ಕರ್ನಾಟಕ

karnataka

ETV Bharat / state

ಬೆಂಗಳೂರು ಮೈಸೂರು ಹೆದ್ದಾರಿ ಅವೈಜ್ಞಾನಿಕ ಕಾಮಗಾರಿ.. ಕೇಂದ್ರ ಸಚಿವ ಗಡ್ಕರಿ ಭೇಟಿಗೆ ಹೆಚ್​ಡಿಕೆ ಸಜ್ಜು - ಬೆಂಗಳೂರು ಮೈಸೂರು ಹೆದ್ದಾರಿ ಅವೈಜ್ಞಾನಿಕ ಕಾಮಗಾರಿ

ಬೆಂಗಳೂರು ಮೈಸೂರು ಹೆದ್ದಾರಿ ನಿರ್ಮಾಣದಲ್ಲಿ ಹಲವಾರು ಅವೈಜ್ಞಾನಿಕ ಕಾಮಗಾರಿಗಳು ನಡೆದಿವೆ. ಈ ಕುರಿತು ನಿತಿನ್​ ಗಡ್ಕರಿಯವರನ್ನು ಭೇಟಿ ಮಾಡಿ ಸಮಸ್ಯೆ ಬಗ್ಗೆ ತಿಳಿಸಲಾಗುವುದು ಎಂದು ಕುಮಾರಸ್ವಾಮಿ ಹೇಳಿದರು.

R_kn_rmn_03_27082022_hdk_imp_news_KA10051
ಹೆಚ್​.ಡಿ ಕುಮಾರಸ್ವಾಮಿ

By

Published : Aug 27, 2022, 8:10 PM IST

ರಾಮನಗರ:ಚನ್ನಪಟ್ಟಣ ತಾಲ್ಲೂಕಿನ ಮಳೆಹಾನಿ ಪ್ರದೇಶಕ್ಕೆ ಮಾಜಿ ಮುಖ್ಯಮಂತ್ರಿ ಹೆಚ್‌.ಡಿ. ಕುಮಾರಸ್ವಾಮಿ ಭೇಟಿ ನೀಡಿ ನಿರಾಶ್ರಿತರಿಗೆ ಸಾಂತ್ವನ ಹೇಳಿದರು.

ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಜನರ ಕಷ್ಟ ಸುಖ ಆಲಿಸಿದರು. ನಂತರ ಸಂತ್ರಸ್ತರ ಅಹವಾಲು ಸ್ವೀಕರಿಸಿದ ಕುಮಾರಸ್ವಾಮಿ, ಅಧಿಕಾರಿಗಳಿಂದ ಮಳೆಹಾನಿ ಬಗ್ಗೆ ಮಾಹಿತಿ ಪಡೆದುಕೊಂಡು ಕೂಡಲೇ ಅಗತ್ಯ ಕ್ರಮಕ್ಕೆ ಸೂಚಿಸಿದರು. ಜಿಲ್ಲಾಧಿಕಾರಿಗಳ ಜೊತೆಗೂ ಮಾತುಕಥೆ ನಡೆಸಿದ ಅವರು, ಶೀಘ್ರ ಪರಿಹಾರ ನೀಡುವಂತೆ ಮನವಿ ಮಾಡಿದರು.

ಬಳಿಕ ಮಾತನಾಡಿದ ಅವರು, ಬೆಂಗಳೂರು ಮೈಸೂರು ಹೆದ್ದಾರಿ ನಿರ್ಮಾಣದಲ್ಲಿ ಹಲವಾರು ಅವೈಜ್ಞಾನಿಕ ಕಾಮಗಾರಿಗಳು ನಡೆದಿವೆ. ನಾನು ಸಿಎಂ ಆಗಿದ್ದಾಗ ಈ ಒಂದು ಯೋಜನೆ ತ್ವರಿತ ಗತಿಯಲ್ಲಿ ಆಗಬೇಕೆಂದು ಸಭೆಗಳನ್ನ ನಡೆಸಿದ್ದೆ. ಕೇಂದ್ರ ಸರ್ಕಾರದ ಮಟ್ಟದಲ್ಲೇ ತಪ್ಪುಗಳನ್ನ ಸರಿಪಡಿಸುವ ನಿರ್ಧಾರವಾಗಬೇಕು.

ಬೆಂಗಳೂರು ಮೈಸೂರು ಹೆದ್ದಾರಿ ಕೇಂದ್ರ ಸರ್ಕಾರದ ಯೋಜನೆಯಾಗಿದ್ದು, ಟೆಕ್ನಿಕಲ್ ಪ್ರಾಬ್ಲಮ್ ಸರಿಪಡಿಸಿಕೊಳ್ಳಲು ಕೇಂದ್ರ ಅನುಮತಿ ಬೇಕಿದೆ. ಈ ಬಗ್ಗೆ ಖಡಾಖಂಡಿತವಾಗಿ ಕೇಂದ್ರದ ಗಮನ ಸೆಳೆಯುತ್ತೇನೆ. ನಾನು ಸೆಪ್ಟೆಂಬರ್ 5ನೇ ತಾರೀಖು ದೆಹಲಿಗೆ ಹೋಗುತ್ತಿದ್ದೇನೆ. ಕೇಂದ್ರ ಸಚಿವ ನಿತಿನ್ ಗಡ್ಕರಿಯವರನ್ನು ಭೇಟಿ ಮಾಡಿ ಸಮಸ್ಯೆ ಬಗ್ಗೆ ತಿಳಿಸುತ್ತೇನೆ ಎಂದರು.

