ರಾಮನಗರ : ಕೊರೊನಾ ಭೀತಿಯಿಂದ ದೇಶವ್ಯಾಪಿ ಲಾಕ್ಡೌನ್ ನಡೆಯುತ್ತಿದ್ದು, ವೈರಸ್ ತಡೆಗೆ ಹಳ್ಳಿ ಜನರು ಮುಂದಾಗಿದ್ದಾರೆ. ಕನಕಪುರ ತಾಲೂಕಿನ ಕುರುಬರಹಳ್ಳಿ ಗ್ರಾಮಸ್ಥರು, ಗ್ರಾಮದ ರಸ್ತೆಗಳನ್ನು ಬಂದ್ ಮಾಡಿದ್ದಾರೆ. ತಮ್ಮ ಹಳ್ಳಿಗೆ ಹೊರಗಿನಿಂದ ಯಾರೂ ಕಾಲಿಡದಂತೆ ಸುರಕ್ಷತೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದಾರೆ.
'ಗ್ರಾಮಕ್ಕೆ ಯಾರೂ ಬರಬೇಡಿ, ಗ್ರಾಮದಿಂದ ಯಾರೂ ಹೊರ ಹೋಗಬೇಡಿ' - ರಾಮನಗರದ ಕನಕಪುರ ತಾಲೂಕಿನ ಕುರುಬರಹಳ್ಳಿ ಗ್ರಾಮ
ಕನಕಪುರ ತಾಲೂಕಿನ ಕುರುಬರಹಳ್ಳಿ ಗ್ರಾಮಸ್ಥರು, ಗ್ರಾಮದ ರಸ್ತೆಗಳನ್ನು ಬಂದ್ ಮಾಡಿದ್ದಾರೆ.
ಗ್ರಾಮದ ರಸ್ತೆಗಳನ್ನು ಬಂದ್ ಮಾಡಿದ ಕುರುಬರಹಳ್ಳಿ ಜನರು
ಕೊರೊನಾ ಹರಡುವುದನ್ನು ತಡೆಯಲು ದಿಟ್ಟ ಕ್ರಮಕ್ಕೆ ಗ್ರಾಮಸ್ಥರು ಮುಂದಾಗಿದ್ದು, ಸರ್ಕಾರದ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದಾರೆ. ಗ್ರಾಮಕ್ಕೆ ಯಾರೂ ಬರಬಾರದು, ಗ್ರಾಮದಿಂದ ಯಾರೂ ಹೊರ ಹೋಗಬಾರದು ಎಂದು ನಿರ್ಧರಿಸಿ, ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಎಲ್ಲಾ ರಸ್ತೆಗಳನ್ನು ಸಿಮೆಂಟ್ ಇಟ್ಟಿಗೆಗಳಿಂದ ಮುಚ್ಚಿದ್ದಾರೆ.
TAGGED:
ಕೊರೊನಾ ವೈರಸ್ ಭೀತಿ