ಕರ್ನಾಟಕ

karnataka

ETV Bharat / state

ಚನ್ನಪಟ್ಟಣದ ಗೌಡಗೆರೆಯಲ್ಲಿ ಬೃಹತ್​ ಗಾತ್ರದ ಚಾಮುಂಡೇಶ್ವರಿ ವಿಗ್ರಹ ಪ್ರತಿಷ್ಠಾಪನೆ - ಚನ್ನಪಟ್ಟಣದ ಗೌಡಗೆರೆ ಗ್ರಾಮದಲ್ಲಿ ಅತಿ ದೊಡ್ಡ ವಿಗ್ರಹ ಸ್ಥಾಪನೆ

ರಾಮನಗರ ಜಿಲ್ಲೆಯ ಚನ್ನಪಟ್ಟಣದ ಗೌಡಗೆರೆ ಗ್ರಾಮದಲ್ಲಿ 60 ಅಡಿ ಎತ್ತರದ ವಿಶ್ವದ ಅತಿ ಎತ್ತರದ ಚಾಮುಂಡೇಶ್ವರಿ ವಿಗ್ರಹವನ್ನು ಪ್ರತಿಷ್ಠಾಪನೆ ಮಾಡಲಾಗಿದೆ.

Largest Chamundeshwari Devi idol installation in Channarayapatna
ಚನ್ನಪಟ್ಟಣದ ಗೌಡಗೆರೆಯಲ್ಲಿ ಬೃಹತ್​ ಗಾತ್ರದ ಶ್ರೀಚಾಮುಂಡೇಶ್ವರಿ ವಿಗ್ರಹ ಪ್ರತಿಷ್ಠಾಪನೆ

By

Published : Aug 8, 2021, 4:02 PM IST

ರಾಮನಗರ:ಜಿಲ್ಲೆಯ ಚನ್ನಪಟ್ಟಣದ ಗೌಡಗೆರೆ ಗ್ರಾಮದಲ್ಲಿ 60 ಅಡಿ ಎತ್ತರದ ವಿಶ್ವದ ಅತಿ ಎತ್ತರದ ಪಂಚಲೋಹದ ಚಾಮುಂಡೇಶ್ವರಿ ವಿಗ್ರಹವನ್ನು ಪ್ರತಿಷ್ಠಾಪನೆ ಮಾಡಲಾಯಿತು.

ಚನ್ನಪಟ್ಟಣದ ಗೌಡಗೆರೆಯಲ್ಲಿ ಬೃಹತ್​ ಗಾತ್ರದ ಶ್ರೀಚಾಮುಂಡೇಶ್ವರಿ ವಿಗ್ರಹ ಪ್ರತಿಷ್ಠಾಪನೆ

ದೇಗುಲದ ಇತಿಹಾಸ:

ಚನ್ನಪಟ್ಟಣ ತಾಲೂಕಿನ ಧಾರ್ಮಿಕ ಕ್ಷೇತ್ರವಾದ ಗೌಡಗೆರೆ ಗ್ರಾಮದಲ್ಲಿ ಈ ಬೃಹತ್ ವಿಗ್ರಹ ಪ್ರತಿಷ್ಠಾಪನೆಯಾಗಿದೆ. ಈ ಮೂಲಕ ಬೊಂಬೆಗಳ ನಿರ್ಮಾಣ ಕಾರ್ಯದಲ್ಲಿ ಈಗಾಗಲೇ ವಿಶ್ವಪ್ರಸಿದ್ಧಿ ಪಡೆದಿರುವ ಬೊಂಬೆನಗರಿಗೆ ಮತ್ತೊಂದು ಗರಿ ಮೂಡಿದೆ. ಇದು ದೇಶದಲ್ಲಿಯೇ ಮೊದಲ 18 ಭುಜದ ಪಂಚಲೋಹ ವಿಗ್ರಹವೂ ಹೌದು. ಈ ದೇಗುಲಕ್ಕೆ ರಾಜ್ಯ ಮಾತ್ರವಲ್ಲದೆ ಹೊರ ದೇಶಗಳಿಂದಲೂ ಭಕ್ತರು ಆಗಮಿಸುತ್ತಾರೆ.

ಮುಸ್ಲಿಂ ಕಲಾವಿದರಿಂದ ರಚಿತವಾದ ವಿಗ್ರಹ:

35 ಸಾವಿರ ಕೆ.ಜಿ ತೂಕದ ಚಿನ್ನ, ಬೆಳ್ಳಿ, ಹಿತ್ತಾಳೆ, ಕಂಚು ಹಾಗು ತಾಮ್ರ ಸೇರಿದಂತೆ ಪಂಚಲೋಹಗಳಿಂದ ತಯಾರಾಗಿರುವ ವಿಗ್ರಹವನ್ನು ಮುಸ್ಲಿಂ ಸಮುದಾಯದ 20 ಜನರು ಕಳೆದ ಮೂರು ವರ್ಷಗಳಲ್ಲಿ ತಯಾರು ಮಾಡಿದ್ದಾರೆ. ವಿಗ್ರಹ ತಯಾರಿಗೆ ಸುಮಾರು 3 ವರ್ಷಗಳ ಕಾಲ ಸಮಯ ಹಿಡಿದಿದೆ. 18 ಭುಜಗಳುಳ್ಳ ಈ ಮೂರ್ತಿ ನೋಡಲು ಅದ್ಭುತವಾಗಿದೆ.

ಇದನ್ನೂಓದಿ: ಸಂಪುಟ ದರ್ಜೆ ಸ್ಥಾನಮಾನ ಹಿಂಪಡೆಯುವಂತೆ ಬೊಮ್ಮಾಯಿಗೆ ಬಿಎಸ್​​ವೈ ಪತ್ರ

ಗೌಡಗೆರೆ ದೇವಾಲಯಕ್ಕೆ ನೂರಾರು ವರ್ಷದ ಇತಿಹಾಸವೂ ಇದೆ. ಅದರಲ್ಲೂ ಮಕ್ಕಳಿಲ್ಲದವರು ಇಲ್ಲಿ ಬಂದು ತಾಯಿಯ ದರ್ಶನ ಪಡೆದರೆ ಇಷ್ಟಾರ್ಥಗಳು ಸಿದ್ಧಿಸುತ್ತವೆ ಎಂಬ ನಂಬಿಕೆ ಜನರಲ್ಲಿದೆ.

For All Latest Updates

ABOUT THE AUTHOR

...view details