ಕರ್ನಾಟಕ

karnataka

ETV Bharat / state

ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಮಾಡೋದಾದರೆ‌ ಮಾಡಿ: HDK - channapattana

ಸರ್ಕಾರಕ್ಕೆ ವಿರೋಧ ಪಕ್ಷ ಉತ್ತಮ ಸಲಹೆಗಳನ್ನ ನೀಡಲಿ. ಎರಡು ಪಕ್ಷಗಳು ಉತ್ತಮ ಕೆಲಸ ಮಾಡಿದಾಗ ರಾಜ್ಯದ ಜನತೆಗೆ ಏನಾದರೂ ಉಪಯೋಗವಾಗುತ್ತದೆ ಎಂದು ರಾಮನಗರದ ಚನ್ನಪಟ್ಟಣದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ.

ಸಿಎಂ ಬದಲಾವಣೆ ಕುರಿತು ಕುಮಾರಸ್ವಾಮಿ ಮಾತು
ಸಿಎಂ ಬದಲಾವಣೆ ಕುರಿತು ಕುಮಾರಸ್ವಾಮಿ ಮಾತು

By

Published : Jun 21, 2021, 5:25 PM IST

ರಾಮನಗರ: ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಮಾಡೋದಾದರೆ‌ ಮಾಡಿ. ಮುಂದುವರೆಸೋದಾದ್ರೆ ಮುಂದುವರೆಸಿ. ಸಿಎಂ ಬದಲಾವಣೆ ಬಗ್ಗೆ ಒಂದು ಸ್ಪಷ್ಟನೆ ನೀಡಿ ಎಂದು ಬಿಜೆಪಿ ಹೈಕಮಾಂಡ್​ಗೆ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಆಗ್ರಹಿಸಿದ್ದಾರೆ.

ಸಿಎಂ ಬದಲಾವಣೆ ಕುರಿತು ಕುಮಾರಸ್ವಾಮಿ ಮಾತು

ಚನ್ನಪಟ್ಟಣದಲ್ಲಿ ಕೊವೀಡ್ 19 ವಾಕ್ಸಿನೇಷನ್ ಸ್ಥಳ ಪರಿಶೀಲಿಸಿ ಮಾತನಾಡಿದ ಕುಮಾರಸ್ವಾಮಿ, ಈ ಸಂದರ್ಭದಲ್ಲಿ ಯಾರೂ ಸಹ ರಾಜಕೀಯ ಮಾಡಬಾರದು. ಇನ್ನೆರಡು ವರ್ಷದಲ್ಲಿ ಚುನಾವಣೆ ಬರಲಿದೆ. ರಾಜಕೀಯ ಬಿಟ್ಟು ಜನರ ಸೇವೆ ಮಾಡೋಣ ಎಂದರು.

ನಾನು ಕಾಂಗ್ರೆಸ್​, ಬಿಜೆಪಿಯವರಿಂದ ಪಾಠ ಕಲಿಯಬೇಕಿಲ್ಲ. ಕೆಲವರು ಸರ್ಕಾರದ ಹಣ ಬಳಸಿಕೊಂಡು ಫುಡ್ ಕಿಟ್ ಕೊಟ್ಟಿದ್ದಾರೆ. ಸರ್ಕಾರದ ಹಣಕ್ಕೆ ಇವರ ಫೋಟೋ ಹಾಕಿಕೊಂಡಿದ್ದಾರೆ ನಿಮ್ಮ ಸಂಸದರು. ಇವರಿಗೆ ಏನ್ ಕಡಿಮೆಯಾಗಿದೆ ಎಂದು ಸಂಸದ ಡಿ.ಕೆ.ಸುರೇಶ್​ಗೆ ಕುಮಾರಸ್ವಾಮಿ ಟಾಂಗ್ ನೀಡಿದ್ದಾರೆ.

ಓದಿ:ಸ್ಪಾ ಹೆಸರಲ್ಲಿ ವೇಶ್ಯಾವಾಟಿಕೆ: ನಾಲ್ವರು ಯುವತಿಯರ ರಕ್ಷಣೆ, ಇಬ್ಬರು ಬಂಧನ

ABOUT THE AUTHOR

...view details