ಕರ್ನಾಟಕ

karnataka

ETV Bharat / state

ಟೊಯೊಟಾದಿಂದ ಅಮಾನತುಗೊಂಡಿರುವ ಸಿಬ್ಬಂದಿಯನ್ನು ಮತ್ತೆ ಕೆಲಸಕ್ಕೆ ತೆಗೆದುಕೊಳ್ಳಲು ಮನವಿ: ಹೆಬ್ಬಾರ್ - Toyota Kirloskar Company

ಬಿಡದಿಯಲ್ಲಿರುವ ಟಯೊಟಾ ಕಿರ್ಲೋಸ್ಕರ್ ಕಂಪನಿ ಮ್ಯಾನೇಜ್‌ಮೆಂಟ್ ಮತ್ತು ಕಾರ್ಮಿಕರ ಯೂನಿಯನ್ ಜೊತೆ ಸಭೆ ನಡೆಸಿ, ಕಾರ್ಖಾನೆಯಿಂದ ಅಮಾನತುಗೊಂಡಿರುವ 70 ಸಿಬ್ಬಂದಿಯನ್ನು ಪುನಃ ಕೆಲಸಕ್ಕೆ ಪಡೆದುಕೊಳ್ಳುವಂತೆ ಮನವಿ ಮಾಡಲಾಗಿದೆ ಎಂದು ಸಚಿವ ಶಿವರಾಮ ಹೆಬ್ಬಾರ್ ತಿಳಿಸಿದ್ದಾರೆ.

labor-minister-sivarama-hebbar-meeting-with-toyota-kirloskar-company-management
ಟೊಯೋಟಾದಿಂದ ಅಮಾನತುಗೊಂಡಿರುವ ಸಿಬ್ಬಂದಿಯನ್ನು ಪುನಃ ಕೆಲಸಕ್ಕೆ ತೆಗೆದುಕೊಳ್ಳಲು ಮನವಿ: ಹೆಬ್ಬಾರ್

By

Published : Feb 4, 2021, 7:58 PM IST

ರಾಮನಗರ: ಟಯೊಟಾ ಕಿಲೋಸ್ಕರ್ ಕಾರ್ಖಾನೆಯಿಂದ ಅಮಾನತುಗೊಂಡಿರುವ 70 ಕಾರ್ಮಿಕರಿಗೆ ಕ್ಷಮೆ ನೀಡಿ, ಅವರನ್ನು ಪುನಃ ಕೆಲಸಕ್ಕೆ ತೆಗೆದುಕೊಳ್ಳುವಂತೆ ಮ್ಯಾನೇಜ್‌ಮೆಂಟ್ ಅವರಿಗೆ ವಿನಂತಿ ಮಾಡಲಾಗಿದೆ ಎಂದು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ತಿಳಿಸಿದ್ದಾರೆ.

ಸಚಿವ ಶಿವರಾಮ ಹೆಬ್ಬಾರ್

ಇಂದು ಬಿಡದಿಯಲ್ಲಿರುವ ಟಯೊಟಾ ಕಿರ್ಲೋಸ್ಕರ್ ಕಂಪನಿಗೆ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳೊಂದಿಗೆ ಭೇಟಿ ನೀಡಿ ಕಾರ್ಮಿಕರ ಯೂನಿಯನ್ ಹಾಗೂ ಮ್ಯಾನೇಜ್‌ಮೆಂಟ್ ಅವರೊಂದಿಗೆ ಸಭೆ ನಡೆಸಿದರು.

ಬಳಿಕ ಮಾತನಾಡಿದ ಅವರು, ಕೈಗಾರಿಕಾ ಇಲಾಖೆಯು, ಕೈಗಾರಿಕೆಗಳಿಗೆ ಪರವಾನಗಿ ನೀಡುವ ಸಂದರ್ಭದಲ್ಲಿ ತನ್ನ ಸಿಬ್ಬಂದಿಯ ಮೇಲೆ ಕ್ರಮ ಕೈಗೊಳ್ಳುವ ಅಧಿಕಾರವನ್ನು ನ್ಯಾಯಬದ್ಧವಾಗಿ ನೀಡಿದೆ. ಆದ್ದರಿಂದ ಅಮಾನತುಪಡಿಸಿದ ಸಿಬ್ಬಂದಿಯನ್ನು ಪುನಃ ಕೆಲಸಕ್ಕೆ ಪಡೆದುಕೊಳ್ಳುವಂತೆ ಮನವಿ ಮಾಡಲಾಗಿದೆ.