ಹೆಚ್​.ಡಿ ಕುಮಾರಸ್ವಾಮಿ

ಹಾಗೆಯೇ ಕಳೆದ ಒಂದು ತಿಂಗಳಿನಿಂದ ಮಳೆ ನೀರು ನಿಂತು ಅನಾಹುತಗಳಾಗಿವೆ. ಇದಕ್ಕೆ ಅವೈಜ್ಞಾನಿಕವಾದ ಹೆದ್ದಾರಿ ಕಾಮಗಾರಿಯೇ ಕಾರಣವಾಗಿದೆ. ಇದಲ್ಲದೆ ಸರ್ವೀಸ್ ರಸ್ತೆಯಲ್ಲಿ ನೀರು ಸರಾಗವಾಗಿ ಹರಿಯುತ್ತಿಲ್ಲ. ಅಂಡರ್ ಪಾಸ್ ಗಳಲ್ಲಿ ಮೂರು, ನಾಲ್ಕು ಅಡಿ ಮಳೆ ನೀರು ನಿಂತು ತೊಂದರೆಯಾಗುತ್ತಿದೆ. ಇವೆಲ್ಲಾ ಸಮಸ್ಯೆ ಆಗೋದಕ್ಕೆ ಹೆದ್ದಾರಿ ಅವೈಜ್ಞಾನಿಕ ಕಾಮಗಾರಿ ಒಂದು ಭಾಗವಾಗಿದೆ ಎಂದರು.

ಅದರ ಜೊತೆಗೆ ಚನ್ನಪಟ್ಟಣದಲ್ಲಿ ಯುಜಿಡಿ ಕಾಮಗಾರಿ ಸಹ ಆಗಬೇಕಿದೆ. ಯುಜಿಡಿ ಕಾಮಗಾರಿ ಅನುಮತಿಗಾಗಿ ಸರ್ಕಾರಕ್ಕೆ ಕೋರಿದ್ದೇನೆ. ಅನುಮತಿ ಪಡೆಯಲು ನಿರಂತರವಾಗಿ ನಾನು ಸಹ ಪ್ರಯತ್ನ ಮಾಡುತ್ತಿದ್ದೇನೆ ಈಗಾಗಲೇ ೧೩೮ ಕೋಟಿ. ರೂ ಯುಜಿಡಿ ಕಾಮಗಾರಿ ನಡೆಸಲು ಸರ್ಕಾರದ ಮುಂದೆ ಪ್ರಸ್ತಾಪವಿದ್ದು, ಶೀರ್ಘದಲ್ಲೇ ಸಿಎಂ ಜೊತೆ ಮಾತನಾಡುವುದಾಗಿ ಇದೇ ವೇಳೆ ಹೆಚ್​ಡಿಕೆ ತಿಳಿಸಿದರು.

ಮಳೆ ಸಂತ್ರಸ್ತರಿಗೆ ಪರಿಹಾರ ನೀಡುವ ವಿಚಾರ: ತೀವ್ರ ಮಳೆಯಿಂದ ಸಂತ್ರಸ್ತರಿಗೆ ಪರಿಹಾರ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ಬೆಳಗ್ಗೆಯಿಂದಲೂ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿದ್ದೇನೆ. ಜಿಲ್ಲಾಧಿಕಾರಿಗಳೊಂದಿಗೆ ದೂರವಾಣಿ ಮೂಲಕ ಮಾತಾಡಿದ್ದೇನೆ. ತಕ್ಷಣವೇ ಹತ್ತು ಸಾವಿರ ರೂಪಾಯಿ ಪರಿಹಾರ ನೀಡಲು ಸೂಚನೆ ನೀಡಿದ್ದೇನೆ. ಹತ್ತು ಸಾವಿರ ಚೆಕ್ ಅನ್ನು ಇಂದೇ ತಲುಪಿಸುವುದಾಗಿ ಹೇಳಿದ್ದಾರೆ. ಹಾಗೂ ಕುರಿ, ಕೋಳಿ, ಬೆಳೆ ಹಾನಿಗಳಿಗೂ ಪರಿಹಾರ ನೀಡಲು ಸೂಚಿಸಿದ್ದೇನೆ. ಎಲ್ಲಾ ಮಾಹಿತಿಯನ್ನ ಪಡೆದು ಅಧಿಕಾರಿಗಳು ಪರಿಹಾರ ಒದಗಿಸಲಿದ್ದು, ಸರ್ಕಾರಿ ಪರಿಹಾರದ ಜೊತೆಗೆ ಜೆಡಿಎಸ್ ಪಕ್ಷದ ವತಿಯಿಂದ ಪರಿಹಾರ ನೀಡಲಾಗುವುದು. ಹಾಗೆಯೇ ಗಾಂಧಿ ಗ್ರಾಮ ತಿಟ್ಟಮಾರನಹಳ್ಳಿ ಸೇರಿದಂತೆ ಹಲವು ನಿರಾಶ್ರಿತರಿಗೆ ಫುಡ್ ಕಿಟ್ ವಿತರಣೆ ಮಾಡಲಾಗುವುದು ಎಂದು ಹೇಳಿದರು.

ಇದನ್ನೂ ಓದಿ:ಶಿಕ್ಷಣ ಸಚಿವ ನಾಗೇಶ್ ವಜಾಗೆ ಆಗ್ರಹಿಸಿ ಪ್ರಧಾನಿಗೆ ಮತ್ತೊಮ್ಮೆ ಪತ್ರ.. ಲೋಕೇಶ್ ತಾಳಿಕಟ್ಟೆ

ABOUT THE AUTHOR

...view details