಪಕ್ಷದ ಕಾರ್ಯಕರ್ತ ಸುರೇಶ್ ತನ್ನ ಮನದ ಇಂಗಿತವನ್ನು ಹೊರ ಹಾಕಿದ್ದಾರೆ.

ವೈರಲ್​ ಆದ ವಿಡಿಯೋ

ವಿಡಿಯೋದಲ್ಲಿ ಏನಿದೆ:

ತಾಲೂಕು ಕಚೇರಿ ಸೇರಿದಂತೆ ಯಾವ ಇಲಾಖೆಗಳಲ್ಲೂ ಕೆಲಸ ನಡೆಯುತ್ತಿಲ್ಲ. ಕಚೇರಿಯಲ್ಲಿ ನೂರಾರು ಸಮಸ್ಯೆಗಳಿವೆ. ಸಾರ್ವಜನಿಕರು ನಿತ್ಯ ತಮ್ಮ ಕೆಲಸಗಳಿಗಾಗಿ ಅಲೆಯುತ್ತಿದ್ದಾರೆ. ಅವರ ಸಮಸ್ಯೆಗಳನ್ನು ಈ ಕೂಡಲೇ ಆಲಿಸಿ, ಅವುಗಳಿಗೆ ಪರಿಹಾರ ನೀಡಿ ಎಂದು ಮನವಿ ಮಾಡಿದ್ದಾರೆ.

ಕಾಣದ ಕೈಗಳಿಂದ ರಾಮನಗರ‌ ನರಳುತ್ತಿದೆ ಎಂದು ರಾಮನಗರದ ರಾಯರದೊಡ್ಡಿ ನಿವಾಸಿ ಸುರೇಶ್ ಎಂಬುವರು ಫೇಸ್​ಬುಕ್​ ಲೈವ್​​ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪಕ್ಕದ ಕ್ಷೇತ್ರಗಳ ಜನಪ್ರತಿನಿಧಿಗಳನ್ನು ನೋಡಿ ಕಲಿಯಿರಿ ಎಂದು ಕುಮಾರಸ್ವಾಮಿ ಹಾಗೂ ‌ಅನಿತಾ ಕುಮಾರಸ್ವಾಮಿ ಅವರಿಗೆ ಕುಟುಕಿರುವ ಅವರು, ಜನಗಳಿಂದ ಆಯ್ಕೆಯಾಗಿದ್ದೀರಿ, ಜನರಿಗೆ ಸಹಾಯ ಮಾಡಿ ಎಂದು ಮನವಿ ಮಾಡಿದ್ದಾರೆ.

ABOUT THE AUTHOR

...view details