ಆಲೋಚನೆ ಮಾಡಿ ತೀರ್ಮಾನ ಕೈಗೊಳ್ಳುವವರೇ ನಾಯಕರಾಗುತ್ತಾರೆ. ಇದನ್ನು ಕಾರ್ಮಿಕ ಯೂನಿಯನ್ ಮುಖಂಡರು ರೂಢಿಸಿಕೊಳ್ಳಬೇಕು. ಒಳ್ಳೆಯ ಕಾರ್ಖಾನೆಯಲ್ಲಿ ಉದ್ಯೋಗ ಪಡೆದುಕೊಳ್ಳುವುದು ಕಷ್ಟಕರವಾಗಿರುತ್ತದೆ. ಅದನ್ನು ಉಳಿಸಿಕೊಳ್ಳಬೇಕು ಎಂದರು.

ಕಾರ್ಮಿಕರು 86 ದಿನಗಳಿಂದ ಹೋರಾಟ ನಡೆಸುತ್ತಿದ್ದಾರೆ. ಇದನ್ನು ಪರಿಹರಿಸಲು ಮ್ಯಾನೇಜ್‌ಮೆಂಟ್, ಕಾರ್ಮಿಕರ ಯೂನಿಯನ್ ಹಾಗೂ ಅಧಿಕಾರಿಗಳೊಂದಿಗೆ 12 ಸಭೆಗಳನ್ನು ನಡೆಸಲಾಗಿದೆ. ಇಂದು ಮ್ಯಾನೇಜ್‌ಮೆಂಟ್ ಅವರೊಂದಿಗೆ ನಡೆಸಿದ ಚರ್ಚೆ ಹಾಗೂ ಕಾರ್ಮಿಕರ ತೊಂದರೆಗಳನ್ನು ಮಾನ್ಯ ಮುಖ್ಯಮಂತ್ರಿಗಳಿಗೆ ತಿಳಿಸಲಾಗುವುದು ಎಂದರು.

ಓದಿ:ಮನೆ ಮಾಲೀಕನ ಮೇಲಿನ ದ್ವೇಷಕ್ಕೆ ಬಾಡಿಗೆದಾರನ ಬೈಕ್​ಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು

ಇನ್ನು, ಕಾರ್ಮಿಕ ಇಲಾಖೆ ಇರುವುದು ಕಾರ್ಮಿಕರ ರಕ್ಷಣೆಗಾಗಿ, ಕಾರ್ಮಿಕರ ಹಕ್ಕುಗಳಿಗೆ ತೊಂದರೆ ಬಂದರೆ ಅವುಗಳನ್ನು ಪರಿಹರಿಸಲು ಪ್ರಯತ್ನಿಸಲಾಗುವುದು. ಮೈಸೂರಿನಲ್ಲಿ ಮುಚ್ಚಲಾದಂತಹ ರೀಡ್ ಎಂಡ್ ಟೈಲರ್ ಕಾರ್ಖಾನೆ ಹಾಗೂ ಏಷಿಯನ್ ಪೇಂಟ್ಸ್ ಕಾರ್ಖಾನೆಯನ್ನು ಚರ್ಚೆ ನಡೆಸಿ ಪುನಾರಂಭ ಮಾಡಲಾಗಿದೆ. ಅದೇ ರೀತಿ ಇಲ್ಲಿಯ ಸಮಸ್ಯೆಯು ಪರಿಹಾರವಾಗಿ ಸುಖಾಂತ್ಯವಾಗಲಿ ಎಂದು ಶುಭ ಹಾರೈಸಿದರು.

ABOUT THE AUTHOR

...view details